ಅನ್ನ, ನೀರು ಬಿಟ್ಟು ಕಠಿಣ ವೃತ ಮಾಡಲು ಮುಂದಾದ ಕುಸುಮಾ… ತಾಂಡವ್- ಭಾಗ್ಯ ಒಂದಾಗೋಕೆ ಸಾಧ್ಯಾನ?
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತನ್ನ ಮಗ ಮತ್ತು ಸೊಸೆ ಖುಷಿಯಾಗಿ, ಜೊತೆಯಾಗಿ ಬಾಳಬೇಕು ಎಂದು ಕಠಿಣ ತಪಸ್ಸಿಗೆ ಮುಂದಾಗಿದ್ದಾಳೆ ಕುಸುಮಾ. ನಿಜಕ್ಕೂ ಇದ್ರಿಂದ ತಾಂಡವ್-ಭಾಗ್ಯ ಒಂದಾಗೋ ಸಾಧ್ಯತೆ ಇದ್ಯಾ?
ಭಾಗ್ಯಲಕ್ಷ್ಮೀ (Bhagyalakshmi) ಧಾರಾವಾಹಿಯಲ್ಲಿ ಯಾರು ಏನೇ ಕಸರತ್ತು ಮಾಡಿದ್ರೂ ಕೂಡ, ತಾಂಡವ್ ಗೆ ಭಾಗ್ಯ ಮೇಲೆ ಪ್ರೀತಿ ಮೂಡೋದಕ್ಕೆ ಸಾಧ್ಯಾನೆ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಇಬ್ಬರನ್ನು ಒಂದು ಮಾಡುವ ಕುಸುಮ ಪ್ರಯತ್ನ ಮಾತ್ರ ಯಾವತ್ತೂ ಮುಗಿಯೋದೆ ಇಲ್ಲ.
ಸದ್ಯ ಸೀರಿಯಲ್ ನಲ್ಲಿ ಏನಾಗ್ತಿದೆ ಅಂದ್ರೆ ಕಪಲ್ ಟ್ರಿಪ್ ಆಯೋಜಿಸಿರುವ ರೆಫ್ರಿಜರೇಟರ್ ಕಂಪನಿ ಜೊತೆ ಭಾಗ್ಯ ಕೆಲಸ ಮಾಡುತ್ತಿರುವ ಸಿಟಿ ಲೈಟ್ ಹೊಟೇಲ್ ಟೈ ಅಪ್ ಮಾಡಿಕೊಂಡಿದೆ. ಹಾಗಾಗಿ, ಸಿಟಿ ಲೈಟ್ ಕಂಪನಿಯ ಮೈನ್ ಶೆಫ್ ಆಗಿರುವ ಭಾಗ್ಯಾ ಶೆಫ್ ಆಗಿ ರೆಫ್ರಿಜರೇಟರ್ ಕಂಪನಿ ಕಪಲ್ ಟ್ರಿಪ್ ನಡೆಯುತ್ತಿರುವ ಜಾಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನೊಂದೆಡೆ ಕುಸುಮಾ ಮನೆಯಲ್ಲಿ ಈಗಾಗಲೇ ಬಾಬಾ ಒಬ್ಬರು ಬಂದು, ನೀವು ಹೆಚ್ಚು ಸಮಯ ಗುಟ್ಟನ್ನು ಮುಚ್ಚಿಡೋದಕ್ಕೆ ಸಾಧ್ಯ ಇಲ್ಲ. ಸದ್ಯದಲ್ಲೆ ಗುಟ್ಟು ರಟ್ಟಾಗೋದಾಗಿ ತಿಳಿಸಿದ್ದಾರೆ. ಇದರಿಂದ ಹೆದರಿ, ಭಾಗ್ಯಳನ್ನು ಟ್ರಿಪ್ ಗೆ ಕಳುಹಿಸೋಕದನ್ನ ತಡೆದ ಕುಸುಮಾರನ್ನು, ಅವರ ಪತಿ ಧರ್ಮರಾಜ್ ರೂಮಿನಲ್ಲಿ ಕೂಡಿ ಹಾಕಿ ಭಾಗ್ಯಳನ್ನು ಕಳುಹಿಸಿ ಕೊಟ್ಟಾದಾಗಿದೆ.
ಇನ್ನು ಮುಂದೆ ಕಥೆ ಇರೋದು ಏನಂದ್ರೆ ಟ್ರಿಪ್ ಗೆ ಜೋಡಿಯಾಗಿ ಬರುವ ತಾಂಡವ್ ಮತ್ತು ಶ್ರೇಷ್ಠಾ ಭಾಗ್ಯ ಕಣ್ಣೆದುರಿಗೆ ಬೀಳುತ್ತಾರ? ಒಂದು ವೇಳೆ ಕಣ್ಣೆದುರು ಕಂಡ್ರೆ ಭಾಗ್ಯ ಏನ್ ಮಾಡ್ತಾಳೆ? ಈವಾಗಲಾದ್ರೂ ಗಂಡನ ಅಫೇರ್ ಬಗ್ಗೆ ತಿಳ್ಕೋತ್ತಾಳ? ಅಥವಾ ಮೊದಲಿನಂತೆ ನನ್ನ ಗಂಡ ಅಂತವನು ಅಲ್ಲ ಅಂತ ಸುಮ್ಮನಿರ್ತಾಳ ಗೊತ್ತಿಲ್ಲ.
ತನ್ನ ಮಗ ಸೊಸೆ ಹೇಗಾದ್ರೂ ಆಗಿ ಸರಿಯಾದ್ರೆ ಸಾಕು, ಇಬ್ಬರು ಜೊತೆಯಾಗಿ ಖುಷಿ ಖುಷಿಯಾಗಿ ಇರಬೇಕು ಎಂದು ಬಯಸುವ ಕುಸುಮಾ ಇದೀಗ ದೇವರ ಮೊರೆ ಹೋಗಿದ್ದಾಳೆ. ಎಲ್ಲಿ ತನ್ನ ಸೊಸೆಗೆ ಎಲ್ಲಾ ವಿಚಾರ ಗೊತ್ತಾಗುತ್ತೆ ಎಂದು ಹೆದರಿ, ಪುರೋಹಿತರಿಗೆ ಕರೆ ಮಾಡಿ, ವೃತದ ಬಗ್ಗೆ ತಿಳ್ಕೋಳ್ತಾಳೆ ಕುಸುಮಾ.
ಅರ್ಚಕರು ಹೇಳುವಂತೆ ಕುಸುಮಾ ತಾನೇ ಕೈಯಾರೆ 108 ಹಣತೆಗಳನ್ನು ತಯಾರಿಸಿ ಅದಕ್ಕೆ ಬತ್ತಿ, ಎಣ್ಣೆ ಹಾಕಿ ದೀಪ ಹಚ್ಚಿ ಆರತಿ ಬೆಳಗಬೇಕು. ವ್ರತ ಮುಗಿಯುವರೆಗೂ ತಿಂಡಿ, ಊಟ, ನೀರು ಏನೂ ಸೇವಿಸಬಾರದು ಎನ್ನುತ್ತಾರೆ. ಇದಕ್ಕೆ ಕುಸುಮಾ ಒಪ್ಪುತ್ತಾಳೆ. ಮಗ, ಸೊಸೆ ಜೀವನ ಸರಿ ಆಗಬೇಕೆಂಬ ಕಾರಣಕ್ಕೆ ಉಪವಾಸವಿದ್ದು ವ್ರತ ಮಾಡಲು ಶುರು ಮಾಡುತ್ತಾಳೆ.
ಆದ್ರೆ ನಿಜಕ್ಕೂ ಈ ವೃತದಿಂದ ತಾಂಡವ್ ಸರಿಯಾಗೋದಕ್ಕೆ ಮನಸು ಬದಲಾಯಿಸೋದಕ್ಕೆ ಸಾಧ್ಯಾನ? ಹಾಗೆ ಬದಲಾಗಬೇಕಾದ್ರೆ ಭಾಗ್ಯಾಳ ಗುಣ ನೋಡಿಯೇ ಬದಲಾಗಬೇಕಿತ್ತು, ಆದ್ರೆ ಅದು ಆಗಿಯೆ ಇಲ್ಲ. ಮುಂದಿನ ಎಪಿಸೋಡಲ್ಲಿ ಏನಾಗುತ್ತೆ ಕಾದು ನೋಡಬೇಕು.