- Home
- Entertainment
- TV Talk
- ಸೀರಿಯಲ್ ಮುಗಿಯುತ್ತಿದ್ದಂತೆ ದುಬಾರಿ ಕಾರು ಖರೀದಿಸಿದ ಲಕ್ಷ್ಮೀ ಬಾರಮ್ಮ ನಟಿ … ಬೆಲೆ ಎಷ್ಟು ಗೊತ್ತ?
ಸೀರಿಯಲ್ ಮುಗಿಯುತ್ತಿದ್ದಂತೆ ದುಬಾರಿ ಕಾರು ಖರೀದಿಸಿದ ಲಕ್ಷ್ಮೀ ಬಾರಮ್ಮ ನಟಿ … ಬೆಲೆ ಎಷ್ಟು ಗೊತ್ತ?
ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವಿಲನ್ ಕಾವೇರಿ ಕಷ್ಯಪ್ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಸುಷ್ಮಾ ನಾಣಯ್ಯ ದುಬಾರಿ ಕಾರು ಖರೀದಿಸಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಸೀರಿಯಲ್ (Lakshmi Baramma Serial) ಶೀಘ್ರದಲ್ಲಿ ಮುಕ್ತಾಯ ಕಾಣಲಿದೆ. ಅಂತಿಮ ಹಂತದ ಸಂಚಿಕೆಗಳು ಪ್ರಸಾರವಾಗುತ್ತಿವೆ. ಈಗಾಗಲೇ ತಂಡ ಶೂಟಿಂಗ್ ಸಹ ಮುಗಿಸಿದೆ.
ಸೀರಿಯಲ್ ಮುಕ್ತಾಯಗೊಂಡ ಬೆನ್ನಲ್ಲೇ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಲನ್ ಕಾವೇರಿ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಸುಷ್ಮಾ ನಾಣಯ್ಯ (Sushma Nanaiah) ಕಾರನ್ನು ಖರೀದಿಸಿದ್ದು, ಸದ್ಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸುಷ್ಮಾ ನಾಣಯ್ಯ ಹುಂಡೈ ವರ್ನಾ 1.5 ವಿಟಿವಿಟಿ ಎಸ್‌ಎಕ್ಸ್ (Hyundai Verna 1.5 vtvt sx) ಕಾರನ್ನು ಖರೀದಿ ಮಾಡಿದ್ದಾರೆ. ನಟಿ ಖರೀದಿ ಮಾಡಿದ ಕಾರಿನ ಬೆಲೆ ಸುಮಾರು ₹15.9 ಲಕ್ಷ ರೂಪಾಯಿದ್ದಾಗಿದೆ. ಹಾಗಾಗಿ ಸದ್ಯ ನಟಿ ಹೊಸ ಕಾರಿನ ಒಡತಿಯಾಗಿದ್ದಾರೆ.
ನಟಿ ಸುಷ್ಮಾ ನಾಣಯ್ಯ, ಪತಿ ಹಾಗೂ ಮಗಳು ಹಾಗೂ ತಾಯಿ ಹೊಸ ಕಾರಿನ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು. ಸದ್ಯ ಅದೇ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟನೆಯ ಜೊತೆಗೆ ಮೇಕಪ್ ಆರ್ಟಿಸ್ಟ್ (makeup artist) ಆಗಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸುಷ್ಮಾ ನಾಣಯ್ಯ ಮದುವೆಯಾಗಿರುವ ಮಗನ ಅಮ್ಮ ಆಗಿದ್ರೆ, ರಿಯಲ್ ಲೈಫಲ್ಲಿ ಇವರಿಗೆ ನಾಲ್ಕು ವರ್ಷದ ಪುಟ್ಟ ಮಗಳಿದ್ದಾಳೆ.
ಸುಷ್ಮಾ ನಾಣಯ್ಯ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ತಾಯಿ ಕಾವೇರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರದ್ದು ಮಗನನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುವ ತಾಯಿಯ ಪಾತ್ರ. ಅದಕ್ಕಾಗಿ ಯಾರನ್ನು ಸಾಯಿಸೋದಕ್ಕೂ ಸಿದ್ಧವಾಗಿರ್ತಾರೆ ಕಾವೇರಿ.
ಸದ್ಯ ಸೀರಿಯಲ್ ಮುಕ್ತಾಯ ಕಾಣುತ್ತಿದ್ದು, ಶೂಟಿಂಗ್ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಾ ಎಂಜಾಯ್ ಮಾಡ್ತಿದ್ದಾರೆ ನಟಿ ಸುಷ್ಮಾ ನಾಣಯ್ಯ.