ಕಲರ್ಸ್ ಕನ್ನಡದಲ್ಲಿ ಸಾಲು ಸಾಲು ಹೊಸ ಸೀರಿಯಲ್ಸ್… ಇದೀಗ ಗೃಹ ಪ್ರವೇಶಕ್ಕೆ ಸಜ್ಜು!
ಕಲರ್ಸ್ ಕನ್ನಡದಲ್ಲಿ ಸಾಲು, ಸಾಲು ಹೊಸ ಸೀರಿಯಲ್ ಗಳ ಪ್ರೋಮೋ ಬಿಡುಗಡೆಯಾಗುತ್ತಿದೆ. ಕೆಲದಿನಗಳ ಹಿಂದಷ್ಟೇ ಗಂಡ ಹೆಂಡ್ತಿ ಬಗ್ಗೆ ತಿಳಿಸಿದ್ದ, ಕಲರ್ಸ್ ಕನ್ನಡದಲ್ಲಿ ಇದೀಗ ಮತ್ತೊಂದು ಹೊಸ ಸೀರಿಯಲ್ ಬಗ್ಗೆ ಮಾಹಿತಿ ನೀಡುತ್ತಿದೆ.
ವಿನೂತನ ಕತೆಗಳ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಕಲರ್ಸ್ ಕನ್ನಡ (Colors Kannada) ಚಾನೆಲ್ ಎರಡು ವಾರಗಳ ಹಿಂದಷ್ಟೇ ಅಂತರಪಟ ಸೀರಿಯಲ್ ಪ್ರಸಾರ ಆರಂಭಿಸಿತ್ತು. ಈ ಸೀರಿಯಲ್ ಸದ್ಯ ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ. ಇದೀಗ ಮತ್ತೆರಡು ಸೀರಿಯಲ್ ಆರಂಭವಾಗುವ ಸೂಚನೆ ದೊರೆತಿದೆ.
ಕಲರ್ಸ್ ಕನ್ನಡದಲ್ಲಿ ಸಾಲು ಸಾಲು ಹೊಸ ಸೀರಿಯಲ್ಸ್ ಪ್ರೋಮೋ ಬಿಡುಗಡೆಯಾಗುತ್ತಿದ್ದು, ಕೆಲ ದಿನಗಳ ಹಿಂದಷ್ಟೇ ಗಂಡ ಹೆಂಡ್ತಿ ಅನ್ನೋ ಸೀರಿಯಲ್ ಪ್ರೋಮೋ ರಿಲೀಸ್ ಆಗಿತ್ತು, ಇದೀಗ ಮತ್ತೊಂದು ಹೊಸ ಸೀರಿಯಲ್ ಗೃಹಪ್ರವೇಶದ (Gruha Pravesha) ಪ್ರೋಮೋ ರಿಲೀಸ್ ಆಗಿದೆ.
ಗೃಹಪ್ರವೇಶ ಸೀರಿಯಲ್ ಪ್ರೋಮೋ ಚೆನ್ನಾಗಿ ಮೂಡಿ ಬಂದಿದ್ದು, ಪ್ರೇಕ್ಷಕರು ಅದನ್ನು ಇಷ್ಟಪಟ್ಟಿದ್ದಾರೆ. ಬಾಲ್ಯದಲ್ಲೇ ತಾಯಿ ಮತ್ತು ಮಗಳನ್ನು ತ್ಯಜಿಸಿ ದೂರ ಹೋಗಿರುವ ತಂದೆಯ ಹುಡುಕಾಟಕ್ಕೆ ಹೊರಟ ಮಗಳ ಕಥೆ ಇದಾಗಿದೆ.
'ಗೃಹ ಪ್ರವೇಶ' ಧಾರಾವಾಹಿಯಲ್ಲಿ ಸ್ಪಂದನಾ ಸೋಮಣ್ಣ ಅವರು ನಾಯಕಿಯಾಗಿ ನಟಿಸಲಿದ್ದಾರೆ. ಇವರಿಗೆ ನಟನೆ ಹೊಸದೇನಲ್ಲ, ಇವರು ಈಗಾಗಲೇ ಮರೀಚಿ, ಶಟ್ ದ ನಾಯ್ಸ್ ಎನ್ನುವ ಚಿತ್ರಗಳಲ್ಲೂ, ಕನ್ನಡ, ತೆಲುಗು ಭಾಷೆಯ ಧಾರಾವಾಹಿಗಳಲ್ಲೂ (serial) ನಟಿಸಿದ್ದಾರೆ.
ಪ್ರೋಮೊದಲ್ಲಿ (serial promo) ತೋರಿಸಿರುವಂತೆ ಅಪ್ಪ ಸಾವನ್ನಪ್ಪಿದ್ದಾನೆ ಎಂದು ನಂಬಿ ಬೆಳೆದ ಹುಡುಗಿಗೆ, ಕೊನೆಗೊಂದು ದಿನ ಅಪ್ಪ ಸತ್ತಿಲ್ಲ, ಬಿಟ್ಟು ಹೋಗಿದ್ದಾನೆ ಎಂದು ಗೊತ್ತಾಗಿ, ಯಾವತ್ತೂ ನೋಡಿಯೇ ಇರದ ಅಪ್ಪನನ್ನು ಮತ್ತೆ ಮನೆಗೆ ಕರೆದುಕೊಂಡು ಬರಲು ಹೊರಟ ಕತೆಯಾಗಿದೆ.
ಗ್ರಾಮದಲ್ಲಿ ನಡೆಯುವ ಕತೆ ಇದಾಗಿದೆ, ಎಲ್ಲರೂ ಅಮ್ಮ ಎನ್ನುವಾಗ, ಅಪ್ಪನನ್ನು ಕಳೆದುಕೊಂಡ ಹುಡುಗಿ, ಅಪ್ಪನಿಗಾಗಿ ಹಂಬಲಿಸುತ್ತಾಳೆ. ಊರವರು ನಾನು ನಿನ್ನ ಅಪ್ಪ ಆಗ್ಲಾ ಎಂದಾಗ ಬೇಸರದಿಂದ ಕುದಿಯುತ್ತಾಳೆ. ಆದರೆ 25 ವರ್ಷಗಳ ಬಳಿಕ ಅಪ್ಪ ಸತ್ತಿಲ್ಲ ಎನ್ನುವ ವಿಷ್ಯ ಊರ ಜನರಿಂದ ತಿಳಿಯುತ್ತೆ.
ಅಪ್ಪ ಸತ್ತಿಲ್ಲ ಓಡಿ ಹೋಗಿದ್ದಾನೆ ಎಂದು ತಿಳಿದಾಗ ಎಂದೂ ನೋಡಿರದ ಅಪ್ಪನನ್ನು ಮನೆಗೆ ಕರೆದುಕೊಂಡು ಬಂದೇ ಬರುತ್ತೇನೆ ಎಂದು, ಎಂದೂ ನೋಡಿದರ ಸಿಟಿ ಕಡೆಗೆ ಒಬ್ಬಳೇ ಧೈರ್ಯದಿಂದ ಹೊರಡುತ್ತಾಳೆ. ಆಕೆ ಅಪ್ಪನನ್ನು ಕರೆ ತರುತ್ತಾಳಾ? ಸೀರಿಯಲ್ ಕತೆ ಏನಾಗಲಿದೆ ಕಾದು ನೋಡಬೇಕು.