- Home
- Entertainment
- TV Talk
- 7 ವರ್ಷ ಯುಟ್ಯೂಬ್ ಕಂಟೆಂಟ್ ಮಾಡಿ, ದುಬಾರಿ ಜಾಗದಲ್ಲೇ ಸೈಟ್ ತಗೊಂಡ ಕನ್ನಡತಿ ವರ್ಷಾ ಕಾವೇರಿ!
7 ವರ್ಷ ಯುಟ್ಯೂಬ್ ಕಂಟೆಂಟ್ ಮಾಡಿ, ದುಬಾರಿ ಜಾಗದಲ್ಲೇ ಸೈಟ್ ತಗೊಂಡ ಕನ್ನಡತಿ ವರ್ಷಾ ಕಾವೇರಿ!
Varsha Kaveri new property purchase: ಕನ್ನಡದ ಹೆಸರಾಂತ ಕಂಟೆಂಟ್ ಕ್ರಿಯೇಟರ್ ವರ್ಷಾ ಕಾವೇರಿ ಅವರು ತಮ್ಮ 7 ವರ್ಷಗಳ ಸುದೀರ್ಘ ಯೂಟ್ಯೂಬ್ ಜರ್ನಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ತಾವು ಕಷ್ಟಪಟ್ಟು ದುಡಿದ ಹಣದಲ್ಲಿ ಸ್ವಂತ ನಿವೇಶನ ಖರೀದಿ ಮಾಡಿದ್ದೇನೆ ಎಂದಿದ್ದಾರೆ.

ನವಿಲು ಬರುವ ಸೈಟ್ ಅದು
ಕಳೆದ 3-4 ತಿಂಗಳುಗಳಿಂದ ನಿರಂತರವಾಗಿ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ ವರ್ಷಾ, ಕೊನೆಗೂ ಪ್ರಕೃತಿಯ ಮಡಿಲಲ್ಲಿರುವ, ಹತ್ತಿರದಲ್ಲೇ ನದಿ ಹರಿಯುವ, ನವಿಲುಗಳು ಬರುವಂತಹ ಅತ್ಯಂತ ಶಾಂತಿಯುತವಾದ ಜಾಗವನ್ನು ಆಯ್ದುಕೊಂಡು ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಈ ವಿಷಯವನ್ನು ಅವರು ತಮ್ಮ ಪೋಷಕರು, ತಂಗಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.
ಆಸ್ತಿ ಹೂಡಿಕೆ ಮಾಡಬೇಕು
"ಯಾವುದೇ ಓವರ್‌ನೈಟ್ ಸಕ್ಸಸ್ ಇರುವುದಿಲ್ಲ, ನಿರಂತರ ಪರಿಶ್ರಮ ಮುಖ್ಯ. ಪ್ರತಿಯೊಬ್ಬ ಹೆಣ್ಣುಮಗಳೂ ಆರ್ಥಿಕವಾಗಿ ಸ್ವತಂತ್ರಳಾಗಬೇಕು. ಚಿನ್ನ, ಮ್ಯೂಚುವಲ್ ಫಂಡ್ಸ್ ಅಥವಾ ಪ್ರಾಪರ್ಟಿಯಂತಹ ಆಸ್ತಿಗಳಲ್ಲಿ (Assets) ಹೂಡಿಕೆ ಮಾಡುವುದು ಭವಿಷ್ಯದ ಸುರಕ್ಷತೆಗೆ ಅಗತ್ಯ" ಎಂದು ಅವರು ಹೇಳಿದ್ದಾರೆ.
ಕನಸು ಕಾಣೋದು ನಿಲ್ಲಿಸಬೇಡಿ
"ನಮ್ಮ ಪರಿಸ್ಥಿತಿ ಏನೇ ಇರಲಿ, ದೊಡ್ಡ ಕನಸು ಕಾಣುವುದನ್ನು ನಿಲ್ಲಿಸಬಾರದು. ನಾವು ಪಾಸಿಟಿವ್ ಆಗಿ ಮ್ಯಾನಿಫೆಸ್ಟ್ ಮಾಡಿದರೆ ಮತ್ತು ಕಠಿಣ ಶ್ರಮ ಪಟ್ಟರೆ ಯಶಸ್ಸು ಖಂಡಿತ ಸಿಗುತ್ತದೆ" ಎಂದು ಹೇಳಿದ್ದಾರೆ.
ಅನಗತ್ಯ ಖರ್ಚು ಮಾಡಬೇಡಿ
ಅನಗತ್ಯ ಖರ್ಚುಗಳನ್ನು ಬದಿಗಿಟ್ಟು, ಸರಿಯಾದ ಉಳಿತಾಯ ಮತ್ತು ಇನ್ವೆಸ್ಟ್‌ಮೆಂಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದೇನೆ. ಇದಕ್ಕಾಗಿ ಅಭಿಮಾನಿಗಳು, ಅವರ ಆಪ್ತ ವಲಯದಿಂದ ಶುಭಾಶಯಗಳನ್ನು ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

