ಈ ಫೋಟೋದಲ್ಲಿರುವ ಹುಡುಗ ಯಾರು ಅಂತ ಗೊತ್ತಾಯ್ತಾ? ಖ್ಯಾತ ಸೀರಿಯಲ್ ನಟ ಇವರು!
Serial Actor Childhood Photo: ಕಿರುತೆರೆ ನಟನ ಬಾಲ್ಯದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧಾರಾವಾಹಿಯಲ್ಲಿ ಈ ನಟ ನಟಿಸುತ್ತಿದ್ದಾರೆ. ಫೋಟೋದಲ್ಲಿರುವ ಹುಡುಗ ಯಾರೆಂದು ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ.

ಬಾಲ್ಯದ ಫೋಟೋ
ಇಂದಿನ ಮಕ್ಕಳು, ನಾಳೆಯ ಪ್ರಜೆಗಳು ಎಂಬ ಮಾತಿದೆ. ಕೆಲವೊಮ್ಮೆ ಬಾಲ್ಯದ ಫೋಟೋಗಳನ್ನು ನೋಡಿ, ಇದು ನಾವೇನಾ ಅನ್ನುವಷ್ಟರಷ್ಟು ಬದಲಾಗಿರುತ್ತವೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಕಿರುತೆರೆ ನಟನ ಬಾಲ್ಯದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಿಗ್ ಸ್ಮೈಲ್ ನೀಡಿರುವ ಈ ಹುಡುಗ
ಕನ್ನಡಕ ಹಾಕಿ, ಬಿಗ್ ಸ್ಮೈಲ್ ನೀಡಿರುವ ಈ ಹುಡುಗ ಇಂದು ಕನ್ನಡದ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಈ ಫೋಟೋ ಯಾರದ್ದು ಅಂತ ತಿಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಹಾಗಾದ್ರೆ ಯಾರು ಈ ಕಿರುತೆರೆ ನಟ ಎಂದು ನೋಡೋಣ ಬನ್ನಿ.
ನಾ ನಿನ್ನ ಬಿಡಲಾರೆ
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ 'ನಾ ನಿನ್ನ ಬಿಡಲಾರೆ' ಸೀರಿಯಲ್ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರವಾಗುತ್ತದೆ. ಈ ಧಾರಾವಾಹಿಯಲ್ಲಿ ಮೇಲಿರುವ ಹುಡುಗ ವಿಶೇಷ ಪಾತಗ್ರವೊಂದರಲ್ಲಿ ನಟಿಸಿದ್ದಾರೆ. ಫೋಟೋದಲ್ಲಿರುವ ಹುಡುಗನ ಹೆಸರು ಪಾರ್ಥ್ ಮದ್ಯಾಳ್ಕರ್.
ಪಾರ್ಥ್ ಮದ್ಯಾಳ್ಕರ್
ಪಾರ್ಥ್ ಮದ್ಯಾಳ್ಕರ್ ಅಂದ್ರೆ ಖಂಡಿತ ನಿಮಗೆ ಗೊತ್ತಿರಲ್ಲ. ಪಾರ್ಥ್ ಮದ್ಯಾಳ್ಕರ್ (Paarth Madyalkar) 'ನಾ ನಿನ್ನ ಬಿಡಲಾರೆ' ಧಾರಾವಾಹಿಯ 'ತರುಣ್' ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಾರ್ಥ್ ಮದ್ಯಾಳ್ಕರ್ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನೆಗೆಟಿವ್ ರೋಲ್
ತರುಣ್ ಪಾತ್ರ ನೆಗೆಟಿವ್ ರೋಲ್ ಆಗಿದ್ದು, ಶರತ್ ಕುಟುಂಬದ ಆಸ್ತಿಯನ್ನು ತನ್ನದಾಗಿಸಿಕೊಳ್ಳಬೇಕೆಂಬ ದುರಾಸೆಯನ್ನು ಹೊಂದಿದ್ದಾನೆ. ಇದಕ್ಕಾಗಿ ಶರತ್ ತಂಗಿ ಶಾನ್ವಿಯನ್ನು ಪ್ರೀತಿಸುವ ನಾಟಕ ಮಾಡುತ್ತಿದ್ದಾನೆ. ಶಾನ್ವಿಯನ್ನು ಮದುವೆಯಾದ್ರೆ ಇಡೀ ಆಸ್ತಿ ತನ್ನದಾಗುತ್ತೆ ಎಂಬ ಲೆಕ್ಕಾಚಾರದಲ್ಲಿ ತರುಣ್ ಒಳ್ಳೆಯವನಂತೆ ಆಕ್ಟ್ ಮಾಡುತ್ತಿದ್ದಾನೆ.
ಪಾರ್ಥ್ ಮದ್ಯಾಳ್ಕರ್
ಪಾರ್ಥ್ ಮದ್ಯಾಳ್ಕರ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ರೀಲ್ಸ್ ಮಾಡುತ್ತಿರುತ್ತಾರೆ. ಧಾರಾವಾಹಿಯ ಕಲಾವಿದರ ಜೊತೆಯಲ್ಲಿ ಡ್ಯಾನ್ಸ್ ರೀಲ್ಸ್ ಮಾಡಿಕೊಂಡು ಅಪ್ಲೋಡ್ ಮಾಡುತ್ತಿರುತ್ತಾರೆ. ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ಪಾರ್ಥ್ ಮದ್ಯಾಳ್ಕರ್ ಮಿಂಚುತ್ತಿದ್ದಾರೆ.