- Home
- Entertainment
- TV Talk
- ಕನ್ನಡದ ಸಿಂಗರ್ ಬಾಳಲ್ಲಿ ಬಿರುಗಾಳಿ, ಪುಟ್ಟ ಮಗು ಜೊತೆ ಮನೆ ಬಿಟ್ಟಿದ್ಯಾಕೆ ಮಜಾ ಟಾಕೀಸ್ ಗಾಯಕಿ!
ಕನ್ನಡದ ಸಿಂಗರ್ ಬಾಳಲ್ಲಿ ಬಿರುಗಾಳಿ, ಪುಟ್ಟ ಮಗು ಜೊತೆ ಮನೆ ಬಿಟ್ಟಿದ್ಯಾಕೆ ಮಜಾ ಟಾಕೀಸ್ ಗಾಯಕಿ!
ನೋಡಿದರೆಯೇ ಏನೋ ಪಾಸಿಟಿವ್ ವೈಬ್ಸ್ ಸೃಷ್ಟಿಸುವ ಮಜಾ ಟಾಕೀಸ್ ಗಾಯಕಿಯ ಬಾಳು ಮಾತ್ರ ಬರೀ ಕಲ್ಲು-ಮುಳ್ಳಿನಿಂದಲೇ ಕೂಡಿತ್ತು. ಆದರೆ, ಇವರ ನಗೆ ಬಾಂಬ್ ನೋಡಿ ಎಷ್ಟೋ ಜನರು ತಮ್ಮ ನೋವು ಮರೆಯುತ್ತಾರೆ. ಅಂಥ ವ್ಯಕ್ತಿತ್ವ ಇರೋ ರೆಮೋ ನೋವಿನ ಕಥೆ ಇದು.

ಒರಿಜಿನಲ್ ಹೆಸರು ರೇಖಾ ಮೋಹನ್. ಆದರೆ, ರೆಮೋ ಎಂದೇ ಫೇಮಸ್. ಲೇಡಿ Rambo ರೀತಿ ಇರೋ ರೆಮೋ ಮಜಾ ಟಾಕೀಸ್ ವಿಶೇಷ ಆಕರ್ಷಣೆ. ಸೃಜನ್ ಲೋಕೇಶ್ ಸ್ಟೇಜ್ ಮೇಲೆ ಒಂದಾದ ಮೇಲೊಂದರಂತೆ ನಗೆ ಬಾಂಬ್ ಸಿಡಿಸುತ್ತಿದ್ದರೆ, ಈ ಹೆಣ್ಣು ಮಗಳು ಬ್ಯಾಕೆಂಡಲ್ಲಿ ಸೈಲೆಂಟ್ ಬಾಂಬ್ ಹಾಕಿಸಿ ಮತ್ತಷ್ಟು ನಗಿಸುತ್ತಾರೆ.
ಸೃಜನ್ ಇವರ ಕಾಲೆಳೆಯೋದು, ಈಕೆ ಟಕ್ಕಂತ ಉತ್ತರಿಸೋದು ಎಲ್ಲವೂ ನೋಡುಗರ ಬಿದ್ದು ಬಿದ್ದು ನಗುವಂತೆ ಮಾಡುತ್ತದೆ. ಮೊದಲಿಂದಲೂ ಹಲವು ಕಾರ್ಯಕ್ರಮಗಳಲ್ಲಿ, ಆರ್ಕೆಸ್ಟ್ರಾಗಳಲ್ಲಿ ಹಾಡಿದ್ದರೂ ರೆಮೋ ಪ್ರತಿಭೆ ಅನಾವರಣಗೊಂಡಿದ್ದು ಮಜಾ ಟಾಕೀಸ್ ಮೂಲಕ. ಈ ಸಿಂಗರ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಸೂಪರ್ ಕ್ವೀನ್' ಎನ್ನುವ ರಿಯಾಲಿಟಿ ಶೋನಲ್ಲಿಯೂ ಪಾಲ್ಗೊಂಡಿದ್ದರು. ಬಹಳ ಕಷ್ಟದಿಂದ ಮೇಲೆ ಬಂದು ಬದುಕು ಕಟ್ಟಿಕೊಂಡವರ ರಿಯಾಲಿಟಿ ಶೋ ಇದು. ಇದರಲ್ಲಿ ಹಲವು ಕ್ಷೇತ್ರಗಳ ಸಾಧಕಿಯರಿದ್ದರು. ಅವರ ಬದುಕಿನ ನಿಕಟ ದರ್ಶನವೂ ಆಗಿತ್ತು.
ಮಜಾ ಟಾಕೀಸ್ ಮೂಲಕ ಸದಾ ನಗಿಸುತ್ತಿದ್ದ ರೆಮೋ ಸ್ಟ್ರಾಂಗ್ ಲೇಡಿ ಎನ್ನುವುದು ಸೂಪರ್ ಕ್ವೀನ್ ರಿಯಾಲಿಟಿ ಶೋನಲ್ಲಿ ಅನಾವರಣಗೊಂಡಿತ್ತು. ಆಗ ರೆಮೋ ಬದುಕಿನ ಕಹಿ ಕ್ಷಣಗಳನ್ನು ಕೇಳಿದ ನೋಡಗರ ಕಣ್ಣಲ್ಲೂ ನೀರು ಬಂದಿದ್ದು ಸುಳ್ಳಲ್ಲ. ಇಷ್ಟೆಲ್ಲ ನೋವಿದ್ದರೂ, ಎಲ್ಲರನ್ನೂ ನಕ್ಕು ನಗಿಸುವುದು ಹೇಗೆ ಸಾಧ್ಯವೆಂದು ಮರಗಿದ್ದರು.
ರೆಮೋ ತೊಡುಗೆ, ಅವರ ಸ್ಟೈಲ್ ನೋಡಿದ್ರೆ ಸಖತ್ ಡ್ಯಾಶಿಂಗ್ ಲೇಡಿ ಅಂತ ಯಾರಾದ್ರೂ ಗೆಸ್ ಮಾಡುತ್ತಾರೆ. ಬಟ್ಟೆ, ಅಪಿಯರೆನ್ಸ್ ಮನುಷ್ಯನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತೆ ಅಂತಾರಲ್ವಾ, ಹಾಗೆ ರೆಮೊ ಅವರ ತೊಡುಗೆ, ಅವರ ಗೆಟಪ್ ಅವರ ವ್ಯಕ್ತಿತ್ವವನ್ನೂ ಅನಾವರಣಗೊಳಿಸುತ್ತೆ. ಬಹಳ ವರ್ಷಗಳಿಂದ ರೆಮೋ ಇರುವುದೇ ಹೀಗೆ. ಬಾಲ್ಯದಿಂದಲೂ ಇಂಥದ್ದೊಂದು ಲುಕ್ ಇರುವಂತೆ ನೋಡಿಕೊಂಡಿದ್ದರು ರೆಮೋ. ಸಣ್ಣ ಕುಟುಂಬದವರಾಗಿದ್ದ ರೋಮೋ ಲೈಫಲ್ಲಿ ಬದಲಾವಣೆ ತಂದಿದ್ದು ಪ್ರೀತಿ.
ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದ ರೆಮೋ ಮದುವೆ ಆಗಿದ್ದು ತನಗಿಂತ 13 ವರ್ಷ ದೊಡ್ಡವರನ್ನು. ಅಲ್ಲಿಯೇ ಪರಿಚಿತರಾಗಿ, ಸ್ನೇಹಿತರಾಗಿ ಮನಸ್ಸಿನೊಳಗೂ ಬಂದವನನೊಂದಿಗೆ ರೆಮೋ ದಾಂಪತ್ಯಕ್ಕೆ ಕಾಲಿಟ್ಟರು. ಇವರ ಪ್ರೀತಿ ಮುಂದೆ ಮನೆಯವರ ವಿರೋಧ ವರ್ಕ್ ಆಗಲಿಲ್ಲ. ಎಲ್ಲರನ್ನೂ ವಿರೋಧಿಸಿಯೇ ಮದ್ವೆಯಾದರು.
ವೈವಾಹಿಕ ಬದುಕಿಗೆ ಹಲವು ಕನಸುಗಳೊಂದಿಗೆ ಕಾಲಿಟ್ಟ ರೆಮೋಗೆ ಗಂಡನ ಮನೆ ಬರೀ ಮುಳ್ಳಿನ ಹಾದಿಯಾಗಿತ್ತು. ನಿರೀಕ್ಷಿಸಿದ ಪ್ರೀತಿ ದಕ್ಕಲೇ ಇಲ್ಲ. ಮನೆಯಲ್ಲಿ ಮೂಲೆ ಗುಂಪಾದರು. ಕಾಲ ಕಳೆಯಿತು. ಬದುಕಲ್ಲಿ ಏನೂ ಬದಲಾಗಲಿಲ್ಲ. ಸಾಕು ಇಂಥ ನರಕ ಎಂದು ನಿರ್ಧರಿಸಿದರು. ಮೈ ಕೊಡವಿ ಮೇಲೆದ್ದರು. 5 ವರ್ಷದ ಪುಟ್ಟ ಮಗಳ ಕರ್ಕೊಂಡು ಮನೆ ಬಿಟ್ಟರು.
ಕೈಯಲ್ಲಿ ಚೂರು ದುಡ್ಡಿರಲಿಲ್ಲ. ಮಗಳ ಜೊತೆ ತನ್ನ ಬದುಕೂ ನಡೆಯಬೇಕು. ಛಲಗಾತಿ ಹೆಣ್ಣುಮಗಳು ಎಲ್ಲೆಡೆ ಹಾಡು ಹೇಳಿಯೇ ಜೀವನ (Life) ಕಟ್ಟಿ ಕೊಳ್ತಾರೆ. ಮಗಳನ್ನು ಮಲಗಿಸಿ, ತಮ್ಮ ಜೀವನಕ್ಕೆ ಮರಗುತ್ತಿದ್ದರಂತೆ ಈ ರೆಮೋ. ಬದುಕಿರುವುದೇ ಮಗಳಿಗಾಗಿ. ಮಗಳ ಜೀವನ ಚೆನ್ನಾಗಿರಬೇಕೆಂದು ಭಾವುಕರಾಗಿದ್ದರು ಈ ರಿಯಾಲಿಟಿ ಶೋನಲ್ಲಿ ಗಾಯಕಿ.