MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮೈಸೂರು ದಸರಾದಲ್ಲಿ ವಿನಯ್ ಗೌಡಗೆ ಮುಜುಗರ ತಂದ ಘಟನೆ; ಬೆನ್ನು ಬಿಡದ ಸರ್ಕಲ್ ಸೈಡ್!

ಮೈಸೂರು ದಸರಾದಲ್ಲಿ ವಿನಯ್ ಗೌಡಗೆ ಮುಜುಗರ ತಂದ ಘಟನೆ; ಬೆನ್ನು ಬಿಡದ ಸರ್ಕಲ್ ಸೈಡ್!

ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಿದ್ದ ನಟ ವಿನಯ್ ಗೌಡ ಅವರನ್ನು ಜನರು ಬಿಗ್‌ಬಾಸ್ ಕಾರ್ಯಕ್ರಮದ 'ಸರ್ಕಲ್' ಹೇಳಿಕೆ ನೆನಪಿಸಿ ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪರ-ವಿರೋಧ ಕಮೆಂಟ್ ಮಾಡುತ್ತಿದ್ದಾರೆ.

1 Min read
Author : Mahmad Rafik
Published : Oct 22 2026, 02:20 PM IST
Share this Photo Gallery
  • FB
  • TW
  • Linkdin
  • Whatsapp
15
ದಸರಾಗೆ ಬಂದ ವಿನಯ್ ಗೌಡಗೆ ಮುಜುಗರ
Image Credit : Social media

ದಸರಾಗೆ ಬಂದ ವಿನಯ್ ಗೌಡಗೆ ಮುಜುಗರ

ಮೈಸೂರು ಜಂಬೂಸವಾರಿಯಲ್ಲಿ ಈ ಬಾರಿ ಕನ್ನಡ ಕಲಾವಿದರು ಭಾಗಿಯಾಗಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ನೋಡುತ್ತಿದ್ದಂತೆ ಅವರ ಹೆಸರನ್ನು ಪ್ರೀತಿಯಿಂದ ಕೂಗುತ್ತಾರೆ. ಆದ್ರೆ ಬಿಗ್‌ಬಾಸ್ ಮಾಜಿ ಸ್ಪರ್ಧಿ, ನಟ ವಿನಯ್‌ ಗೌಡರನ್ನ ಅವರ ಹೇಳಿಕೆಯನ್ನು ಬಳಸಿ ಕೂಗಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬಿಗ್‌ಬಾಸ್ ಅಗ್ನಿಪರೀಕ್ಷೆ
Image Credit : Colors Kannada

ಬಿಗ್‌ಬಾಸ್ ಅಗ್ನಿಪರೀಕ್ಷೆ

ಹೌದು, ಈ ಬಾರಿ ಬಿಗ್‌ಬಾಸ್ ಸೀಸನ್ ಆರಂಭಕ್ಕೂ ಮುನ್ನ ಅಗ್ನಿಪರೀಕ್ಷೆ ಎಂದು ಶೋ ನಡೆಸಲಾಗಿತ್ತು. ಈ ಶೋಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ನಟಿಯರಾದ ಶೃತಿ, ಸಂಗೀತಾ ಶೃಂಗೇರಿ, ಗಾಯಕ ಚಂದನ್ ಶೆಟ್ಟಿ ಮತ್ತು ನಟ ವಿನಯ್ ಗೌಡ ತೀರ್ಪುಗಾರರಾಗಿದ್ದರು. ಮತ್ತೋರ್ವ ಸ್ಪರ್ಧಿ ನಿರಂಜನ್ ದೇಶಪಾಂಡೆ ಕಾರ್ಯಕ್ರಮದ ನಿರೂಪಕರಾಗಿದ್ದರು.

Related Articles

Related image1
Vinay Gowda: ಸರ್ಕಲ್ ಗೆ ಎಷ್ಟು ಸೈಡ್ಸ್ ? ಉತ್ತರ ನೀಡಿ ಟ್ರೋಲರ್ಸ್ ಬಾಯಿಗೆ ಆಹಾರವಾದ ವಿನಯ್ ಗೌಡ
Related image2
ನೀವು ಇಲ್ಲಿ ಇರೋದಕ್ಕೆ ಲಾಯಕ್ಕೇ ಇಲ್ಲ: ವಿನಯ್​ ಗೌಡ ಫೋಟೋಗೇ ಬೆಂಕಿ ಇಟ್ಟ Bigg Boss ಆಕಾಂಕ್ಷಿ
35
ಸರ್ಕಲ್‌ಗೆ ಎಷ್ಟು ಸೈಡ್?
Image Credit : VInay Gowda Instgram

ಸರ್ಕಲ್‌ಗೆ ಎಷ್ಟು ಸೈಡ್?

ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರಿಗೆ ವಿನಯ್‌ ಗೌಡ, ಸರ್ಕಲ್‌ಗೆ ಎಷ್ಟು ಸೈಡ್ ಇರುತ್ತೆ ಎಂದು ಕೇಳುತ್ತಾರೆ. ವೃತ್ತಕ್ಕೆ ಯಾವುದೇ ಬದಿ ಇಲ್ಲ ಎಂದು ಸ್ಪರ್ಧಿ ಹೇಳುತ್ತಾರೆ. ಈ ವೇಳೆ ವಿನಯ್ ಗೌಡ, ಸರ್ಕಲ್‌ಗೆ ಎರಡು ಸೈಡ್ ಅಂತಾರೆ. ಈ ಒಂದು ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ವಿನಯ್ ಗೌಡ, ಸಾಮಾಜಕ ಜಾಲತಾಣದ ಮೂಲಕ ಸ್ಪಷ್ಟನೆಯನ್ನು ನೀಡಿದ್ದರು.

45
ವಿನಯ್ ಗೌಡ ಟ್ರೋಲ್
Image Credit : VInay Gowda Instgram

ವಿನಯ್ ಗೌಡ ಟ್ರೋಲ್

ಇನ್ನು ಬಿಗ್‌ಬಾಸ್ ಸೀಸನ್ 13ರ ವೇದಿಕೆ ಮೇಲೆ ಸುದೀಪ್ ಸಹ, ಸರ್ಕಲ್ ವಿಚಾರವನ್ನು ಹೇಳಿ ವಿನಯ್ ಗೌಡ ಅವರನ್ನು ತಮಾಷೆ ಮಾಡಿದ್ದರು. ಇದೀಗ ಜನರು ಈ ಸರ್ಕಲ್ ವಿಷಯವನ್ನು ಇನ್ನು ನೆನಪಿನಲ್ಲಿಟ್ಟಿಕೊಂಡಿದ್ದು, ವಿನಯ್‌ ಗೌಡ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಜಂಬೂಸವಾರಿಯಲ್ಲಿ ಭಾಗಿಯಾಗಲು ಬಂದ ವಿನಯ್ ಗೌಡರನ್ನು ಜನರು ನೇರವಾಗಿಯೇ ಟ್ರೋಲ್ ಮಾಡಿದ್ದಾರೆ.

55
ಟ್ರೋಲ್ ವಿಡಿಯೋಗೆ ಜನರು ಹೇಳಿದ್ದೇನು?
Image Credit : VInay Gowda Instgram

ಟ್ರೋಲ್ ವಿಡಿಯೋಗೆ ಜನರು ಹೇಳಿದ್ದೇನು?

ಸದ್ಯ ಈ ಟ್ರೋಲ್ ವಿಡಿಯೋ ವೈರಲ್ ಆಗಿದ್ದು, ಜನರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡುತ್ತಿದ್ದಾರೆ. ಏನೋ ಅವತ್ತು ಬೈ ಮಿಸ್ಟೇಕ್ ಆಗಿ ಹೇಳಿದ್ದನ್ನ ಇಷ್ಟೊಂದು ಸೀರಿಯಸ್ಸಾಗಿ ತಗೊಳ್ಳೋದಾ ಜನಕ್ಕೆ ಯಾವಾಗ ಬುದ್ಧಿ ಬರುತ್ತೋ? Mysore circle inspector vinay ದಸರಾ ಉಸ್ತುವಾರಿ ಕೊಟ್ಟಿದ್ದಾರೆ. ಪಾಪ ಗುರು, ಸಣ್ಣ ಹುಡುಗರೂ ಸಹ ಬಿಡ್ತಿಲ್ಲ, ಓವರ್ ಆಕ್ಟಿಂಗ್ ಮಾಡಿದ್ರೆ ಹೀಗೆ ಆಗೋದು. ಗಣಿತದ ಪಿತಾಮಹ. ಹೋಗ್ಲಿ ಬಿಡ್ರೋ ಎಂಬತೆಲ್ಲಾ ಕಮೆಂಟ್‌ಗಳು ಬಂದಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
 

Latest Videos
Recommended Stories
Recommended image1
ಸೀಮಂತದ ಬಳಿಕ ಹಾಟ್​ ಲುಕ್​ನಲ್ಲಿ Karna Serial ನಿತ್ಯಾ: ನಟಿ ನಮ್ರತಾ ಗೌಡ ​ ಕ್ಯೂಟ್​ ಫೋಟೋಸ್​ ಇಲ್ಲಿವೆ
Recommended image2
'ಯಶ್‌ಗೆ ಆಗಲೇ ಆ ಕಿಚ್ಚಿತ್ತು' : ನಂದಗೋಕುಲ ಸೀರಿಯಲ್‌ನ ಸುಂದರ ನೆನಪು ಬಿಚ್ಚಿಟ್ಟ ನಟಿ ಲಕ್ಷ್ಮೀ ಸಿದ್ದಯ್ಯ
Recommended image3
ಇನ್ಮುಂದೈತೆ ಜೈದೇವ್‌-ಶಕುಂತಲಾಗೆ ಮಾರಿಹಬ್ಬ; ಇನ್ನೆಂದೆರಡು ಕೊಡು ಗೌತಮ್, ಕೆಡಿ ಶಾಕ್
Related Stories
Recommended image1
Vinay Gowda: ಸರ್ಕಲ್ ಗೆ ಎಷ್ಟು ಸೈಡ್ಸ್ ? ಉತ್ತರ ನೀಡಿ ಟ್ರೋಲರ್ಸ್ ಬಾಯಿಗೆ ಆಹಾರವಾದ ವಿನಯ್ ಗೌಡ
Recommended image2
ನೀವು ಇಲ್ಲಿ ಇರೋದಕ್ಕೆ ಲಾಯಕ್ಕೇ ಇಲ್ಲ: ವಿನಯ್​ ಗೌಡ ಫೋಟೋಗೇ ಬೆಂಕಿ ಇಟ್ಟ Bigg Boss ಆಕಾಂಕ್ಷಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved