MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • TV Talk
  • ಕಿರುತೆರೆ ಆಯ್ತು, ಬೆಳ್ಳಿತೆರೆಯಲ್ಲೂ ಮೋಡಿ ಮಾಡಲು ‘ಕನ್ಯಾಕುಮಾರಿ’ ಆಸಿಯಾ ರೆಡಿ!

ಕಿರುತೆರೆ ಆಯ್ತು, ಬೆಳ್ಳಿತೆರೆಯಲ್ಲೂ ಮೋಡಿ ಮಾಡಲು ‘ಕನ್ಯಾಕುಮಾರಿ’ ಆಸಿಯಾ ರೆಡಿ!

ಕನ್ನಡ ಕಿರುತೆರೆಗೂ - ಹಿರಿತೆರೆಗೂ ಆಳವಾದ ಸಂಬಂಧ ಇದೆ. ಹಲವಾರು ಸ್ಟಾರ್ ನಟರು ತಮ್ಮ ನಟನೆಯ ಜರ್ನಿ ಆರಂಭಿಸಿದ್ದೇ ಈ ಕಿರುತೆರೆಯಿಂದ, ಇತ್ತೀಚೆಗೂ ಹಲವಾರು ಕಿರುತೆರೆ ನಟಿಯರು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ, ಅದಕ್ಕೀಗ ಹೊಸ ಸೇರ್ಪಡೆ ಆಸಿಯಾ ಫಿರ್ದೋಸೆ. 

2 Min read
Author : Contributor Asianet
Published : Jan 04 2023, 03:37 PM IST
Share this Photo Gallery
  • FB
  • TW
  • Linkdin
  • Whatsapp
19

ಆಸಿಯಾ ಫಿರ್ದೋಸೆ ಅಂದ್ರೆ ಹೆಚ್ಚಿನ ಜನಕ್ಕೆ ಯಾರು ಎಂದು ಗೊತ್ತಾಗುವುದೇ ಇರಬಹುದು, ಆದರೆ ಕನ್ನಿಕಾ ಎಂದರೆ ಕಿರುತೆರೆಯ (small screen) ಪ್ರತಿಯೊಬ್ಬರಿಗೂ ಗೊತ್ತಿರೋ ಹೆಸರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಕನ್ನಿಕಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಆಸಿಯಾ ಫಿರ್ದೋಸೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಬಿಬಿಎ ಪದವಿಧರೆ ಆಗಿರುವ ಆಸಿಯಾ ಫಿರ್ದೋಸೆ ಆಪ್‌ ಆ್ಯಕ್ಟಿಂಗ್ ಸಂಸ್ಥೆಯಲ್ಲಿ ನಟನೆ ಕಲಿತು ಬಳಿಕ ಮಾಡೆಲಿಂಗ್ (Modeling), ನಂತರ ಸಿರಿಯಲ್ ನಲ್ಲೂ ಸಣ್ಣಪುಟ್ಟ ಪಾತ್ರಗಳಲ್ಲಿ ಕನ್ಯಾಕುಮಾರಿ ಧಾರವಾಹಿಗೂ ಮುನ್ನ ಅಭಿನಯಿಸಿದ್ದರು. 

39

ಇವರು ಬಿಬಿಎ ಕೊನೆ ವರ್ಷದಲ್ಲಿರುವಾಗ 'ನಾನು ನನ್ನ ಕನಸು' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಆದರೆ ಕೊರೋನಾ ಲಾಕ್‌ಡೌನ್‌ನಿಂದ ಆ ಧಾರಾವಾಹಿ ಸಂಪೂರ್ಣವಾಗಿ ನಿಂತುಬಿಟ್ಟಿತ್ತು. ಇದಾದ ಮೇಲೆ ಇವರು ನಿರೂಪಕಿಯಾಗಿ (anchor), ನಂತರ ಮಾಡಲಿಂಗ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು.

49

ಕನ್ಯಾಕುಮಾರಿ ಧಾರಾವಾಹಿಗೆ ಆಯ್ಕೆಯಾಗಿದ್ದೇ ವಿಚಿತ್ರ ಸನ್ನಿವೇಶದ ಮೂಲಕ. ವಿಲನ್ ಯಾಮಿನಿ ಪಾತ್ರಕ್ಕೆ ಮೊದಲು ಆಡಿಷನ್‌ ಕೊಟ್ಟು ವಿಫಲವಾಗಿ ಆಸಿಯಾ ಸುಮ್ಮನಾಗಿದ್ದರಂತೆ. ಆದರೆ ನಂತರ ಟೀಮಿನಿಂದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಡುವಂತೆ ಹೇಳಿದಾಗ, ಆ ಪಾತ್ರಕ್ಕೆ ಆಡೀಶನ್ ಕೊಟ್ಟು, ಕೊನೆಗೆ ಹಲವು ಜನರ ಮಧ್ಯೆ ಆಸಿಯಾ ಆಯ್ಕೆಯಾಗಿದ್ದರು. 

59

ಆಸಿಯಾ ತಮ್ಮ ಮುಗ್ಧ ಅಭಿನಯದಿಂದಲೇ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕನ್ನಿಕಾ ಮತ್ತು ಚರಣ್ ಕೆಮೆಸ್ಟ್ರಿಯೂ ಜನರಿಗೆ ಇಷ್ಟವಾಗಿತ್ತು. ಆಸಿಯಾ ಫಿರ್ದೋಸೆ ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷ ಫಾಲೋವರ್ಸ್‌ನ ಹೊಂದಿದ್ದಾರೆ. ಧಾರಾವಾಹಿ, ಫೋಟೋಶೂಟ್ ಮತ್ತು ಮಾಡಲಿಂಗ್ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ.

69

ಇದೀಗ ಆಸಿಯಾ ಸಿನಿಮಾದಲ್ಲಿ ಮಿಂಚಲು (ready to shiney in big screen) ರೆಡಿಯಾಗಿದ್ದಾರೆ. ಇವರು ಎಲ್. ಭರತ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸಿರುವ ಮೊದಲ ಚಿತ್ರ ‘ದ್ವಂದ್ವ’ದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಡ್ರಾಮ ಜೊತೆಗೆ ಸೈನ್ಸ್ ಫಿಕ್ಷನ್ ಎಳೆ ಹೊಂದಿರುವ ಚಿತ್ರ. 

79

ಈ ಚಿತ್ರ 12 ಗಂಟೆಗಳ ನಡುವೆ ನಡೆಯುವ ಕಥೆಯನ್ನು ಹೊಂದಿದೆ. ಹೈಪರ್ ಟೈಮೀಸಿಯಾ ಎಂಬ ಅಪರೂಪದ ಕಾಯಿಲೆ ಇರುವ ಹುಡುಗಿಯು ಒಮ್ಮೆ ಏನನ್ನಾದರೂ ನೋಡಿದರೆ, ಹತ್ತಿಪ್ಪತ್ತು ವರ್ಷಗಳ ಕಾಲ ಅದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವ ಶಕ್ತಿ ಹೊಂದಿರುತ್ತಾಳೆ. ಇದರಿಂದ ಏನೆಲ್ಲಾ ನಡೆಯುತ್ತದೆ ಅನ್ನೋದು ಕಥೆಯಾಗಿದೆ. 

89

ಈ ಚಿತ್ರದಲ್ಲಿ ತಿಲಕ್ ಶೇಖರ್ ನಾಯಕನಾಗಿ ನಟಿಸುತ್ತಿದ್ದಾರೆ, ಅವರಿಗೆ ನಾಯಕಿಯರಾಗಿ ಆಸೀಯಾ ಫಿರ್ದೋಸೆ ಮತ್ತು ನಯನಾ ತೆರೆ ಹಂಚಿಕೊಂಡಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದ್ದು, ಶೀಘ್ರದಲ್ಲಿ ತೆರೆ ಮೇಲೆ ಬಂದು ನಿಮ್ಮನ್ನು ರಂಜಿಸಲು ರೆಡಿಯಾಗ್ತಿದ್ದಾರೆ ಆಸಿಯಾ. 

99

ಅಷ್ಟೇ ಅಲ್ಲ ಆಸಿಯಾ ನಟ ಕೋಮಲ್ ನಟಿಸುತ್ತಿರುವ ‘ಕಾಲಾಯ ತಸ್ಮಯೇ ನಮಃ’ ಚಿತ್ರದಲ್ಲೂ ಕೋಮಲ್ ಗೆ ನಾಯಕಿಯಾಗಿ (heroine) ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಮಿಂಚಿದಂತೆ ಆಸಿಯಾ ಹಿರಿತೆರೆಯಲ್ಲೂ ಹೆಸರು ಮಾಡುತ್ತಾರಾ? ಜನರನ್ನು ರಂಜಿಸಲು ಯಶಸ್ವಿಯಾಗ್ತಾರ? ಅನ್ನೋದನ್ನು ಕಾದು ನೋಡಬೇಕು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CA
Contributor Asianet
 

Latest Videos
Recommended Stories
Recommended image1
ನಾ ನಿನ್ನ ಬಿಡಲಾರೆ ಹಿತಾ@ 9: ನಟನೆಯಿಂದ ಮೋಡಿ ಮಾಡ್ತಿರೋ ಮಹಿತಾಳ ಕುತೂಹಲದ ಸ್ಟೋರಿ ಇಲ್ಲಿದೆ
Recommended image2
ನಟಿ ಮೇಘಾ ಶೆಟ್ಟಿ ಕ್ಯೂಟ್​ ಫೋಟೋಶೂಟ್​: ಪಡ್ಡೆಗಳ ನಿದ್ದೆಗೆಡಿಸಿದ 'ಜೊತೆ ಜೊತೆಯಲಿ' ತಾರೆ
Recommended image3
ದಳಪತಿ ವಿಜಯ್​-ತ್ರಿಶಾ ಫಿಲ್ಮ್​ ರೀ-ರಿಲೀಸ್​: ಮಗನ ಸಿನಿಮಾಕ್ಕೇ ಪೈಪೋಟಿ? ಬಾಕ್ಸ್​ ಆಫೀಸ್​ ಕ್ಲ್ಯಾಶ್​?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved