- Home
- Entertainment
- TV Talk
- Bigg Boss ಆತ್ಮೀಯ ಗೆಳೆಯನನ್ನೇ ಮರೆತುಬಿಟ್ರಾ ತನಿಷಾ? ವರ್ತೂರಾ, ಯಾರವರು ಎಂದು ಕೇಳೋದಾ
Bigg Boss ಆತ್ಮೀಯ ಗೆಳೆಯನನ್ನೇ ಮರೆತುಬಿಟ್ರಾ ತನಿಷಾ? ವರ್ತೂರಾ, ಯಾರವರು ಎಂದು ಕೇಳೋದಾ
ಬಿಗ್ ಬಾಸ್ ಸೀಸನ್ 10ರಲ್ಲಿ ಉತ್ತಮ ಸ್ನೇಹದಿಂದ ಗುರುತಿಸಿಕೊಂಡಿದ್ದ ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್ ಅವರ ಸಂಬಂಧದ ಬಗ್ಗೆ ಗಾಸಿಪ್ ಹಬ್ಬಿತ್ತು. ಆದರೆ ಇತ್ತೀಚೆಗೆ, ವರ್ತೂರು ಸಂತೋಷ್ ಬಗ್ಗೆ ಕೇಳಿದಾಗ, ತನಿಷಾ 'ವರ್ತೂರಾ, ಯಾರವರು?' ಎಂದು ಪ್ರಶ್ನಿಸಿ ಅಚ್ಚರಿ ಮೂಡಿಸಿದ್ದಾರೆ.

ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಸ್ನೇಹ
Bigg Boss ಎಂದರೆ ಅಲ್ಲಿ ಲವ್ ಇಲ್ಲದೇ ಇದ್ರೆ ನಡೆಯತ್ತಾ? ಪ್ರತಿ ಸೀಸನ್‌ನಲ್ಲಿ ಇಂಥವರನ್ನೇ ಹುಡುಕಿ, ಅವರಿಗೆ ಮೊದಲೇ ಹೇಳಿಕೊಟ್ಟೋ ಗೊತ್ತಿಲ್ಲ, ಒಟ್ಟಿನಲ್ಲಿ ಲವ್ ಬರ್ಡ್‌ಗಳನ್ನು ಸೃಷ್ಟಿಸುವುದು ಸರ್ವೇ ಸಾಮಾನ್ಯ. ಕೆಲವೊಮ್ಮೆ ಇಂಥವರು ಮಿತಿ ಮೀರಿ ನಡೆದುಕೊಂಡರೆ, ಮತ್ತೆ ಕೆಲವರು ಆಟಕ್ಕಾಗಿ ತಮಾಷೆಯ ಜೋಡಿಯಾಗಿ ಇರುವುದನ್ನೂ ವೀಕ್ಷಕರು ಇದಾಗಲೇ ನೋಡಿದ್ದಾರೆ. ಅಂದಹಾಗೆ ಬಿಗ್ ಬಾಸ್ ಸೀಸನ್ 10ರಲ್ಲಿ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಸ್ಪರ್ಧಿಗಳಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿತ್ತು. ಬಳಿಕ ಇಬ್ಬರ ಮನಸ್ಸಲ್ಲಿ ಪ್ರೀತಿ ಅರಳಿದೆ ಎನ್ನುವ ಗಾಸಿಪ್ ಹಬ್ಬಿತ್ತು. ಇತರ ಸ್ಪರ್ಧಿಗಳು ಕೂಡ ಈ ಜೋಡಿ ಕಾಲೆಳೆಯುತ್ತಿದ್ರು.
ಹೊರ ಬಂದ ಮೇಲೂ ಸ್ನೇಹ
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ತನಿಷಾ ಹಾಗೂ ವರ್ತೂರು ಸಂತೋಷ್ ಸ್ನೇಹ ಮುಂದುವರಿಸಿದ್ರು. ಅನೇಕ ಬಾರಿ ಭೇಟಿ ಕೂಡ ಆಗಿದ್ದಾರೆ. ಆಗಾಗ ಇಬ್ಬರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರು. ಇದನ್ನೆಲ್ಲಾ ನೋಡಿದ ಫ್ಯಾನ್ಸ್ ಈ ಜೋಡಿ ಮದುವೆ ಆಗೋದು ಪಕ್ಕಾ ಎಂದಿದ್ದರು.
ಮೊದಲೇ ಮದುವೆ
ಇಷ್ಟಾಗುತ್ತಲೇ ವರ್ತೂರು ಸಂತೋಷ್ ವಿರುದ್ಧ ಹುಲಿ ಉಗುರು ಕೇಸ್ ಮಾತ್ರವಲ್ಲದೇ, ಮೊದಲೇ ಮದುವೆಯಾಗಿದ್ದ ಬಗ್ಗೆಯೂ ದೂರು ದಾಖಲಾಗಿತ್ತು. ರ್ತೂರು ಸಂತೋಷ್ ಮದುವೆ ಆಗಿದ್ದರೂ ಅದನ್ನು ಮುಚ್ಚಿಟ್ಟು ಮತ್ತೊಂದು ಮದುವೆ ಆಗಲು ಸಜ್ಜಾಗಿದ್ದಾರೆ ಎಂದು ವರ್ತೂರು ಸಂತೋಷ್ ಮೊದಲ ಪತ್ನಿಯ ತಂದೆ ಆರೋಪಿಸಿದ್ದರು.
ತಾಜಾ ಸುದ್ದಿ
ಅವೆಲ್ಲಾ ಈಗ ಮುಗಿದು ಹೋದ ಕಥೆ ಬಿಡಿ. ಇದೀಗ ತಾಜಾ ತಾಜಾ ಸುದ್ದಿ ಏನೆಂದರೆ, ವರ್ತೂರು ಸಂತೋಷ್ ಅವರು ನಿನ್ನೆಯಷ್ಟೇ ತಮ್ಮ ಹಸು ಮಾಲಾಶ್ರೀಯ ಸೀಮಂತ ಮಾಡಿದ್ದರು. ಅದಕ್ಕೆ ಹಲವರನ್ನು ಆಮಂತ್ರಿಸಿದ್ದರು.
ವರ್ತೂರಾ ಯಾವರವರು?
ಈ ಬಗ್ಗೆ ಸಿನಿಮಾ ಪ್ರಚಾರಕ್ಕೆ ಬಂದಿದ್ದ ತನಿಷಾ ಕುಪ್ಪಂಡ (Tanisha Kuppanda) ಅವರಿಗೆ ವರ್ತೂರು ಮನೆಗೆ ನೀವು ಹೋಗಿಲ್ವಾ, ಆಮಂತ್ರಣ ಬಂದಿಲ್ವಾ ಎಂದು ಪ್ರಶ್ನಿಸಿದಾಗ, ಅವರು ಮುಖವನ್ನು ತಿರುವಿ ವರ್ತೂರಾ, ಯಾರವರು ಎಂದು ಪ್ರಶ್ನಿಸಿ, ಎಲ್ಲರನ್ನೂ ಕಕ್ಕಾಬಿಕ್ಕಿಯಾಗಿಸಿದರು. ವರ್ತೂರು ಸಂತೋಷ್ ಎಂದ್ರೆ ನಟಿಗೆ ಗೊತ್ತಾಗುತ್ತಿತ್ತೋ ಏನೋ. ಆದ್ರೆ ವರ್ತೂರು ಅಷ್ಟೇ ಅಂದದ್ದಕ್ಕೆ ಯಾರು ಎಂದು ಅವರಿಗೆ ನೆನಪಿಗೆ ಬಂದಿರಲಿಕ್ಕಿಲ್ಲ.
ನೆಟ್ಟಿಗರು ಏನಂದ್ರು
ಒಟ್ಟಿನಲ್ಲಿ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಬಿಗ್‌ಬಾಸ್‌ಗೆ ಹೋಗುವಾಗ ಪಾಪ ಸ್ಕ್ರಿಪ್ಟೆಡ್ ಆಗಿ ಲವ್ ಮಾಡಿರುತ್ತಾರೆ. ಆಮೇಲೆ ಹೊರಕ್ಕೆ ಬಂದ ಮೇಲೆ ಸ್ಕ್ರಿಪ್ಟ್ ಎಲ್ಲಾ ಇರಲ್ಲ. ಎಲ್ಲಾ ಮರೆತು ಹೋಗ್ತಾರೆ ಎಂದು ಹೇಳುತ್ತಿದ್ದಾರೆ ನೆಟ್ಟಿಗರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

