ಇಚ್ಚೆಯಂತೆ ಹೆಣ್ಣು ಮಗುವನ್ನು ದತ್ತು ಪಡೆದ್ರಾ ಲಕ್ಷ್ಮಿ ಬಾರಮ್ಮಾ ನೇಹಾ, ಚಂದನ್? ಫ್ಯಾನ್ಸ್ ಫುಲ್ ಖುಷ್
ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಗೊಂಬೆಯಾಗಿ ಖ್ಯಾತಿ ಪಡೆದಿದ್ದ ನೇಹಾ ಗೌಡ ಮತ್ತು ಚಂದನ್ ತಮ್ಮ ಇಚ್ಚೆಯಂತೆ ಹೆಣ್ಣು ಮಗುವನ್ನ ದತ್ತು ಸ್ವೀಕರಿಸಿದ್ರಾ? ವೈರಲ್ ಫೋಟೊದ ಸತ್ಯಾಸತ್ಯತೆ ಏನು?
ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಗೊಂಬೆಯಾಗಿ ಐದು ವರ್ಷಕ್ಕೂ ಹೆಚ್ಚು ಸಮಯ ವೀಕ್ಷಕರನ್ನು ರಂಜಿಸಿದ ಕಿರುತೆರೆಯ ಜನಪ್ರಿಯ ನಟಿ ನೇಹಾ ರಾಮಕೃಷ್ಣ (Neha Ramakrishna) ತಮ್ಮ ನಟನೆಯಿಂದಲೇ ಜನಮನ ಗೆದ್ದಿದ್ದಾರೆ.
ಕನ್ನಡದಲ್ಲಿ ಪುಣ್ಯವತಿ ಸೀರಿಯಲ್ ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು, ಅಲ್ಲದೇ ತಮಿಳು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ರಾಜಾ ರಾಣಿ ಶೋದಲ್ಲಿ (reality show )ಪತಿಯೊಂದಿಗೆ ಭಾಗವಹಿಸಿ, ಪ್ರಶಸ್ತಿ ಸಹ ಗೆದ್ದಿದ್ದರು.
ನೇಹಾ ಸದ್ಯಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ಗ್ರಾಮದ ಹುಡುಗಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು ಅವರ ಪತಿ ಚಂದನ್ ಗೌಡ (Chandan Gowda) ಅಂತರಪಟ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.
ಈ ಹಿಂದೆ ರಾಜಾ ರಾಣಿ ಕಾರ್ಯಕ್ರಮದಲ್ಲಿ ನೇಹಾ ತಮಗೆ ಹೆಣ್ಣು ಮಗುವನ್ನು ದತ್ತು (adoption) ಸ್ವೀಕಾರ ಮಾಡುವ ಆಸೆಯಿದ್ದು, ಅದಕ್ಕೆ ಚಂದನ್ ಖಂಡಿತವಾಗಿಯೂ ಒಪ್ಪಿಗೆ ಸೂಚಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ತಮ್ಮ ಮನದಾಸೆಯನ್ನು ಬಿಚ್ಚಿಟ್ಟಿದ್ದರು.
ಇದೀಗ ನೇಹಾ ಮತ್ತು ಚಂದನ್ ಪುಟ್ಟ ಮಗುವನ್ನು ಎತ್ತಿಕೊಂಡಿರುವ ಫೋಟೋ ಸದ್ಯ ಸೋಶಿಯಲ್ ಮೀಡೀಯಾದಲ್ಲಿ ಹರಿದಾಡುತ್ತಿದೆ. ಜನರೆಲ್ಲರೂ ಕೊನೆಗೂ ನೀವು ಇಷ್ಟಪಟ್ಟಂತೆ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿರಾ? ಎಂದು ಕೇಳುತ್ತಿದ್ದಾರೆ.
ಅಭಿಮಾನಿಗಳು ಈ ಜೋಡಿಗೆ ಅಭಿನಂದನೆಯ ಮಹಾಪೂರವನ್ನೆ ಹರಿಸುತ್ತಿದ್ದಾರೆ. ಹೆಣ್ಣು ಮಗುವನ್ನು ದತ್ತು ಸ್ವೀಕರಿಸಿ ಒಳ್ಳೆಯ ಕೆಲಸ ಮಾಡಿದಿರಿ. ನಿಮಗೆ ದೇವರು ಒಳ್ಳೆಯದ್ದನ್ನೆ ಮಾಡಲಿ, ಒಂದು ಮಗುವಿಗೆ ಜೀವನ ನೀಡಿದ್ದಕ್ಕೆ ಧನ್ಯವಾದಗಳು ಎಂದೆಲ್ಲಾ ಕಾಮೆಂಟ್ ಮಾಡಿ ಶುಭ ಕೋರಿದ್ದಾರೆ.
ಆದರೆ ಇಲ್ಲಿವರೆಗೆ ಚಂದನ್ ಆಗಲಿ, ನೇಹಾ ಗೌಡ ಆಗಲಿ ಈ ಬಗ್ಗೆ ಯಾವುದೇ ಸುದ್ದಿ ನೀಡಿಯೇ ಇಲ್ಲ. ನೇಹಾ ಗೌಡ ಲಚ್ಚಿ ಸೀರಿಯಲ್ (serial) ಶೂಟ್ ನಲ್ಲಿ ಬ್ಯುಸಿಯಾಗಿದ್ದರೆ, ಚಂದನ್ ಅಂತರಪಟ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ನೇಹಾ ಚಂದನ್ ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ತಮ್ಮ ಫ್ರೆಂಡ್ಸ್ ಜೊತೆ ಹಾಂಗ್ ಕಾಂಗ್ ಟೂರ್ ಮಾಡಿ ಅಲ್ಲಿಯೇ ಕಳೆದ ಕೆಲವು ದಿನಗಳಿಂದ ಎಂಜಾಯ್ ಮಾಡ್ತಿದ್ದಾರೆ. ಮಗು ಸ್ನೇಹಿತರ ಮಗುವೋ ಅಥವಾ ಈ ಜೋಡಿಯ ಮಗುವೆ ಅನ್ನೋದಕ್ಕೆ ಅವರೇ ಉತ್ತರ ನೀಡಬೇಕಿದೆ…