ಕುಟುಂಬ ದೊಡ್ಡದಾಗುತ್ತಿದೆ; ಸಿಹಿ ಸುದ್ದಿ ಕೊಟ್ಟ 'ಕಾವೇರಿ ಕನ್ನಡ ಮೀಡಿಯಂ' ನಟ ರಕ್ಷತ್!
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಕಿರುತೆರೆ ನಟ ರಕ್ಷಿತ್ ಅರಸ್. ಫೋಟೋ ಶೂಟ್ ಮೂಲಕ ಗುಡ್ ನ್ಯೂಸ್ ರಿವೀಲ್ ಮಾಡಿದ್ದಾರೆ.

ಕಾವೇರಿ ಕನ್ನಡ ಮೀಡಿಯಂ, ಮಹಾದೇವಿ ಮತ್ತು ಮಾಂಗಲ್ಯಂ ತಂತು ನಾನೇನಾ ಧಾರಾವಾಹಿಯಲ್ಲಿ ಅಭಿನಯಿಸಿರುವ ರಕ್ಷಿತ್ ಅರಸ್ (Rakshit Urs).
ರಕ್ಷಿತ್ ಅರಸ್ ಮತ್ತು ಮನೋರಂಜಿತಾ ಜೈನ್ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಪ್ರೇಮಿಗಳ ದಿನ (Valentines Day) ಎಕ್ಸಟ್ರಾ ಸ್ವೀಟ್ ಆಗಿದೆ. ನಮ್ಮ ಕುಟುಂಬ ಬಳೆಯುತ್ತಿದೆ ಎಂದು ಮನೋರಂಜಿತಾ ಜೈನ್ ಬರೆದುಕೊಂಡಿದ್ದಾರೆ.
ಪಿಂಕ್ ಶರ್ಟ್ ಆಂಡ್ ವೈಟ್ ಪ್ಯಾಂಟ್‌ನಲ್ಲಿ ರಕ್ಷಿತ್ ಅರಸ್ ಮತ್ತು ಪಿಂಕ್ ಗೌನ್‌ನಲ್ಲಿ ಮನೋರಜಿತಾ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ.
ಯಜಮಾನಿ ಧಾರಾವಾಹಿಯಲ್ಲಿ ನಾಯಕನ ತಮ್ಮನಾಗಿ ನಟಿಸಿರುವ ರಕ್ಷಿತ್ ಅರಸ್ ಮತ್ತೆ ವಸಂತ ಧಾರಾವಾಹಿಯಲ್ಲಿ ವಸಂತನಾಗಿ ಸಕತ್ ಮಿಂಚಿದರು.
ಮುದ್ದು ಮಣಿಗಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ಕಾವೇರಿ ಕನ್ನಡ ಮೀಡಿಯಂನಲ್ಲಿ ಮಿಂಚುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.