MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ₹23 ಲಕ್ಷದ ಕಾರು ಖರೀದಿಸಿದ ಕನ್ನಡ ಯೂಟ್ಯೂಬರ್ ಜೋಡಿ: “ಕ್ಯಾಶ್ ಕೊಟ್ಟು ತಗೊಂಡಿದ್ದೇವೆ ಅಂತಾರೆ, ನಮ್ಮ ಕಷ್ಟ ನಮಗೆ ಗೊತ್ತು” ಎಂದ ತಾರೇಶ್

₹23 ಲಕ್ಷದ ಕಾರು ಖರೀದಿಸಿದ ಕನ್ನಡ ಯೂಟ್ಯೂಬರ್ ಜೋಡಿ: “ಕ್ಯಾಶ್ ಕೊಟ್ಟು ತಗೊಂಡಿದ್ದೇವೆ ಅಂತಾರೆ, ನಮ್ಮ ಕಷ್ಟ ನಮಗೆ ಗೊತ್ತು” ಎಂದ ತಾರೇಶ್

₹23 ಲಕ್ಷದ MG Windsor ಖರೀದಿಸಿದ ಕನ್ನಡ ಯೂಟ್ಯೂಬರ್ ಜೋಡಿಗೆ ಬಂದ ನೆಗೆಟಿವ್ ಕಾಮೆಂಟ್‌ಗಳಿಗೆ ತಾರೇಶ್, “ನಮ್ಮ ಕಷ್ಟ ನಮಗೆ ಗೊತ್ತು” ಎಂದು ಖಡಕ್ ಉತ್ತರ ನೀಡಿದ್ದಾರೆ. ಹಾಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

2 Min read
Author : Sushma Hegde
Published : Aug 13 2026, 10:12 AM IST
Share this Photo Gallery
  • FB
  • TW
  • Linkdin
  • Whatsapp
15
ನಮ್ಮ ಕಷ್ಟ ನಮಗೆ ಗೊತ್ತು
Image Credit : Asianet News

ನಮ್ಮ ಕಷ್ಟ ನಮಗೆ ಗೊತ್ತು

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಯೂಟ್ಯೂಬರ್ ಜೋಡಿಯೊಂದು ಇತ್ತೀಚೆಗೆ ಸುಮಾರು ₹23 ಲಕ್ಷ ಮೌಲ್ಯದ MG Windsor ಎಲೆಕ್ಟ್ರಿಕ್ ಕಾರು ಖರೀದಿಸಿದೆ. ಆದರೆ ಕಾರು ಖರೀದಿಸಿದ ಬಳಿಕ ಕೆಲವರು, ₹19 ಲಕ್ಷ ಸಾಲ ಮಾಡದೆ ಕ್ಯಾಶ್ ಕೊಟ್ಟು ಕಾರು ಖರೀದಿಸಿದ್ದಾರೆ ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿರುವುದು ಈ ಜೋಡಿಯ ಬೇಸರಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ತಾರೇಶ್, ನಮ್ಮ ಕಷ್ಟ ಏನು ಅನ್ನೋದು ನಮಗೆ ಗೊತ್ತು. ಒಡವೆ ಇಟ್ಟು, ಸಾಲ ಮಾಡಿ ಕಾರು ತೆಗೆದುಕೊಂಡಿದ್ದೇವೆ ಎಂದು ತಮ್ಮ ಕಾರು ಖರೀದಿಯ ಹಿಂದಿನ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದಾರೆ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಸಂದರ್ಶನ ಒಂದರಲ್ಲಿ .

₹23 ಲಕ್ಷದ ಕಾರು ಖರೀದಿಸಿದ ಜೋಡಿ

ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಹಲವು ಆಧುನಿಕ ಫೀಚರ್‌ಗಳನ್ನು ಹೊಂದಿರುವ MG Windsor EV ಅನ್ನು ಈ ಯೂಟ್ಯೂಬರ್ ಜೋಡಿ ಖರೀದಿಸಿದೆ. ಕಾರು ಖರೀದಿಸಿ ಸುಮಾರು ಮೂರು ತಿಂಗಳಾಗಿದ್ದು, ಮೊದಲ ಸರ್ವಿಸ್ ಕೂಡ ಪೂರ್ಣಗೊಂಡಿದೆ. ಇದೀಗ ತಮ್ಮ ಹೊಸ ಕಾರಿನ ಅನುಭವ, ಕಂಫರ್ಟ್, ಫೀಚರ್‌ಗಳು ಸೇರಿದಂತೆ ಸಂಪೂರ್ಣ ರಿವ್ಯೂ ಅನ್ನು ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
MG ಕಾರು ತಗೋಬೇಕು ಅನ್ನೋದು ಮೊದಲಿನಿಂದಲೂ ಕನಸು
Image Credit : Asianet News

MG ಕಾರು ತಗೋಬೇಕು ಅನ್ನೋದು ಮೊದಲಿನಿಂದಲೂ ಕನಸು

ಕಾರಿನ ಬಗ್ಗೆ ಮಾತನಾಡಿರುವ ತಾರೇಶ್, MG ಬ್ರ್ಯಾಂಡ್ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿತ್ತು ಎಂದು ಹೇಳಿದ್ದಾರೆ. ಕೆಲಸಕ್ಕೆ ಹೋಗುವ ದಾರಿಯಲ್ಲಿ MG ಶೋರೂಮ್ ಕಾಣಿಸುತ್ತಿತ್ತು. ಪ್ರತಿಬಾರಿ ಅದನ್ನು ನೋಡಿದಾಗ, ಒಂದು ದಿನ MG ಕಾರು ತೆಗೆದುಕೊಳ್ಳಬೇಕು” ಎಂದುಕೊಳ್ಳುತ್ತಿದ್ದೆವು. ಆದರೆ ಇದೇ ಕಾರನ್ನು ಖರೀದಿಸುತ್ತೇವೆ ಎಂಬ ಯಾವುದೇ ಯೋಜನೆ ಇರಲಿಲ್ಲ. ಇದು ಅನಿರೀಕ್ಷಿತವಾಗಿ ಕೈಗೂಡಿದ ಕನಸು ಎಂದು ತಾರೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಕಾರಿನ ಸೀಟ್‌ಗಳು ಹಾಗೂ ಕಂಫರ್ಟ್ ಬಗ್ಗೆಯೂ ತಾರೇಶ್ ಅವರ ತಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರಿಗಾಗಿ ಅಮ್ಮನ ಒಡವೆ ಕೂಡ ಇಟ್ಟಿದ್ದರು

ಹೊಸ ಕಾರಿನ ಖರೀದಿಯ ಹಿಂದೆ ತಮ್ಮ ಕುಟುಂಬದ ದೊಡ್ಡ ಹೋರಾಟವಿದೆ ಎಂದು ತಾರೇಶ್ ಭಾವುಕರಾಗಿ ಹೇಳಿದ್ದಾರೆ. ತಮ್ಮ ಹಳೆಯ ಸ್ವಿಫ್ಟ್ ಕಾರನ್ನು ಕೇವಲ ₹4 ಲಕ್ಷಕ್ಕೆ ಮಾರಾಟ ಮಾಡಬೇಕಾಯಿತು. ಕಾರು ಖರೀದಿಗೆ ಹಣ ಹೊಂದಿಸಲು ಅಮ್ಮನ ಒಡವೆಗಳನ್ನು ಕೂಡ ಇಡಬೇಕಾಯಿತು ಎಂದು ತಿಳಿಸಿದ್ದಾರೆ. ಕಾರು, ಇಂಟೀರಿಯರ್ ಹಾಗೂ ಇತರ ಖರ್ಚುಗಳನ್ನು ಸೇರಿಸಿದರೆ ಒಟ್ಟಾರೆ ಸುಮಾರು ₹25 ಲಕ್ಷದಷ್ಟು ಹಣ ಖರ್ಚಾಗಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಹೊರಗಿನಿಂದ ನೋಡಿದವರಿಗೆ ಇದು ಸುಲಭವಾಗಿ ಖರೀದಿಸಿದ ಕಾರಿನಂತೆ ಕಾಣಬಹುದು. ಆದರೆ ಅದರ ಹಿಂದೆ ತಮ್ಮ ಕುಟುಂಬದ ಹಣಕಾಸಿನ ಕಷ್ಟ ಮತ್ತು ಹಲವು ತ್ಯಾಗಗಳಿವೆ ಎಂಬುದು ತಾರೇಶ್ ಮಾತಿನ ಅರ್ಥ.

35
ಕ್ಯಾಶ್ ಕೊಟ್ಟು ಕಾರು ತಗೊಂಡಿದ್ದಾರೆ ಅಂತ ವಿಡಿಯೋ ಮಾಡಿದ್ದಾರೆ
Image Credit : Asianet News

ಕ್ಯಾಶ್ ಕೊಟ್ಟು ಕಾರು ತಗೊಂಡಿದ್ದಾರೆ ಅಂತ ವಿಡಿಯೋ ಮಾಡಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕಾರಿನ ಬಗ್ಗೆ ಬಂದಿರುವ ಕೆಲವೊಂದು ಕಾಮೆಂಟ್‌ಗಳು ಮತ್ತು ವಿಡಿಯೋಗಳ ಬಗ್ಗೆಯೂ ತಾರೇಶ್ ಮಾತನಾಡಿದ್ದಾರೆ. ಯಾರೋ ಒಬ್ಬರು ವಿಡಿಯೋ ಮಾಡಿ ₹19 ಲಕ್ಷ ಲೋನ್ ಮಾಡದೇ ಕ್ಯಾಶ್ ಕೊಟ್ಟು ಕಾರು ತೆಗೆದುಕೊಂಡಿದ್ದಾರೆ ಅಂತ ಹಾಕಿದ್ದಾರೆ. ನಮಗೆ ಗೊತ್ತು ನಮ್ಮ ಕಷ್ಟ ಏನು ಅಂತ. ನಾವು ಒಡವೆ ಇಟ್ಟು, ಲೋನ್ ಮಾಡಿ ಕಾರು ತಗೊಂಡಿದ್ದು ಎಂದು ಅವರು ಹೇಳಿದ್ದಾರೆ.

45
ನೆಗೆಟಿವ್ ಕಮೆಂಟ್ಸ್‌ಗಳಿಂದ ದೂರವಿರುವುದು ಹೇಗೆ?
Image Credit : Asianet News

ನೆಗೆಟಿವ್ ಕಮೆಂಟ್ಸ್‌ಗಳಿಂದ ದೂರವಿರುವುದು ಹೇಗೆ?

ನಾವು ಎಷ್ಟೇ ಪಾಸಿಟಿವ್ ಆಗಿರಲು ಪ್ರಯತ್ನಿಸಿದರೂ, ಒಂದು ಸಣ್ಣ ನೆಗೆಟಿವ್ ಕಮೆಂಟ್ ನಮ್ಮ ಇಡೀ ದಿನದ ನೆಮ್ಮದಿಯನ್ನು ಕೆಡಿಸಬಹುದು. "ನಾವು ಮಾಡ್ತಿರೋದು ತಪ್ಪಾ?", "ಜನ ಯಾಕೆ ಈ ರೀತಿ ಮಾತನಾಡುತ್ತಾರೆ?" ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಲು ಪ್ರಾರಂಭಿಸುತ್ತವೆ. ಸ್ಕ್ರೀನ್‌ನಿಂದ ದೂರವಿರಿ: ನೆಗೆಟಿವ್ ಕಮೆಂಟ್ ಕಂಡ ತಕ್ಷಣ ಫೋನ್ ಪಕ್ಕಕ್ಕಿಟ್ಟು ನಿಮ್ಮ ಕೆಲಸದತ್ತ ಗಮನಹರಿಸಿ.

ಪ್ರತಿಕ್ರಿಯಿಸದಿರಿ: ಪ್ರತಿಯೊಂದು ಕಾಮೆಂಟ್‌ಗೂ ಉತ್ತರ ನೀಡುತ್ತಾ ಕೂತರೆ ನಮ್ಮ ಶಕ್ತಿ ಮತ್ತು ಸಮಯ ಎರಡೂ ಪೋಲಾಗುತ್ತದೆ. ಅವಾಯ್ಡ್ ಮಾಡುವುದನ್ನು ಕಲಿಯಿರಿ: ಅಂತಹ ಕಮೆಂಟ್ಸ್‌ಗಳನ್ನು ಆದಷ್ಟು ನಿರ್ಲಕ್ಷಿಸುವುದೇ ಮನಸ್ಸಿನ ಶಾಂತಿಗೆ ಉತ್ತಮ ಮಾರ್ಗ. ಎಂದು ಹೇಳಿದ್ದಾರೆ, ಕನ್ನಡ ಯೂಟ್ಯೂಬರ್ ತಾರೇಶ್-ಸ್ವಾತಿ.

55
ಕಂಟೆಂಟ್ ಕ್ರಿಯೇಟರ್ಸ್‌ನಿಂದ ವೀಕ್ಷಕರಲ್ಲಿ ಒಂದು ಸಣ್ಣ ವಿನಂತಿ
Image Credit : Asianet News

ಕಂಟೆಂಟ್ ಕ್ರಿಯೇಟರ್ಸ್‌ನಿಂದ ವೀಕ್ಷಕರಲ್ಲಿ ಒಂದು ಸಣ್ಣ ವಿನಂತಿ

ನಾವು ನಿಯತ್ತಾಗಿ, ಪ್ರಾಮಾಣಿಕವಾಗಿ ಮುನ್ನಡೆಯುತ್ತಿರುವಾಗ ಬರುವ ಅನಗತ್ಯ ಟೀಕೆಗಳು ಮನಸ್ಸಿಗೆ ಆಳವಾಗಿ ತಾಗುತ್ತವೆ. ನಿಮಗೆ ಒಬ್ಬರ ವಿಡಿಯೋ ಅಥವಾ ಕೆಲಸ ಇಷ್ಟವಾಗದಿದ್ದರೆ, ದಯವಿಟ್ಟು ಅವರನ್ನು ಡಿಮೋಟಿವೇಟ್ ಮಾಡಲು ಹೋಗಬೇಡಿ. ನೆಗೆಟಿವ್ ಕಮೆಂಟ್ ಹಾಕುವುದರಿಂದ ನಿಮಗೂ ಏನೂ ಸಿಗುವುದಿಲ್ಲ, ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಟಿವಿ ಶೋ
ಮನರಂಜನಾ ಸುದ್ದಿ
ಯೂಟ್ಯೂಬರ್
Latest Videos
Recommended Stories
Recommended image1
ಸ್ಯಾಂಡಲ್‌ವುಡ್‌ನಲ್ಲಿ ಭೀಮನ ಅಮವಾಸ್ಯೆ ಕಳೆ ಹೆಚ್ಚಿಸಿದ ನಟಿ-ನಟಿಯರು!
Recommended image2
Karna Serial ಊಹಿಸದ ಟ್ವಿಸ್ಟ್​: ಅತ್ತ ಕರ್ಣನ ರಹಸ್ಯ ಅಪ್ಪಂಗೆ ಗೊತ್ತಾಯ್ತು, ಇತ್ತ ಅಮ್ಮನ ಜಾಡು ಹಿಡಿದು ಹೊರಟ ಮಗ
Recommended image3
'ನಾವಾಡಿದ ಒಂದ್‌ ಮಾತು ಅವರಿಗೆ ಅರ್ಥ ಆಗಿಲ್ಲ!': ಪತಿ ಅನುಕೂಲ್ ಕಾಲೆಳೆದ ನಟಿ ವೈಷ್ಣವಿ ಗೌಡ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved