ಲಕ್ಷ್ಮೀ ಬಾರಮ್ಮ: ಜೀವನಪೂರ್ತಿ ಲಕ್ಷ್ಮಿ ಜೊತೆಗಿರುವಂತೆ ಹರಕೆ ಕಟ್ಟಿದ ವೈಷ್ಣವ್
ಲಕ್ಷ್ಮೀ ಬಾರಮ್ಮ ಸೀರಿಯಲ್ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಇದೀಗ ಒಲ್ಲದ ಮದ್ವೆ ಆದ್ರೂ ಲಕ್ಷ್ಮಿಯನ್ನು ಒಪ್ಪಿಕೊಂಡಿರುವ ವೈಷ್ಣವ್ ಇದೀಗ, ಲಕ್ಷ್ಮೀ ಜೊತೆ ಜೀವನ ಪೂರ್ತಿ ಇರುವಂತೆ ಹರಕೆ ಕಟ್ಟಿದ್ದಾನೆ.

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರೋ ಲಕ್ಷ್ಮೀ ಬಾರಮ್ಮ ಸೀರಿಯಲ್ ಅದ್ಭುತವಾಗಿ ಮೂಡಿಬರುತ್ತಿದೆ. ಇಷ್ಟ ಇಲ್ಲಾಂದ್ರೂ ಅಮ್ಮನ ಒತ್ತಾಯದ ಮೇರೆಗೆ ಲಕ್ಷ್ಮಿಯನ್ನು ಮದುವೆಯಾಗಿರೋ ವೈಷ್ಣವ್, ನನ್ನಿಂದಾಗಿ ಲಕ್ಷ್ಮೀ ಕಷ್ಟಪಡಬಾರದು ಎಂದು ಲಕ್ಷ್ಮೀ ಜೊತೆ ಸಂಸಾರ ಮಾಡಲು ನಿರ್ಧರಿಸಿದ್ದಾನೆ.
ಲಕ್ಷ್ಮೀ - ವೈಷ್ಣವ್ ಮೊದಲ ಬಾರಿಗೆ ಜೊತೆಯಾಗಿ ದೇವಸ್ಥಾನಕ್ಕೆ ತೆರಳಿದ್ದು, ಅಲ್ಲಿ ದೇವರಿಗೆ ಪೂಜೆ ಮಾಡಿಸಿ, ವೈಷ್ಣವ್ ದೇವರ ಪ್ರಸಾದದ ಹೂವನ್ನು ಲಕ್ಷ್ಮೀ ತಲೆಗೆ ಮುಡಿಸುತ್ತಾನೆ. ಆ ಮೂಲಕ ಭಾವನೆಗಳಿಗೆ ಬೆಲೆ ಕೊಡುವ ಉತ್ತಮ ಪತಿಯಾಗಿ ವೈಷ್ಣವ್ ಕಾಣಿಸಿಕೊಳ್ಳುತ್ತಾನೆ.
ದೇವಾಲಯದ ಆವರಣದಲ್ಲಿ ಮರಕ್ಕೆ ಬಳೆ ಕಟ್ಟೋದನ್ನು ನೋಡಿದ ಲಕ್ಷ್ಮಿಯನ್ನು ವೈಷ್ಣವ್ ನಿಮಗೂ ಮರಕ್ಕೆ ಬಳೆ ಕಟ್ಟಬೇಕು ಅನ್ಸಿದ್ರೆ ಕಟ್ಬಿಡಿ ಅಂತಾನೆ. ಕಟ್ಟೋದಾದ್ರೆ ಕಟ್ಟಿ, ಆಸೆ ಬಂದಾಗ ಸುಮ್ನಿರ್ಬಾರ್ದು ಅಂತಾನೆ. ಬಳೆ ಕಟ್ಬೇಕಾದ್ರೆ ಮನಸಲ್ಲಿ ಏನಾದ್ರೂ ಕೇಳ್ಕೋಬೇಕು, ಆದರೆ ನನಗೆ ಏನು ಕೇಳ್ಬೇಕು ಅಂತಾನೆ ಗೊತ್ತಿಲ್ಲ ಅಂತಾಳೆ ಲಕ್ಷ್ಮೀ.
ಮನಸಿನಲ್ಲಿ ಸ್ಪಷ್ಟತೆ ಇರುವಾಗ ದೇವರಲ್ಲಿ ಏನು ಕೇಳ್ಬಾರದು ಅಂತಾಳೆ ಲಕ್ಷ್ಮಿ, ಅದ್ಕೆ ವೈಷ್ಣವ್ (Vaishnav) , ಹಾಗಿದ್ರೆ ಇಲ್ಲಿ ಏನೇನು ಹರಕೆ ಕಟ್ತಾರೆ ಎಂದು ಕೇಳ್ತಾನೆ. ಅದಕ್ಕೆ ಉತ್ತರಿಸಿದ ಲಕ್ಷ್ಮೀ ನಮ್ಮ ಮನಸ್ಸಲ್ಲಿರೋ ಆಸೆ ಈಡೇರಲಿ ಎಂದು ದೇವರಲ್ಲಿ ಬೇಡಿಕೊಂಡು ಇಲ್ಲಿ ಹರಕೆ ಕಟ್ಟಿದ್ರೆ, ಆಸೆಗಳು ಈಡೆರುತ್ತಂತೆ ಎನ್ನುತ್ತಾಳೆ.
ಇದನ್ನ ಕೇಳಿದ ಕೂಡ್ಲೆ ವೈಷ್ಣವ್ ಹಾಗಿದ್ರೆ ನಾವಿಬ್ರೂ ಹರಕೆ ಕಟ್ಬೇಕು ಎಂದು ಹೇಳುತ್ತಾ… ಮದ್ವೆ ಏನೋ ಇಬ್ರು ಆಗಿದ್ದೀವಿ, ಆದ್ರೆ ಆರಾಮವಾಗಿ ಜೀವನ ಕಳೆಯಲು ಸಾಧ್ಯವಾಗುತ್ತಾ ಇಲ್ವ ಎಂದು ಕೇಳಿ ಹರಕೆ ಕಟ್ಬೇಕು ಅಂತಾನೆ.
ಇದನ್ನ ಕೇಳಿ ಲಕ್ಷ್ಮೀ (Lakshmi) ನಾವಿಬ್ರೂ ಜೊತೆಯಾಗಿ ಇರಲ್ಲ ಅಂತ ನಿಮಗೆ ಇನ್ನೂ ಅನುಮಾನ ಇದೆಯಾ? ಎಂದು ಕೇಳಿದಾಗ ವೈಷ್ಣವ್ ಎಲ್ಲಾ ಒಳ್ಳೆಯದೇ ಆಗ್ಲಿ ಅಂತ ನಾನು ಆಸೆ ಪಡ್ತಿನಿ. ಆದ್ರೆ ಭವಿಷ್ಯ ಹೇಗಿರುತ್ತೆ ಗೊತ್ತಿಲ್ಲ, ನಾವು ಅಂದುಕೊಂಡ ಹಾಗೆ ಆಗೋದಿಲ್ವಲ್ಲ ಎನ್ನುತ್ತಾನೆ. ನನ್ನ ಜೀವನದಲ್ಲಿ ನಾನು ಅಂದ್ಕೊಂಡದ್ದು, ಯಾವುದೂ ಆಗ್ಲಿಲ್ಲ. ಏನೋ ಅಂದ್ಕೊಂಡ್ರೆ ಏನೋ ಆಗುತ್ತೆ, ಆ ಭಯ ಕೂತು ಬಿಟ್ಟಿದೆ ಎನ್ನುತ್ತಾನೆ.
ನಂತರ ಲಕ್ಷ್ಮೀಯ ಕೈಹಿಡಿದು ಕರೆದುಕೊಂಡು ಹೋಗಿ ಹರಕೆ ಬಳೆಯ ಮಾಲೆ ಮಾಡಿ ಅದರಲ್ಲಿ ನಮ್ಮಿಬ್ಬರನ್ನು ಯಾವಾಗಲೂ ಚೆನ್ನಾಗಿರಿಸು ಎಂದು ಚೀಟಿ ಬರೆದು ಕಟ್ಟುವ ವೈಷ್ಣವ್, ದೇವರೇ ನಮ್ಮ ಪ್ರಯತ್ನ ಕೈಗೂಡಲಿ, ನಮ್ಮ ಜೀವ ಇರೋವರೆಗೂ ನಾವಿಬ್ರು ಜೊತೆಯಾಗಿಯೇ ಇರೋ ತರ ಮಾಡು ಎಂದು ಬೇಡುತ್ತಾನೆ. ಇದನ್ನು ಕೇಳಿಸಿ ಲಕ್ಷ್ಮೀ ಸಂತಸದಲ್ಲಿ ಕಣ್ಣೀರು ಹಾಕುತ್ತಾಳೆ.
ನಾನು ಮೊದಲನೇ ಸಲ ನನಗೋಸ್ಕರ ಬೇಡ್ತಾ ಇದ್ದೀನಿ, ನನಗೆ ಇವರನ್ನು ಕೊಟ್ಬಿಡು ದೇವ್ರೇ ಎಂದು ಲಕ್ಷ್ಮೀ ಸಹ ಕೈ ಮುಗಿದು, ದೇವರಲ್ಲಿ ಬೇಡ್ತಾಳೆ. ಇನ್ನೊಂದೆಡೆ ಲಕ್ಷ್ಮೀ - ವೈಷ್ಣವ್ ಅವರನ್ನು ಬೇರೆ ಮಾಡಿ ಮತ್ತೆ ವೈಷ್ಣವ್ ಜೊತೆ ಸೇರುವ ಕನಸು ಕಾಣ್ತಿದ್ದಾಳೆ ಕೀರ್ತಿ… ಲಕ್ಷ್ಮೀ ವೈಷ್ಣವ್ ಒಂದಾಗಿರಕ್ಕೆ ಆಗತ್ತಾ? ಅಥವಾ ಮತ್ತೆ ಕೀರ್ತಿ ಬರ್ತಾಳ? ಕಾದು ನೋಡಬೇಕು.