ವಿನಾಯಕ ಜೋಶಿಯ ಹೊಸ ವೆಬ್ ಸೀರೀಸ್ 'ಮೀಟರ್ ಹಾಕಿ ಪ್ಲೀಸ್'; ಇದು ಆಟೋ ಡ್ರೈವರ್‌ಗಳ ಕತೆ!
ಆಟೋ ಡ್ರೈವರ್‌ಗಳ ಕತೆ ಹೊಂದಿರುವ ವಿನೂತನ ಕಾರ್ಯಕ್ರಮ. ಮೀಟರ್ ಹಾಕಿ ಪ್ಲೀಸ್ ನೋಡೋಕೆ ರೆಡಿನಾ?
ನಟ, ನಿರೂಪಕ ವಿನಾಯಕ ಜೋಶಿ ಪರಿಕಲ್ಪನೆಯ ಹೊಸ ವೆಬ್ ಸೀರೀಸ್ ‘ಮೀಟರ್ ಹಾಕಿ ಪ್ಲೀಸ್’ ವಿನಾಯಕ ಜೋಶೀಲೇ ಯೂಟ್ಯೂಬ್‌ನಲ್ಲಿ ಮತ್ತು ಸ್ಪೋಟಿಫೈನಲ್ಲಿ ಪ್ರಸಾರ ಆರಂಭಿಸಿದೆ.
ಪ್ರತೀ ಸೋಮವಾರ ಈ ಸರಣಿಯ ಹೊಸ ಎಪಿಸೋಡ್‌ಗಳು ಪ್ರಸಾರ ಆಗಲಿವೆ. ಈಗಾಗಲೇ ಮೊದಲ ಎಪಿಸೋಡ್ ಪ್ರಸಾರ ಆಗುತ್ತಿದ್ದು, ಇಂಗ್ಲಿಷ್ ಸಬ್‌ಟೈಟಲ್ ಲಭ್ಯವಿದೆ. ಆಟೋ ಡ್ರೈವರ್‌ಗಳ ಸ್ಫೂರ್ತಿದಾಯಕ ಕತೆಗಳನ್ನು ಹೊಂದಿರುವ ವಿಶಿಷ್ಟಕಾರ್ಯಕ್ರಮ ಇದು.
ಈ ವೆಬ್ ಸೀರೀಸ್‌ನ ಬಿಡುಗಡೆ ಕಾರ್ಯಕ್ರಮಕ್ಕೆ ಗಂಧದಗುಡಿ ನಿರ್ದೇಶಕ ಅಮೋಘವರ್ಷ ಮತ್ತು ಧರ್ಮೇಂದ್ರ ಕುಮಾರ್ ಆಗಮಿಸಿ ತಂಡಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಆಟೋ ಚಾಲಕರು ಒಂದು ಎಪಿಸೋಡ್ ವೀಕ್ಷಿಸಿ ಸಂಭ್ರಮಿಸಿದರು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಚಾಲಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಕುರಿತು ಮಾತನಾಡಿದ ವಿನಾಯಕ ಜೋಶಿ, ‘ಆಟೋ ಚಾಲಕರು ಸಮಾಜದ ನೆರವಿಗೆ ನಿಲ್ಲುವವರು.
ಯಾರಿಗೆ ಕಷ್ಟಬಂದರೂ ಮೊದಲು ಮುಂದೆ ಬರುವವರು. ಯಾರಾದರೂ ರಸ್ತೆಯಲ್ಲಿ ಬಿದ್ದಿದ್ದರೆ ಅವರ ನೆರವಿಗೆ ಧಾವಿಸುವವರು. ಅವರ ಕುರಿತ ಕಾರ್ಯಕ್ರಮ ಮಾಡಬೇಕು ಎಂಬ ಉದ್ದೇಶದಿಂದ ಮಾಡಿದ ಕಾರ್ಯಕ್ರಮ.
ಇದುವರೆಗೂ ಅನೇಕ ಆಟೋ ಚಾಲಕರನ್ನು ಮಾತನಾಡಿಸಿ ಕಾರ್ಯಕ್ರಮ ರೂಪಿಸಿದ್ದೇವೆ. 25 ಜನರ ತಂಡದ ಪರಿಶ್ರಮದಿಂದ ಈ ಕಾರ್ಯಕ್ರಮ ಮೂಡಿಬಂದಿದೆ’ ಎಂದರು. ವೆಬ್ ಸೀರೀಸ್ ಪ್ರಾಯೋಜಕರಾದ ನಮ್ಮ ಯಾತ್ರಿ ತಂಡ, ವೆಬ್ ಸೀರೀಸ್ ತಂಡ ಕಾರ್ಯಕ್ರಮದಲ್ಲಿ ಹಾಜರಿತ್ತು.