ರೆಡ್ ಡ್ರೆಸ್ ಹಾಕಿ ದೃಷ್ಟಿಯಾಯ್ತು..! ಕನ್ನಡತಿ ನಟಿ ರಂಜನಿಗೆ ಹೈ ಫಿವರ್..!
- ಕನ್ನಡತಿ(Kannadathi) ನಟಿಗೆ ಕೆಂಪು ಡ್ರೆಸ್(Red Dress) ಹಾಕಿದ್ರೆ ದೃಷ್ಟಿಯಾಗುತ್ತೆ
- ದೃಷ್ಟಿ ತಾಕಿ ಹೈಫಿವರ್..! ರಂಜನಿ ರಂಜನಿ ರಾಘವನ್ (Ranjani Raghavan) ಹೇಳಿದ್ದಿಷ್ಟು
ಕಿರುತೆರೆಯ ಪ್ರಸಿದ್ಧ ಕನ್ನಡ ಧಾರವಾಹಿ ಕನ್ನಡತಿಯ(Kannadathi) ನಟಿ ರಂಜನಿ ರಾಘವನ್ (Ranjani Raghavan)ಅವರಿಗೆ ಕೆಂಪು ಬಟ್ಟೆ ಆಗೋದಿಲ್ವಂತೆ. ಇದನ್ನು ಇನ್ಯಾರೋ ಹೇಳಿದ್ದಲ್ಲ. ಸ್ವತಃ ನಟಿಯೇ ಈ ವಿಚಾರನ್ನು ಶೇರ್ ಮಾಡಿದ್ದಾರೆ.
ಎಲ್ಲರಿಗೂ ಎಲ್ಲ ಬಣ್ಣಗಳು ಇಷ್ಟವಾಗೋದಿಲ್ಲ. ಇಷ್ಟವಾದರೂ ಎಲ್ಲರಿಗೂ ಎಲ್ಲ ಬಣ್ಣ ಚಂದಕ್ಕೆ ಒಪ್ಪುವುದಿಲ್ಲ. ನಟಿ ರಂಜನಿಗೂ ಕೆಂಬಣ್ಣದ ಬಟ್ಟೆಗಳೆಂದರೆ ತುಂಬಾ ಇಷ್ಟವಂತೆ.
ಇತ್ತೀಚೆಗೆ ಸೀರಿಯಲ್ ಭಾಗವಾಗಿ ಭುವಿಯ ಬರ್ತ್‌ಡೇ ಡ್ರೆಸ್ ಕೆಸರಾಗಿ ನಂತರ ರೆಡ್ ಗೌನ್ ಧರಿಸಬೇಕಾಗುತ್ತದೆ. ಸೀರಿಯಲ್‌ನಲ್ಲಿ ಗೌನ್ ಬೇಡ ಬೇಡ ಎನ್ನುವ ಭುವಿ ವಾಸ್ತವದಲ್ಲಿ ರೆಡ್ ಡ್ರೆಸ್ ಹಾಕೋದನ್ನು ಸಖತ್ತಾಗಿ ಎಂಜಾಯ್ ಮಾಡಿದ್ದಾರೆ.
ನೆಟ್ಟೆಡ್ ರೆಡ್ ಗೌನ್‌ನಲ್ಲಿ ಮಿಂಚಿದ ರಂಜನಿ ರಾಘವನ್ ತಮಗೂ ಕೆಂಪು ಬಣ್ಣಕ್ಕೂ ಇರುವ ಸಂಬಂಧವನ್ನು ಶೇರ್ ಮಾಡಿದ್ದಾರೆ. ರಂಜನಿ ಹಾಗೂ ಕೆಂಬಣ್ಣದ ಮಧ್ಯೆ ಒಂದು ಕಥೆಯೇ ಇದೆ. ಏನದು ?
ಇತ್ತೀಚೆಗೆ ನಟಿ ರೆಡ್ ಡ್ರೆಸ್‌ನಲ್ಲಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ಅದರ ಜೊತೆ ಒಂದು ಟಿಪ್ಪಣಿಯನ್ನೂ ಬರೆದಿದ್ದಾರೆ. ಆ ಟಿಪ್ಪಣಿಯಲ್ಲಿ ಬಾಲ್ಯದ ನೆನಪೊಂದನ್ನು ಶೇರ್ ಮಾಡಿದ್ದಾರೆ
Once upon a time, ನಾನು ಪುಟ್ ಮಗು ಇದ್ದಾಗ ಯಾವಾಗ್ಲೋ ಕೆಂಪು ಫ್ರಾಕ್ ಹಾಕಿದ್ದಕ್ಕೆ ದೃಷ್ಟಿ ಆಗಿ ಹೈ ಫೀವರ್ ಬಂದಿತ್ತಂತ ನಮ್ಮಮ್ಮ ಈಗ್ಲು ಅದೇ ಟೆನ್ಶನ್ ನಲ್ಲಿ ಹೇಳ್ತಿರ್ತಾರೆ. ಏನಮ್ಮ ನೀನು ಈ ಕಾಲ್ದಲ್ಲೂ ದೃಷ್ಟಿ-ಗಿಷ್ಟಿ ಅಂದ್ಕೊಂಡು ಅಂತ ನಾನು ಮಾರ್ಡನ್ ಭಾಷಣ ಮಾಡಿದ್ದು ವರ್ಕ್ ಆಗ್ಲಿಲ್ಲ! ಅದ್ರಿಂದ ಮೊನ್ ಮೊನ್ನೆವರೆಗೂ ನಂಗೆ ರೆಡ್ ಕಲರ್ ಬಟ್ಟೆ ತೊಗೊಳ್ಳೋಕೇ ಬಿಡ್ತಿರ್ಲಿಲ್ಲ. ಈ ಸಲ ಎಪಿಸೋಡ್ ನಲ್ಲಿ ಸಿಕ್ಕಿದ್ದೇ ಚಾನ್ಸು ಅಂತ ಕೆಂಪು ಕಲರ್ ಗೌನ್ ಹಾಕೊಂಡ್ ಉಡಾಯ್ಸ್ಬಿಟ್ಟೆ, ಹೆಂಗೆ ನಾವು ? (ಅಮ್ಮಂಗೆ ಯಾರು ಹೇಳ್ಬೇಡಿ) ಎಂದು ಪೋಸ್ಟ್ ಮಾಡಿದ್ದಾರೆ ನಟಿ
ಎಲೆಗಳ ಮಧ್ಯೆ ಇರೋ ಒಂದು ಚಂದದ ಕ್ಲೋಸಪ್ ಫೋಟೋವನ್ನು ರಂಜನಿ ಶೇರ್ ಮಾಡಿದ್ದಾರೆ. ಈ ಫೋಟೋ ತೆಗೀವಾಗ ನನಗಿಂತ ಜಾಸ್ತಿ, ಗಿಡದಲ್ಲಿದ್ದ ಸೊಳ್ಳೆಗಳಿಗೆ ತುಂಬಾ ಸಂತೋಷವಾಗ್ತಿತ್ತು. #ಅವಸ್ಥೆ ಎಂದು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ.
ಹಸಿರುಪೇಟೆ teacher ಕೆಂಪು ಸುಂದರಿ ಹಸಿರು ಎಲೆಗಳ ಮಧ್ಯ, ನಮಸ್ಕಾರ ಹಸಿರು ಪೇಟೆ ಟೀಚರ್, ವಾವ್ ಎಂದು ಹಾರ್ಟ್ ಸಿಂಬಲ್ ಕೊಟ್ಟಿದ್ದಾರೆ ನೆಟ್ಟಿಗರು
ನಿಮ್ಮ ಅಮ್ಮ ಹೇಳಿದ್ದು ನಿಜ. ನಿಮಗೆ ನಿಜವಾಗಲೂ ನಮ್ಮೆಲ್ಲರ ದೃಷ್ಟಿ ಆಗುತ್ತದೆ. ನಿಮಗಿಷ್ಟ ಬಂದ ಹಾಗೆ ready ಆಗಿ, enjoy ಮಾಡಿ, ಎಷ್ಟು ಬೇಕಾದರೂ photoshoot ಮಾಡಿ. ಆದರೆ ಮನೆಗೆ ಹೋದ ಮೇಲೆ ದೃಷ್ಟಿ ತೆಗೆಸಿಕೊಳ್ಳುವುದನ್ನ ಮಾತ್ರ ಮರೆಯಬೇಡಿ. ಅಷ್ಟು ಸುಂದರವಾಗಿ ಕಾಣುತ್ತೀರಿ ನೀವು ಎಂದಿದ್ದಾರೆ ಒಬ್ಬ ಅಭಿಮಾನಿ. ಇನ್ನೊಬ್ಬರು, ಅಮ್ಮನ ಮುಂದೆ ಯಾವ ಮಾಡರ್ನ್ ಮಾತುಗಳು ವರ್ಕ್ ಆಗೋಲ್ಲ. ನಿಜವಾಗ್ಲೂ ದೃಷ್ಟಿ ತೆಗಿಸಿಕೊಳ್ಳಿ ಅಷ್ಟು ಮುದ್ದಾಗಿ ಕಾಣುತ್ತಿದ್ದಿರಿ, ಕೆಂಪು ಗುಲಾಬಿ ಎಂದಿದ್ದಾರೆ.