PHOTOS: ಸೀಮಂತದ ನೆಪ; ಒಟ್ಟಿಗೆ ಸೇರಿದ ಲಕ್ಷಣ ಧಾರಾವಾಹಿ ಕಲಾವಿದರು!
ಲಕ್ಷಣ ಧಾರಾವಾಹಿ ಮುಗಿದು ಎರಡು ವರ್ಷಗಳಾಗುತ್ತ ಬಂತು. ಈ ಧಾರಾವಾಹಿ ಕಲಾವಿದರ ಮಧ್ಯೆ ಆ ಸ್ನೇಹ ಇಂದು ಕೂಡ ಹಾಗೆ ಇದೆ. ಈ ಕಲಾವಿದರು ಈಗ ಮತ್ತೆ ಸೇರಿರುವ ಫೋಟೋಗಳು ಇಲ್ಲಿವೆ.

ಲಕ್ಷಣ ಧಾರಾವಾಹಿಯಲ್ಲಿ ಮಿಲಿ ಪಾತ್ರದಲ್ಲಿ ಶ್ರುತಿ ರಮೇಶ್ ಅವರು ನಟಿಸಿದ್ದರು. ಇವರ ಜೊತೆ ಸುಕೃತಾ ನಾಗ್ ಕೂಡ ಇದ್ದರು.
ʼಗಿಚ್ಚಿ ಗಿಲಿಗಿಲಿʼ ಶೋ ಖ್ಯಾತಿಯ ಶಿವು ಜೊತೆಗೆ ಶ್ರುತಿ ರಮೇಶ್ ಅವರ ಸೆಲ್ಫಿ ಫೋಟೋ ಇದು. ಶ್ರುತಿ ರಮೇಶ್ ಅವರು ಸಖತ್ ಆಗಿ ರೆಡಿಯಾಗೋಕೂ ಕಾರಣ ಇದೆ.
ಸದ್ಯ ʼಮೈನಾʼ ಹಾಗೂ ʼಭರ್ಜರಿ ಬ್ಯಾಚುಲರ್ಸ್ʼ ಶೋನಲ್ಲಿ ಬ್ಯುಸಿ ಇರುವ ವಿಜಯಲಕ್ಷ್ಮೀ ಜೊತೆಗೆ ನಟಿ ಶ್ರುತಿ ರಮೇಶ್ ಕಾಣಿಸಿಕೊಂಡಿದ್ದು ಹೀಗೆ..
ಪ್ರಿಯಾ ಷಠಮರ್ಷಣ ಹಾಗೂ ಸುಕೃತಾ ನಾಗ್, ಶ್ರುತಿ ರಮೇಶ್ ಅವರ ಸುಂದರವಾದ ಫೋಟೋ ಇದು. ಲಕ್ಷಣ ಧಾರಾವಾಹಿಯಲ್ಲಿ ಇವರು ನಟಿಸಿದ್ದರು.
ಲಕ್ಷಣ ಧಾರಾವಾಹಿ ಮುಕ್ತಾಯ ಆಗಿ ಎರಡು ವರ್ಷಗಳಾಗುತ್ತ ಬಂತು. ಈ ಕಲಾವಿದರು ಇಂದು ಕೂಡ ಆಗಾಗ ಭೇಟಿಯಾಗುತ್ತಿರುತ್ತಾರೆ. ಇವರ ಮಧ್ಯೆ ಸ್ನೇಹ ಹಾಗೆ ಇದೆ.
ಸುಕೃತಾ ನಾಗ್ ಅವರು ಸದ್ಯ ʼಭರ್ಜರಿ ಬ್ಯಾಚುಲರ್ಸ್ ಸೀಸನ್ 2ʼ ಶೋನಲ್ಲಿ ಮೆಂಟರ್ ಆಗಿದ್ದಾರೆ. ರಿಲೇಶನ್‌ಶಿಪ್ ವಿಚಾರದಲ್ಲಿ ಇವರು ಮೇಷ್ಟ್ರು ಅಂತೆ.
ಲಕ್ಷಣ ಧಾರಾವಾಹಿ ಕಲಾವಿದರ ಸುಂದರ ಸೆಲ್ಫಿ ಇದು. ಸಮಯ ಸಿಕ್ಕಾಗ, ಪಾರ್ಟಿಯಲ್ಲಿ ಕೂಡ ಇವರೆಲ್ಲರೂ ಒಟ್ಟಿಗೆ ಸೇರುತ್ತಾರೆ. ಈ ರೀತಿ ಕಲಾವಿದರನ್ನು ನೋಡೋದು ಖುಷಿ.
ಅಂದಹಾಗೆ ಶ್ರುತಿ ರಮೇಶ್ ಅವರ ಅಕ್ಕನ ಸೀಮಂತದಲ್ಲಿ ಈ ಕಲಾವಿದರು ಭಾಗಿಯಾಗಿ, ಶುಭ ಹಾರೈಸಿದ್ದಾರೆ. ಶ್ರುತಿ ಆದಷ್ಟು ಬೇಗ ಚಿಕ್ಕಮ್ಮ ಆಗಲಿದ್ದಾರೆ.
ಸುಕೃತಾ ನಾಗ್, ಪ್ರಿಯಾ ಷಠಮರ್ಷಣ, ಶ್ರುತಿ ರಮೇಶ್ ಅವರು ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ತೆರೆ ಮೇಲೆ ಕಾಣಿಸಿಕೊಳ್ತಿದ್ದಾರೆ.
ಶ್ರುತಿ ರಮೇಶ್ ಹಾಗೂ ವಿಜಯಲಕ್ಷ್ಮೀ ಅವರು ತುಂಬ ದಿನಗಳ ಬಳಿಕ ಭೇಟಿಯಾಗಿದ್ದು, ಅಪ್ಪಿಕೊಂಡು ಮುದ್ದಾಡಿದ್ದು ಹೀಗೆ. ಸುಂದರವಾದ ಫೋಟೋವಿದು.
ಲಕ್ಷಣ ಧಾರಾವಾಹಿ ನಟಿ ಶ್ರುತಿ ರಮೇಶ್ ಅವರ ಸಹೋದರಿ ಜೊತೆಗೆ ಎಲ್ಲ ಕಲಾವಿದರು ತೆಗೆಸಿಕೊಂಡ ಸೆಲ್ಫಿ ಫೋಟೋ ಇದು. ಸುಂದರ ಫೋಟೋ ಇದು. ಏನಂತೀರಾ?