- Home
- Entertainment
- TV Talk
- ಡಾಕ್ಟರ್ ಆಗೋ 'Muddu Sose'ಗೆ ತಾನು ಗರ್ಭಿಣಿ ಅಲ್ಲ ಅನ್ನೋದೆ ಗೊತ್ತಿಲ್ಲ... ತಲೆ ಚಚ್ಚಿಕೊಂಡ ವೀಕ್ಷಕರು
ಡಾಕ್ಟರ್ ಆಗೋ 'Muddu Sose'ಗೆ ತಾನು ಗರ್ಭಿಣಿ ಅಲ್ಲ ಅನ್ನೋದೆ ಗೊತ್ತಿಲ್ಲ... ತಲೆ ಚಚ್ಚಿಕೊಂಡ ವೀಕ್ಷಕರು
Muddu Sose Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮುದ್ದು ಸೊಸೆ’ ಧಾರಾವಾಹಿಯ ಕಥೇ ನೋಡಿ ವೀಕ್ಷಕರು ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಹೀಗೂ ಇರುತ್ತಾ ಎಂದು ಪ್ರಶ್ನೆ ಮಾಡ್ತಿದ್ದಾರೆ, ಅದಕ್ಕೆ ಕಾರಣ ಏನಂದ್ರೆ, ಮುದ್ದು ಸೊಸೆ ವಿದ್ಯಾಗೆ ತಾನು ಗರ್ಭಿಣಿ ಅಲ್ಲ ಅನ್ನೋದೆ ಗೊತ್ತಿಲ್ಲ.

ಮುದ್ದು ಸೊಸೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿಯನ್ನು ನೋಡುತ್ತಿರುವ ವೀಕ್ಷಕರಿಗೆ ಕಳೆದ ಕೆಲವು ದಿನಗಳಿಂದ ದೊಡ್ಡ ಸಂಶಯ ಕಾಡುತ್ತಿದೆ. ಯಾಕೆ ಈ ಥರ ಕಥೆ ಮಾಡ್ತಿದ್ದಾರೆ ಎನ್ನುವ ಪ್ರಶ್ನೆ ಪ್ರತಿಯೊಬ್ಬ ನೋಡುಗರನ್ನೂ ಕಾಡುತ್ತಿದೆ. ಅಷ್ಟಕ್ಕೂ ಅಲ್ಲಿ ಆಗಿರೋದು ಏನು?
ವಿದ್ಯಾ ಗರ್ಭಿಣಿ ಅಲ್ಲ
ಮುದ್ದು ಸೊಸೆ ಧಾರಾವಾಹಿಯಲ್ಲಿ ಕಳೆದ ಕೆಲವು ತಿಂಗಳಿಂದ ಸೊಸೆ ವಿದ್ಯಾ ಗರ್ಭಿಣಿ ಅನ್ನೋದು ಗೊತ್ತಾದ ಮೇಲೆ ಆಕೆಯನ್ನು ನಿಧಾನವಾಗಿ ಮನೆಮಂದಿ ಒಪ್ಪಿ ಮತ್ತೆ ಮನೆಗೆ ಬರುವಂತೆ ಮಾಡಿದ್ದಾರೆ. ಆದರೆ ಇಷ್ಟು ದಿನ ವಿದ್ಯಾ ತಾಯಿ ಎಲ್ಲರಿಗೂ ತಮ್ಮ ಮಗಳು ಗರ್ಭಿಣಿ ಎಂದು ಮೋಸ ಮಾಡಿದ್ದಳು. ಇದೀಗ ವೈದ್ಯರು ಚೆಕಪ್ ಮಾಡಿದ ಬಳಿಕ ವಿದ್ಯಾ ಗರ್ಭಿಣಿ ಅಲ್ಲ ಅನ್ನೋದು ಮನೆಮಂದಿಗೆ ತಿಳಿಯುವಂತಾಗಿದೆ.
ವೈದ್ಯಳಾಗುವ ಕನಸು ಕಾಣುವ ವಿದ್ಯಾ
ವಿದ್ಯಾಗೆ ಬಾಲ್ಯದಿಂದಲೂ ಚೆನ್ನಾಗಿ ವಿದ್ಯೆ ಕಲಿತು, ದೊಡ್ಡ ವೈದ್ಯಳಾಗಿ ಸಾಧನೆ ಮಾಡುವ ಕನಸು ಇದೆ. ಅದಕ್ಕಾಗಿ ತನ್ನ ಮದುವೆಯನ್ನು ಸಹ ಒಂದು ಬಾರಿ ನಿಲ್ಲುವಂತೆ ಮಾಡಿದ್ದಳು ವಿದ್ಯಾ. ಇದೀಗ ಮದುವೆಯಾಗಿ ಗಂಡನ ಮನೆಗೆ ಹೋದ ಬಳಿಕ, ಕದ್ದು ಮುಚ್ಚಿ ಓದಿ, ಪರೀಕ್ಷೆ ಬರೆಯೋದಕ್ಕೂ ಹೋಗಿದ್ದಳು, ಪರೀಕ್ಷೆಯನ್ನು ಬರೆಯುವ ಮೂಲಕ, ತಾನು ವೈದ್ಯೆಯಾಗುವ ಕನಸನ್ನು ನನಸು ಮಾಡಲು ಒಂದೊಂದೆ ಹೆಜ್ಜೆ ಮುಂದಿಡುತ್ತಿದ್ದಳು ವಿದ್ಯಾ.
ವೈದ್ಯೆಯಾಗುವವಳಿಕೆ ಪ್ರೆಗ್ನೆನ್ಸಿ ಬಗ್ಗೆ ಗೊತ್ತಿಲ್ವಾ?
ವಿದ್ಯಾ ತಂದೆ ತಾಯಿ, ಆಕೆ ಗರ್ಭಿಣಿ ಎಂದು ಸುಳ್ಳು ಹೇಳಿದ್ದು ಸರಿ, ಆದರೆ ವೈದ್ಯೆಯಾಗುವ ಕನಸು ಹೊತ್ತು ಎಕ್ಸಾಮ್ ಕೂಡ ಬರೆಯುತ್ತಿರುವ ವಿದ್ಯಾಗೆ ತಾನು ಗರ್ಭಿಣಿ ಅನ್ನೋದೆ ಗೊತ್ತಾಗಿಲ್ಲ ಅಂದ್ರೆ ಹೇಗೆ ಸಾಧ್ಯ? ಹಾಗಿದ್ರೆ ತಿಂಗಳು ತಿಂಗಳು ಆಗೋದು ಆಗ್ಲೇ ಬೇಕಲ್ವಾ? ಅದು ಆಗ್ಲಿಲ್ವಾ? ಏನು ಅಂತ ಕಥೆ ಬರೆಯುತ್ತಿದ್ದೀರಿ ಎಂದು ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ ಜನ.
ಮಾವನ ಕೋಪಕ್ಕೆ ಮತ್ತೆ ಗುರಿ
ಒಂದು ಸಲ ಮಾವನ ಕೋಪಕ್ಕೆ ಗುರಿಯಾಗಿದ್ದ ವಿದ್ಯಾ, ಇದೀಗ ಮತ್ತೆ ಮಾವನ ಕೋಪಕ್ಕೆ ಗುರಿಯಾಗಿದ್ದಾಳೆ. ಇನ್ನು ಜೀವಮಾನದಲ್ಲಿ ನಾವು ಇವಳ ಮುಖ ನೋಡೋದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಹೆಂಡ್ತಿ ಗರ್ಭಿಣಿ ಅಲ್ಲ ಎಂದು ತಿಳಿದು ಭದ್ರ ಸೇರಿ ಮನೆ ಮಂದಿ ಎಲ್ಲಾ ಶಾಕ್ ಆಗಿದ್ದಾರೆ. ಅಂದ್ರೆ ಶೀಘ್ರದಲ್ಲಿ ಮತ್ತೆ ವಿದ್ಯಾ ಮನೆ ಬಿಟ್ಟು ಹೋಗುವ ಸಮಯ ಹತ್ತಿರದಲ್ಲಿದೆ ಎಂದರ್ಥ.
ನಾಯಕಿಗೆ ಪ್ರತಿ ಬಾರಿ ಅವಮಾನ
ವೀಕ್ಷಕರು ಕಥೆ ನೋಡಿ ಬೇಸರ ವ್ಯಕ್ತಪಡಿಸಿದ್ದು, ಮುದ್ದು ಸೊಸೆ ಎಂದು ಧಾರಾವಾಹಿ ಹೆಸರು ಮಾತ್ರ, ಆದರೆ, ಇಲ್ಲಿ ಪದೇ ಪದೇ ಸೊಸೆಗೆ ಅವಮಾನ ಮಾಡುವ, ವಿದ್ಯಾಳನ್ನು ಬೀಳಿಸುವ ಕಥೆಯೇ ನಡೆಯುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

