- Home
- Entertainment
- TV Talk
- TV Serial Actors Salary: ಅಬ್ಬಬ್ಬಾ… ಒಂದು ಎಪಿಸೋಡ್ ಗೆ ಸೀರಿಯಲ್ ನಟಿಯರು ಇಷ್ಟೊಂದು ಸಂಭಾವನೆ ಪಡೆಯುತ್ತಾರೆಯೇ ?
TV Serial Actors Salary: ಅಬ್ಬಬ್ಬಾ… ಒಂದು ಎಪಿಸೋಡ್ ಗೆ ಸೀರಿಯಲ್ ನಟಿಯರು ಇಷ್ಟೊಂದು ಸಂಭಾವನೆ ಪಡೆಯುತ್ತಾರೆಯೇ ?
ಕನ್ನಡ ಕಿರುತೆರೆಯ ನಟಿಯರು ಒಂದು ಎಪಿಸೋಡ್ ಗೆ ಎಷ್ಟು ಹಣ ಪಡೆಯುತ್ತಾರೆ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮಾಹಿತಿ ಪ್ರಕಾರ ವೇತನದ ಮಾಹಿತಿ ಇಲ್ಲಿದೆ.

ಕನ್ನಡ ಕಿರುತೆರೆಯ ತಾರೆಯರು ಎಷ್ಟು ಸ್ಯಾಲರಿ ಪಡೆಯುತ್ತಾರೆ ಎನ್ನುವ ಮಾಹಿತಿ ನಿಮಗಿದೆಯೇ? ಇಲ್ಲಿದೆ ಕನ್ನಡ ಸೀರಿಯಲ್ ನ ಜನಪ್ರಿಯ ನಟಿಯರು ಒಂದು ಎಪಿಸೋಡ್ ಗಾಗಿ ಎಷ್ಟು ಸಂಭಾವನೆ (remuneration) ಪಡೆಯುತ್ತಾರೆ? ಇಲ್ಲಿದೆ ಆ ಕುರಿತು ಮಾಹಿತಿ.
ವೈಷ್ಣವಿ ಗೌಡ
ಅಗ್ನಿ ಸಾಕ್ಷಿ, ಸೀತಾ ರಾಮ ಧಾರಾವಾಹಿಗಳಲ್ಲಿ ನಟಿಸಿ ಕರ್ನಾಟಕದ ಜನಮನ ಗೆದ್ದ ನಟಿ ವೈಷ್ಣವಿ ಗೌಡ ಒಂದು ಎಪಿಸೋಡ್ ಗೆ 25000 ದಿಂದ 30,000 ವರೆಗೆ ಸಂಭಾವನೆ ಪಡೆಯುತ್ತಾರೆ.
ಅಮೂಲ್ಯ ಗೌಡ
ಕಮಲಿ ಹಾಗೂ ಶ್ರೀ ಗೌರಿ ಧಾರಾವಾಹಿಯಲ್ಲಿ ನಟಿಸಿದ ನಟಿ ಅಮೂಲ್ಯ ಗೌಡ (Amulya Gowda) 15000 ಸಂಭಾವನೆ ಪಡೆಯುತ್ತಿದ್ದರು.
ಮೋಕ್ಷಿತಾ ಪೈ
ಪಾರು ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ನಟಿ ಮೋಕ್ಷಿತಾ ಪೈ (Mokshitha Pai) ಸುಮಾರು 25,000 ಸಂಭಾವನೆ ಪಡೆಯುತ್ತಿದ್ದರು.
ನೇಹಾ ಗೌಡ
ನಟಿ ನೇಹಾ ಗೌಡ (Neha Gowda) ಒಂದು ಎಪಿಸೋಡ್ ಗೆ ಆರಂಭದಲ್ಲಿ ಸುಮಾರು 10000 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ನಂತರ ಇವರ ಸಂಭಾವನೆ ಹೆಚ್ಚಾಗಿರುವ ಸಾಧ್ಯತೆ ಇದೆ.
ರಂಜನಿ ರಾಘವನ್
ನಟಿ ರಂಜನಿ ರಾಘವನ್ (Ranjani Raghavan) ಕನ್ನಡತಿ ಧಾರಾವಾಹಿಗಾಗಿ ಸುಮಾರು 30,000 ರೂ. ಸಂಭಾವನೆ ಪಡೆಯುತ್ತಿದ್ದರು. ಇದೀಗ ನಟಿ ಸಿನಿಮಾ ನಿರ್ದೇಶಕಿಯಾಗಿ ಭಡ್ತಿ ಪಡೆದಿದ್ದಾರೆ.
ಭವ್ಯ ಗೌಡ
ಗೀತಾ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ನಟಿ ಭವ್ಯಾ ಗೌಡ ಇದೀಗ ಕರ್ಣ ಧಾರಾವಾಹಿಯಲ್ಲಿ ನಿಧಿಯಾಗಿ ನಟಿಸುತ್ತಿದ್ದಾರೆ, ಇವರು ಒಂದು ಎಪಿಸೋಡ್ ಗೆ 20000 ಪಡೆಯುತ್ತಾರೆ.
ನಿಶಾ ರವಿಕೃಷ್ಣನ್
ಗಟ್ಟಿಮೇಳ ಧಾರಾವಾಹಿಯಲ್ಲಿ ಬಜಾರಿ ರೌಡಿ ಬೇಬಿ ಅಮೂಲ್ಯ ಆಗಿ ನಟಿಸಿದ್ದ ನಟಿ ನಿಶಾ ರವಿಕೃಷ್ಣನ್ (Nisha Ravikrishnan), ಇದೀಗ ಅಣ್ಣಯ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ, ಇವರು ಪ್ರಸ್ತುತ 35000 ಸಂಭಾವನೆ ಪಡೆಯುತ್ತಾರೆ.
ಗೌತಮಿ ಜಾಧವ್
ಸತ್ಯ ಸೀರಿಯಲ್ ನಲ್ಲಿ ನಟಿಸಿ ಲೇಡಿ ರಾಮಾಚಾರಿ ಎಂದೇ ಖಾತಿ ಪಡೆದ ನಟಿ ಗೌತಮಿ ಜಾಧವ್ ಬರೋಬ್ಬರಿ 35000 ರೂ ಸಂಭಾವನೆ ಪಡೆಯುತ್ತಿದ್ದರು. ಸತ್ಯ ಸೀರಿಯಲ್ ಬಳಿಕ ನಟಿ ಬೇರೆ ಯಾವ ಧಾರಾವಾಹಿಯಲ್ಲೂ ನಟಿಸಿಲ್ಲ.
ಮೇಘಾ ಶೆಟ್ಟಿ
ಮೇಘಾ ಶೆಟ್ಟಿ (Megha Shetty) ನಟಿಸಿದ್ದು ಕೇವಲ ಒಂದೇ ಒಂದು ಧಾರಾವಾಹಿಯಲ್ಲಿ, ಅದು ಜೊತೆ ಜೊತೆಯಲಿ. ಆದಾದ ಬಳಿಕ ಅವರು ಸಿನಿಮಾದಲ್ಲಿ ನಟಿಸುವಲ್ಲಿ ಹಾಗೂ ಸೀರಿಯಲ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದರು. ಇವರು ಬರೋಬ್ಬರಿ 40000 ರೂ ಸಂಭಾವನೆ ಪಡೆಯುತ್ತಿದ್ದರು.