- Home
- Entertainment
- TV Talk
- ನಾಗಿಣಿ 2 ಸೀರಿಯಲ್’ಗೆ ಐದು ವರ್ಷ…. ನಾಯಕಿಯಾಗಿದ್ದ ಹಳೆ ನೆನಪುಗಳನ್ನು ಬಿಚ್ಚಿಟ್ಟ ನಮ್ರತಾ ಗೌಡ
ನಾಗಿಣಿ 2 ಸೀರಿಯಲ್’ಗೆ ಐದು ವರ್ಷ…. ನಾಯಕಿಯಾಗಿದ್ದ ಹಳೆ ನೆನಪುಗಳನ್ನು ಬಿಚ್ಚಿಟ್ಟ ನಮ್ರತಾ ಗೌಡ
ನಾಗಿಣಿ 2 ಸೀರಿಯಲ್ ಗೆ ಐದು ವರ್ಷಗಳು ತುಂಬಿದ್ದು, ನಾಯಕಿ ನಮ್ರತಾ ಗೌಡ ಹಳೆಯ ನೆನಪುಗಳನ್ನು ಮತ್ತೆ ನೆನಪಿಸಿಕೊಂಡು ಹಳೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ನಾಗಿಣಿ ಸೀರಿಯಲ್ ಎಷ್ಟು ಕ್ರೇಜ್ ಹುಟ್ಟಿಸಿತ್ತೋ, ಅಷ್ಟೇ ಕ್ರೇಜ್ ಹುಟ್ಟಿಸಿತ್ತು ನಾಗಿಣಿ 2 ಸೀರಿಯಲ್ ಕೂಡ. ದೀಪಿಕಾ ದಾಸ್ ರಂತೆ, ನಮೃತಾ ಗೌಡ ಕೂಡ ನಾಗಿಣಿಯಾಗಿ ಮೋಡಿ ಮಾಡಿದ್ದರು.
ನಾಗಿಣಿ 2 ಝೀ ಕನ್ನಡದಲ್ಲಿ ಪ್ರಸಾರವಾಗಿದ್ದ ನಾಗಲೋಕದ ಕಥೆಯನ್ನು ಹೊಂದಿದ ಧಾರಾವಾಹಿ ಆಗಿದ್ದು, ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಮ್ರತಾ ಗೌಡ ಶಿವಾನಿ ಪಾತ್ರದಲ್ಲಿ ನಟಿಸಿದ್ದರು.
ಈ ಸೀರಿಯಲ್ ಬಳಿಕ ನಮ್ರತಾ ಗೌಡಗೆ (Namratha Gowda)ಬೇರೆ ಯಾವುದೇ ಸೀರಿಯಲ್ ಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಬಳಿಕ ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಸುವ ಮೂಲಕ ಸುದ್ದಿಯಾಗಿದ್ದರು.
ಇದೀಗ ನಮ್ರತಾ ಗೌಡ, ತಾವು ನಾಯಕಿಯಾಗಿದ್ದ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದ್ದಾರೆ. ನಾಗಿಣಿ 2 ಫೋಟೋಗಳನ್ನು ನಟಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಾಗಿಣಿ 2 ಸೀರಿಯಲ್ ಪ್ರಸಾರವಾಗಿ ಇದೀಗ 5 ವರ್ಷಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ನಟಿ ಸೀರಿಯಲ್ ನ ಮೇಕಿಂಗ್ ಫೋಟೋಗಳನ್ನು (serial making photos) ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ಹಳೆದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ನಾಗಿಣಿ 2 ಸೀರಿಯಲ್ ನಲ್ಲಿ ನಡೆದಂತಹ ವಿವಿಧ ಸನ್ನಿವೇಶದ ಮೇಕಿಂಗ್ ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಅಶ್ವಿನಿ ನಕ್ಷತ್ರ ಖ್ಯಾತಿಯ ಜಯರಾಂ ಕಾರ್ತಿಕ್ ನಾಗರಾಜನಾಗಿ ನಟಿಸಿದ್ದರು, ಆ ಫೋಟೊವನ್ನು ಸಹ ನಟಿ ಹಂಚಿಕೊಂಡಿದ್ದಾರೆ.
ಈ ಧಾರಾವಾಹಿಯಲ್ಲಿ ಮೋಹನ್ ಅವರು ವಿಲನ್ ಪಾತ್ರದಲ್ಲಿ ನಟಿಸಿದ್ದರು, ನಿನಾದ್ ನಾಯಕನ ಪಾತ್ರದಲ್ಲಿ ನಟಿಸಿದ್ದರು. ವಿಭಿನ್ನ ಕಥೆಯನ್ನು ಹೊಂದಿದ್ದ ಈ ಧಾರಾವಾಹಿಯನ್ನು ಜನರು ತುಂಬಾನೆ ಇಷ್ಟಪಟ್ಟಿದ್ದರು.
ನಾಗಲೋಕದಲ್ಲಿ ದುಷ್ಟರ ಬಲೆಗೆ ಸಿಕ್ಕು ಸಾವನ್ನಪ್ಪಿದ ನಾಗರಾಜ, ಪುನರ್ಜನ್ಮ ಪಡೆದು ಭೂಮಿಗೆ ಮರಳುತ್ತಾನೆ. ಅದೇ ನಾಗನನ್ನು ಹುಡುಕಿ ಹೊರಡುವ ನಾಗಿಣಿಯಾಗಿ ನಮ್ರತಾ ಗೌಡ ನಟಿಸಿದ್ದರು.
ಈ ಸೀರಿಯಲ್ ಬಳಿಕ ನಮ್ರತಾ ರನ್ನು ಮತ್ತೆ ತೆರೆಯ ಮೇಲೆ ನೋಡಲು ಅಭಿಮಾನಿಗಳು ಬಯಸಿದ್ದರು, ಆದರೆ ನಟಿ ಮಾತ್ರ ನಟನೆಯಿಂದ ದೂರವೇ ಉಳಿದಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಮ್ರತಾ ಗೌಡ, ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಶುಭ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ, ಆ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಾರೆ.
ಇದೀಗ ನಾಗಿಣಿ 2 ನೆನಪಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, ನಾಗಿಣಿ 2 ಸೀರಿಯಲ್ ಮಿಸ್ ಮಾಡೀಕೊಳ್ಳುತ್ತಿದ್ದಾರೆ. ಜೊತೆಗೆ ಶಿವಾನಿ ಮತ್ತು ತ್ರಿಶೂಲ್ ಜೋಡಿಯನ್ನು ಸಹ ಅಭಿಮಾನಿಗಳು ಮಿಸ್ ಮಾಡುತ್ತಿದ್ದಾರೆ. ಮತ್ತೆ ನಾಗಿಣಿಯಾಗಿ ಕಿರುತೆರೆಗೆ ಎಂಟ್ರಿ ಕೊಡಿ ಎಂದು ಕೇಳುತ್ತಿದ್ದಾರೆ ಜನ.