ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ವರ್ಷಾ ಕಾವೇರಿ ಉತ್ತರ ಭಾರತದ ಪ್ರವಾಸದಲ್ಲಿದ್ದಾರೆ.ಇತ್ತೀಚೆಗೆ ತಾಜ್‌ಮಹಲ್‌ಗೆ ಭೇಟಿ ನೀಡಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಬೆಂಗಳೂರು (ಅ.13): ಜಗತ್ತಿನಲ್ಲಿ ಪ್ರೀತಿಗೆ ಸಾಕ್ಷಿಯಾಗಿ ಪ್ರೇಮಿಗಳು ಏನನ್ನಾದರೂ ತೋರಿಸೋದಿದ್ದರೆ, ಅವರಿಗೆ ಮೊದಲು ನೆನಪಾಗೋದೇ ತಾಜ್‌ಮಹಲ್‌. ಪ್ರೀತಿಯ ಮಡದಿ ಮುಮ್ತಾಜ್‌ಗಾಗಿ ರಾಜ ಷಹಜಹಾನ್‌ ಕಟ್ಟಿದ ಶುಭ್ರ ಅಮೃತಶಿಲೆಯ ಪ್ರೇಮಸೌಧ.ಪ್ರೇಮಿಗಳು ಜೋಡಿಯಾಗಿ ಒಮ್ಮೆಯಾದರೂ ತಾಜ್‌ಮಹಲ್‌ಗೆ ಭೇಟಿ ನೀಡಬೇಕು ಎಂದು ಬಯಸುತ್ತಾರೆ. ಬ್ರೇಕ್‌ಅಪ್‌ ಆದವರು ಕೂಡ ಬ್ರೇಕಪ್‌ ಮಾಡಿಕೊಂಡವನ ಮೇಲಿನ ಸಿಟ್ಟಿಗಾದರೂ ತಾಜ್‌ಮಹಲ್‌ಗೆ ಭೇಟಿ ನೀಡಿ ಫೋಟೋ ತೆಗೆಸಿಕೊಳ್ಳುವವರಿದ್ದಾರೆ. ಬಹುಶಃ ಈ 2ನೇ ವಿಚಾರಕ್ಕೆ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ದರ್‌ ವರ್ಷಾ ಕಾವೇರಿ ಸೇರುತ್ತಾರೆ.ನಟ ಹಾಗೂ ಇನ್‌ಫ್ಲುಯೆನ್ಸರ್‌ ಆಗಿರುವ ವರುಣ್‌ ಆರಾಧ್ಯ ಜೊತೆ ಹಲವು ವರ್ಷಗಳ ಕಾಲ ಇವರು ರಿಲೇಷನ್‌ಷಿಪ್‌ನಲ್ಲಿದ್ದರು. ವರ್ಷಗಳಿಂದೀಚೆಗೆ ವರ್ಷಾ ಹಾಗೂ ವರುಣ್‌ ಬೇರೆಬೇರೆಯಾಗಿದ್ದಾರೆ. ಹಾಗಿದ್ದರೂ, ವರ್ಷಾ, ವರುಣ್ ಮಾಡಿದ ಮೋಸದ ಕುರಿತಾಗಿ ಕೆಲವೊಂದು ಪೋಸ್ಟ್‌ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಈಗ ಅವರು ಏಕಾಂಗಿಯಾಗಿ ತಾಜ್‌ಮಹಲ್‌ಗೆ ಭೇಟಿ ನೀಡಿ, ಅದರ ಸೌಂದರ್ಯವನ್ನು ನೋಡಿ ಬಂದಿದ್ದಾರೆ. ಇದಕ್ಕೆ ಹೆಚ್ಚಿನವರು ನಿಮ್ಮ ಕಣ್ಣಲ್ಲಿನ ನೋವು ಈ ಪೋಸ್ಟ್‌ನಲ್ಲಿ ಕಾಣ್ತಿದೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಇತ್ತೀಚೆಗೆ ವರುಣ್‌ ವಿರುದ್ಧ ವರ್ಷಾ ಸೈಬರ್‌ಕ್ರೈಂ ಪೊಲೀಸ್‌ ಠಾಣೆಗೆ ದೂರು ಕೂಡ ನೀಡಿದ್ದರು. ತನ್ನ ಜೊತೆಯಲ್ಲಿದ್ದ ಕೆಲವು ಖಾಸಗಿ ಕ್ಷಣಗಳ ಫೋಟೋಗಳನ್ನು ಪಬ್ಲಿಕ್‌ ಮಾಡುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಹೆಚ್ಚೂ ಕಡಿಮೆ ಇವರಿಬ್ಬರ ರಿಲೇಷನ್‌ಷಿಪ್‌ ಈಗ ಸರಿಪಡಿಸಲಾಗದ ಹಂತಕ್ಕೆ ಹೋಗಿದ್ದು, ಈಗ ತಾಜ್‌ಮಹಲ್‌ ಎದುರಿನ ಫೋಟೋಗಳ ಮೂಲಕ ವರ್ಷಾ ಕಾವೇರಿ ಜೀವನದಲ್ಲಿ ಮುಂದೆ ಸಾಗುವ ವಿಶ್ವಾಸದ ಮಾತನಾಡಿದ್ದಾರೆ.

'ನನ್ನ ಪ್ರಕಾರ ನೀವು ನೇರವಾಗಿ ಮಾತನಾಡ್ತೀರಾ ಅನ್ಸುತ್ತೆ. ಅದಕ್ಕೆ ನಿಮ್ಮ ಜೊತೆ ಯಾರೂ ಇರಲ್ಲ. ನಾನು ಸುಮ್ಮನೆ ಗೆಸ್‌ ಮಾಡಿದೆ. ಯಾಕಂದ್ರೆ ನನ್ನ ಬುದ್ದಿ ಕೂಡ ಹಾಗೆ ಇದೆ. ಅದಕ್ಕೆ ನನ್ನ ಜೊತೆಯಲ್ಲೂ ಯಾರೂ ಇರಲ್ಲ' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ನಾನು ಈ ರೀಲ್‌ಅನ್ನು ಈಗಾಗಲೇ 20ಕ್ಕೂ ಅಧಿಕ ಬಾರಿ ನೋಡಿದ್ದೇನೆ ಎಂದು ವರ್ಷಾಗೆ ಮೆಚ್ಚುಗೆ ಸೂಚಿಸಿದ್ದಾರೆ.

'ನಿಮ್ಮ ಕಣ್ಣಲ್ಲಿ ಏನೋ ಒಂದು ನೋವು ಕಾಣಿಸ್ತಾ ಇದೆ. ಇದೆಲ್ಲವೂ ಆಗುತ್ತೆ. ತಲೆ ಕೆಡಿಸಿಕೊಳ್ಳಬೇಡಿ, ಗಟ್ಟಿಯಾಗಿ ಇರಿ..' ಎಂದು ಇನ್ನೊಬ್ಬರು ಬರೆದಿದ್ದಾರೆ. ತಾಜ್ ಮಹಲ್‌ಗೆ ಹೋಗ್ಬೇಕು ಅನ್ಕೊಂಡ್ರೆ ಹಿಂಗೆ ಆಗೋದು next ಟೈಮ್ ಮಥುರಾ ಹೋಗು..' ಎಂದು ಮತ್ತೊಬ್ಬರು ಬರೆದಿದ್ದಾರೆ.'ಎಲ್ಲರೂ ಹೇ್ತಾರೆ ತಾಜ್‌ಮಹಲ್‌ ಎನ್ನುವುದು ಪ್ರೇಮನಗರಿ ಅಂತಾ. ಆದರೆ, ವೃಂದಾವನ. ಭಾರತದ ಯಾವ ನಗರ ಕೂಡ ವೃಂದಾವನದ ಪ್ರೀತಿಗೆ ಸಾಟಿಯಾಗೋದಿಲ್ಲ' ಎಂದಿದ್ದಾರೆ.

15 ವರ್ಷಗಳ ನಂತರ ಮನೆಗೆ ಹೊಸ ದುಬಾರಿ ಫ್ರಿಡ್ಜ್‌ ತಂದ ವರುಣ್ ಆರಾಧ್ಯ; ಜನರ ಬಿಕ್ಷೆ ಎಂದ ನೆಟ್ಟಿಗರು!

ತಾಜ್‌ಮಹಲ್‌ ಎದುರು ನೀವು ಕೆಂಪು ಡ್ರೆಸ್‌ಹಾಕೊಂಡು ರೀಲ್‌ ಮಾಡಿದ್ದರೆ ಚೆನ್ನಾಗಿ ಕಾಣುತ್ತಿತ್ತು ಎಂದು ಬರೆದಿದ್ದಾರೆ. 'ನೀವು ಪ್ಲೀಸ್‌ ಮತ್ತೆ ವಿಲಾಗ್ಸ್‌ ಮಾಡಿ. ಮತ್ತೆ ನಿಮ್ಮನ್ನ ವರ್ಷಾ ಕಾವೇರಿಯಾಗಿ ನೋಡೋಕೆ ಇಷ್ಟ ಪಡುತ್ತೇವೆ. ನಿಮ್ಮ ವಿಲಾಗ್ಸ್‌ನ ಮಿಸ್‌ ಮಾಡಿಕೊಳ್ತಿದ್ದೇವೆ..' ಎಂದು ಬರೆದಿದ್ದಾರೆ. ನೀವು ತಾಜ್‌ಮಹಲ್‌ಗೆ ಯಾರೊಂದಿಗೆ ಹೋಗಿದ್ದೀರಿ. ಮತ್ತೊಮ್ಮೆ ಸೋಲೋ ಟ್ರಿಪ್‌ಗೆ ಹೋಗಿದ್ದೀನಿ ಅಂತಾ ಹೇಳಬೇಡಿ. ಇದನ್ನು ನಂಬೋಕೆ ನಾವು ಮೂರ್ಖರಲ್ಲ ಎಂದಿದ್ದಾರೆ. ನೀವು ಸರಿಯಾದ ಕೆಲಸ ಮಾಡಿದ್ದೀರಿ ಎಂದಾದಲ್ಲಿ, ಅದರ ಬಗ್ಗೆ ಯೋಚನೆ ಮಾಡೋ ಅಗತ್ಯವಿಲ್ಲ. ನಿಮಗೆ ಹೆಚ್ಚಿನ ಶಕ್ತಿ ಸಿಗಲಿ ಎಂದು ವರ್ಷಾ ಕಾವೇರಿಗೆ ವಿಶ್ವಾಸದ ಮಾತನ್ನಾಡಿದ್ದಾರೆ.

ಅಪ್ಪ ಅಗಲಿದರು, ಹುಡ್ಗಿ ಕೈ ಕೊಟ್ಳು, ಫ್ರೆಂಡ್ ಶಾಶ್ವತವಾಗಿ ಬಿಟ್ಟೋದ; ವರುಣ್ ಆರಾಧ್ಯ ಪರಿಸ್ಥಿತಿ ನೋಡಿ...

View post on Instagram