ತಾಯಿಯಾಗುತ್ತಿರುವ ಸಂಭ್ರಮದಲ್ಲಿ ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ
ನನ್ನರಸಿ ರಾಧೆ ಧಾರಾವಾಹಿಯಲ್ಲಿ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ನಟಿ ಕೌಸ್ತುಭ ಮಣಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಸೀರಿಯಲ್ ನೀವು ನೋಡಿದ್ದರೆ ಕೌಸ್ತುಭ ಮಣಿ ಖಂಡಿತಾ ನೆನಪಿರಬೇಕು ಅಲ್ವಾ? ಕೌಸ್ತುಭ ಮಣಿ (Kaustubha Mani) ಅಂದ್ರೆ ಗೊತ್ತಾಗಿರಲ್ಲ, ಇಂಚರಾ ಅಂದ್ರೆ ಗೊತ್ತಾಗಬಹುದು.
ಹೌದು ನನ್ನರಸಿ ರಾಧೆ (Nannarasi Radhe) ಧಾರಾವಾಹಿಯ ಇಂಚರಾ ಹಾಗೂ ಅಗಸ್ತ್ಯ ಜೋಡಿಯನ್ನು ಇಷ್ಟಪಡದವರು ಯಾರೂ ಇಲ್ಲ. ಈ ಮುದ್ದಾದ ಜೋಡಿಗೆ ಫಾನ್ಸ್ ಕೂಡ ಸಿಕ್ಕಾಪಟ್ಟೆ ಇತ್ತು. ನನ್ನರಸಿ ರಾಧೆ ಬಳಿಕ ಕೌಸ್ತುಭ ಮಣಿ ತಮಿಳಿ-ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾದರು.
ಕೌಸ್ತುಭ ಮಣಿ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿ ಶಂಕರ (Gouri Shankara) ಧಾರಾವಾಹಿಯಲ್ಲೂ ಸಹ ಕೌಸ್ತುಭ ಮಣಿ ಆರಂಭದಲ್ಲಿ ನಟಿಸಿದ್ದರು, ಆದರೆ ಅವರಿಗೆ ಮದುವೆ ಫಿಕ್ಸ್ ಆಗಿದ್ದರಿಂದ ಸೀರಿಯಲ್ ನಿಂದ ಹೊರ ನಡೆದಿದ್ದರು.
ಕೌಸ್ತುಭ ಮಣಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಸಿದ್ಧಾಂತ ಸತೀಶ್ ಎಂಬುವವರ ಜೊತೆ ಅದ್ಧೂರಿ ಸಮಾರಂಭದಲ್ಲಿ ಮದುವೆಯಾದರು. ನಂತರ ಕೌಸ್ತುಭ ನಟನೆಯಿಂದ ದೂರವೇ ಉಳಿದಿದ್ದರು. ಗಂಡನ ಜೊತೆಗಿನ ಟ್ರಾವೆಲ್, ಮಾಡೆಲಿಂಗ್ ಫೋಟೊಗಳನ್ನು ಮಾತ್ರ ಅವರು ಶೇರ್ ಮಾಡುತ್ತಿದ್ದರು.
ಇದೀಗ ಕೌಸ್ತುಭ ಮಣಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಮೊದಲನೇ ವರ್ಷದ ವೆಡ್ಡಿಂಗ್ ಆನಿವರ್ಸರಿ (wedding anniversary) ಸಂಭ್ರಮಿಸಿದ ಕೌಸ್ತುಭ, ಇದೀಗ ತಾವು ತಾಯಿಯಾಗುತ್ತಿರುವ ಸಂಭ್ರಮದ ವಿಷ್ಯವನ್ನು ಸಹ ಹಂಚಿಕೊಂಡಿದ್ದಾರೆ.
ಕೌಸ್ತುಭ ನೀಡಿರುವ ಗುಡ್ ನ್ಯೂಸ್ ಕೇಳಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಜೊತೆಗೆ ನಟಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ನಟಿಯ ಸೀಮಂತ ಶಾಸ್ತ್ರ ಕೂಡ ನಡೆದಿದೆ ಎನ್ನುವ ಮಾಹಿತಿಯೂ ಆದರೆ, ಆದರೆ ಯಾವುದರ ಕುರಿತು ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಇನ್ನು ಕೌಸ್ತುಭ ಮಣಿ ಮದುವೆಗೂ ಮುನ್ನ ಡಾ. ಶಿವರಾಜ್ ಕುಮಾರ್ (Shivarajkumar), ರಾಜ್ ಬಿ ಶೆಟ್ಟಿ, ಉಪೇಂದ್ರ ನಟಿಸಿರುವ ಹಾಗೂ ಅರ್ಜುನ್ ಜನ್ಯ ನಿರ್ದೇಶನ ಮಾಡಿರುವ 45 ಸಿನಿಮಾದಲ್ಲೂ ಕೌಸ್ತುಭ ಮಣಿ ನಟಿಸಿದ್ದಾರೆ.