ಮಿಥುನ ರಾಶಿ ಖ್ಯಾತಿಯ ನಟ ಯದು ಶ್ರೇಷ್ಠ ನಿಶ್ಚಿತಾರ್ಥ … ಫೋಟೊ ವೈರಲ್
ಮಿಥುನ ರಾಶಿ ಧಾರಾವಾಹಿಯಲ್ಲಿ ಸಮರ್ಥ್ ಪಾತ್ರದ ಮೂಲಕ ಮನಗೆದ್ದ ನಟ ಯದು ಶ್ರೇಷ್ಠ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಿಥುನ ರಾಶಿ (Mithuna Rashi) ಧಾರಾವಾಹಿ ಮಿಥುನ ರಾಶಿ ನೆನಪಿದ್ಯಾ? ಖಂಡಿತಾ ನೆನಪಿರುತ್ತೆ ಅಲ್ವಾ? ಆಟೋ ಡ್ರೈವರ್ ರಾಶಿ ಹಾಗೂ ಬ್ಯುಸಿನೆಸ್ ಮೆನ್ ಮಿಥುನ್ ಜೋಡಿಯ ಕಥೆ ಇದು.
ಈ ಸೀರಿಯಲ್ ಮುಗಿದು ಹಲವು ವರ್ಷಗಳೇ ಕಳೆದು ಹೋಗಿವೆ. ಸೀರಿಯಲ್ ತಾರೆಯರು ಸಹ ಬೇರೆ ಬೇರೆ ಭಾಷೆಗಳಲ್ಲಿ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಇಂದಿಗೂ ಮಿಥುನ ರಾಶಿ ಸೀರಿಯಲ್ ಹಾಗೂ ನಟರು ಎಲ್ಲರಿಗೂ ಚಿರಪರಿಚಿತ.
ಇದೀಗ ಮಿಥುನ ರಾಶಿ ಧಾರಾವಾಹಿಯಲ್ಲಿ ಸಮರ್ಥ್ ಪಾತ್ರದ ಮೂಲಕ ಗಮನ ಸೆಳೆದ ನಟ ಯದು ಶ್ರೇಷ್ಠ ಅವರು ನಿಶ್ಚಿತಾರ್ಥ (Yadhu Shestha Engagement) ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಇವರ ಎಂಗೇಜ್ ಮೆಂಟ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮಿಥುನ ರಾಶಿ ಧಾರಾವಾಹಿಯಲ್ಲಿ ಮಿಥುನ್ ನ ತಮ್ಮನ ಪಾತ್ರ ಸಮರ್ಥ್ ನದ್ದು, ಅಂದರೆ ಬಾಲ್ಯದಲ್ಲೇ ಕಳೆದು ಹೋಗಿರುವ ತಮ್ಮನ ಪಾತ್ರದಲ್ಲಿ ಯದು ನಟಿಸಿದ್ದರು. ಇವರ ಪಾತ್ರ ಜನರಿಗೆ ಸಿಕ್ಕಾಪಟ್ತೆ ಇಷ್ಟ ಆಗಿತ್ತು.
ರಾಶಿಯ ಅಕ್ಕ ಸುರಕ್ಷಾ, ಹಣಕ್ಕಾಗಿ ಏನು ಬೇಕಾದ್ರೂ ಮಾಡೋದಕ್ಕೆ ರೆಡಿ ಇರುವಂತವಳು. ಸಮರ್ಥ್ ನನ್ನು ಪ್ರೀತಿಸಿ, ಕೊನೆಗೆ ಹಣದ ಆಸೆಗಾಗಿ ಮಿಥುನ್ ನನ್ನು ಮದುವೆಯಾಗೋದಕ್ಕೆ ಓಕೆ ಹೇಳಿ, ಕೊನೆಗೆ ವಿಚಿತ್ರ ಸಂದರ್ಭಗಳೇ ಸೃಷ್ಟಿಯಾಗಿ ಸಮರ್ಥ್ ನನ್ನು ಮದುವೆಯಾಗುತ್ತಾಳೆ ಸುರಕ್ಷ.
ಈ ಧಾರಾವಾಹಿಯಲ್ಲಿ ಸಮರ್ಥ್ ನ ಮುಗ್ಧ ಪಾತ್ರವನ್ನು ಜನರು ಇಷ್ಟಪಟ್ಟಿದ್ದರು. ಸಮರ್ಥ್ ನ ನಡತೆ, ಒಳ್ಳೆಯತನ, ಪ್ರೀತಿ, ಸಹಾಯ ಮಾಡುವ ಗುಣ ಎಲ್ಲವನ್ನೂ ಜನ ಇಷ್ಟಪಟ್ಟಿದ್ದರು. ಅದಕ್ಕಾಗಿ ಇಂದಿಗೂ ಜನ ಯದು ಅವರನ್ನು ಮಿಥುನ ರಾಶಿಯ ಸಮರ್ಥ್ ಎಂದೇ ಗುರುತಿಸುತ್ತಾರೆ.
ಅಣ್ಣ ತಂಗಿ ಧಾರಾವಾಹಿಯಲ್ಲೂ (Anna Thangi Serial) ನಟಿಸಿದ್ದ ಯದು ಸದ್ಯ ನಟನೆಯಿಂದು ದೂರ ಉಳಿದಿದ್ದಾರೆ. ನಟನ ಎಂಗೇಜ್ ಮೆಂಟ್ ಫೋಟೊ ವೈರಲ್ ಆಗುತ್ತಿದೆ. ಹುಡುಗಿ ಯಾರು? ನಿಶ್ಚಿತಾರ್ಥ ಯಾವಾ ಆಯ್ತು? ಯಾವಾಗ ಮದುವೆ ಅನ್ನೋ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.