ರಾಮಾಯಣದ ಸೀತಾ ಪಾತ್ರಧಾರಿ ದೀಪಿಕಾ ಚಿಖಾಲಿಯಾ ಹಿಂದೆ B ಗ್ರೇಡ್ ಸಿನಿಮಾದಲ್ಲೂ ನಟಿಸಿದ್ದರು!
ರಮಾನಂದ ಸಾಗರ್ ಅವರ ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ಜನರನ್ನು ರಂಜಿಸಿದ್ದ ನಟಿ ದೀಪಿಕಾ ಚಿಖಾಲಿಯಾ ಕನ್ನಡದಲ್ಲಿ ಶಂಕರ್ ನಾಗ್, ಅಂಬರೀಷ್ ಜೊತೆಯೂ ನಟಿಸಿದ್ದರು, ಅಷ್ಟೇ ಅಲ್ಲ ಇವರು ಬಿ ಗ್ರೇಡ್ ಸಿನಿಮಾದಲ್ಲಿ ನಟಿಸಿದ್ದರು ಗೊತ್ತಾ?
ರಾಮಾಯಣದ ಸೀತೆಗೆ 58 ವರ್ಷ ವಯಸ್ಸು
ರಮಾನಂದ ಸಾಗರ್ ಅವರ ರಾಮಾಯಣದಲ್ಲಿ ಸೀತೆಯ ಪಾತ್ರ ನಿರ್ವಹಿಸಿದ ದೀಪಿಕಾ ಚಿಖಾಲಿಯಾ (Deepika Chikhalia) ಅವರಿಗೆ ಇದೀಗ 58 ವರ್ಷ. ಈ ವಯಸ್ಸಿನಲ್ಲಿಯೂ, ಸಾಕಷ್ಟು ಗ್ಲಾಮರಸ್ ಆಗಿ ಕಾಣುತ್ತಾರೆ ದೀಪಿಕಾ.
ದೀಪಿಕಾ ತನ್ನ 14ನೇ ವಯಸ್ಸಿನಲ್ಲಿ ತನ್ನ ವೃತ್ತಿಜೀವನ ಆರಂಭಿಸಿದರು
ಸೀತಾ ಅಂದರೆ ದೀಪಿಕಾ ಚಿಖಾಲಿಯಾ ಕೇವಲ 14ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಜಾಹೀರಾತುಗಳಲ್ಲಿ ಮೊದಲಿಗೆ ಕಾಣಿಸಿಕೊಳ್ಳುತ್ತಿದ್ದ ದೀಪಿಕಾ, ಕ್ರಮೇಣ ಸೀರಿಯಲ್, ಸಿನಿಮಾಗಳ ಮೂಲಕ ಮನೆಮಾತಾದರು.
16ನೇ ವಯಸ್ಸಿನಲ್ಲಿ ಸೀತೆಯಾದ ದೀಪಿಕಾ
ರಮಾನಂದ ಸಾಗರ್ (Ramanand Sagar) ರಾಮಾಯಣಕ್ಕೆ ಸಹಿ ಹಾಕಿದಾಗ ದೀಪಿಕಾ ಚಿಖಾಲಿಯಾಗೆ ಕೇವಲ 16 ವರ್ಷ. ಆ ವಯಸ್ಸಿನಲ್ಲೇ ಸೀತೆಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದ ದೀಪಿಕಾ ಅವರನ್ನು ಪ್ರತಿ ಮನೆಯಲ್ಲೂ ಸೀತಾ ಮಾತೆಯಂತೆ ಪೂಜಿಸುತ್ತಿದ್ದರು.
ದೀಪಿಕಾ ಚಿಖಾಲಿಯಾ ಸೀತಾ ಪಾತ್ರವನ್ನು ಪಡೆದದ್ದು ಹೀಗೆ
ಸೀತೆಯ ಪಾತ್ರವನ್ನು ಪಡೆಯುವುದು ದೀಪಿಕಾ ಚಿಖಾಲಿಯಾಗೆ ಸುಲಭವಾಗಿರಲಿಲ್ಲ. 25 ಕಲಾವಿದರು ಒಟ್ಟಿಗೆ ಸ್ಕ್ರೀನ್ ಟೆಸ್ಟ್ ನೀಡಿದರು. ಸಂಭಾಷಣೆಗಳಿಂದ ಹಿಡಿದು ಎಕ್ಸ್ ಪ್ರೆಷನ್, ನಡಿಗೆ ಹೀಗೆ ಎಲ್ಲದರಲ್ಲೂ ಸ್ಕ್ರೀನ್ ಟೆಸ್ಟ್ ನಡೆದಿತ್ತು. ಕೊನೆಗೆ ಈ ಪಾತ್ರಕ್ಕೆ ದೀಪಿಕಾ ಆಯ್ಕೆಯಾದದ್ದು ಇತಿಹಾಸ.
ಸೀತೆಯ ಪಾತ್ರದಿಂದ ದೀಪಿಕಾ ಚಿಖಾಲಿಯಾ ಪ್ರಸಿದ್ಧರಾದರು
ರಾಮಾಯಣದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಿದ ನಂತರ ದೀಪಿಕಾ ಚಿಖಾಲಿಯಾ ಮನೆಮಾತಾದರು. ಅವರ ಜನಪ್ರಿಯತೆ ಎಷ್ಟು ಹೆಚ್ಚಿತ್ತೆಂದರೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದರು.
ಬಿ ಗ್ರೇಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದ ದೀಪಿಕಾ
ರಾಮಾಯಣಕ್ಕೂ ಮುನ್ನ ದೀಪಿಕಾ ಚಿಖಾಲಿಯಾ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಮೇರಿ ಲೈಲಾ, ಭಗವಾನ್ ದಾದಾ , ರಾತ್ ಕಿ ಅಂಧೇರಾ, ಖುದಾಯಿ, ಚೀಕ್ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಅವುಗಳಲ್ಲಿ ಕೆಲವು ಬಿ ಗ್ರೇಡ್ ಚಲನಚಿತ್ರಗಳು(B grade film) ಸಹ ಇದ್ದವು.
ಕನ್ನಡ ಸಿನಿಮಾದಲ್ಲೂ ನಟನೆ
ದೀಪಿಕಾ ಚಿಖಾಲಿಯಾ ಕನ್ನಡ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡದಲ್ಲಿ ಶಂಕರ್ ನಾಗ್ ಜೊತೆ ಹೊಸ ಜೀವನ, ಅಂಬರೀಶ್ ಜೊತೆ ಇಂದ್ರಜಿತ್, ಕಾಲಚಕ್ರ, ಮೇಯರ್ ಪ್ರಭಾಕರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ದೀಪಿಕಾ ಚಿಖಾಲಿಯಾ ಮದುವೆ
ದೀಪಿಕಾ ಚಿಖಾಲಿಯಾ 1992 ರಲ್ಲಿ ಮೇಕಪ್ ಬಿಂದಿ ಮತ್ತು ಟಿಪ್ಸ್ ಮತ್ತು ನೈಲ್ ಪಾಲಿಶ್ ಮಾಲೀಕ ಹೇಮಂತ್ ಟೋಪಿವಾಲಾ (Hemanth Topiwala)ಅವರನ್ನು ವಿವಾಹವಾದರು. ಈ ದಂಪತಿಗೆ ನಿಧಿ ಟೋಪಿವಾಲಾ ಮತ್ತು ಜೂಹಿ ಟೋಪಿವಾಲಾ ಎಂಬ ಇಬ್ಬರು ಪುತ್ರಿಯರಿದ್ದಾರೆ.
ದೀಪಿಕಾ ಚಿಖಾಲಿಯಾ ಸಂಸದೆಯಾಗಿದ್ದರು
ದೀಪಿಕಾ ಚಿಖಾಲಿಯಾ ಸಂಸದೆ(MP) ಕೂಡ ಆಗಿದ್ದರು. 1991ರ ಲೋಕಸಭಾ ಚುನಾವಣೆಯಲ್ಲಿ ವಡೋದರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ದೀಪಿಕಾ ಚಿಖಾಲಿಯಾ ನಿಜ ಜೀವನದಲ್ಲಿ ಗ್ಲಾಮರಸ್
ರಾಮಾಯಣದ ಸೀತಾ ದೀಪಿಕಾ ಚಿಖಾಲಿಯಾ ನಿಜ ಜೀವನದಲ್ಲಿ ಸಾಕಷ್ಟು ಗ್ಲಾಮರಸ್ ಆಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೆ ಆಕ್ಟಿವ್ ಆಗಿದ್ದು ಮತ್ತು ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.