ಮನೆಯಲ್ಲಿ ಪುತ್ರನಿಗೆ ಅಕ್ಷರಾಭ್ಯಾಸ ಮಾಡಿಸಿದ ನಟಿ ಶ್ವೇತಾ ಚಂಗಪ್ಪ!
ಮಗನ ಸ್ಪೇಷಲ್ ದಿನದ ಪ್ರಯುಕ್ತ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದ ನಟಿ ಶ್ವೇತಾ ಚಂಗಪ್ಪ. ಅಕ್ಷರಾಭ್ಯಾಸ ಹೇಗಿತ್ತು ನೋಡಿ...

ಬೆಳ್ಳಿ ತೆರೆ ನಟಿ, ಕಿರುತೆರೆ ರಾಣಿ ಶ್ವೇತಾ ಚಂಗಪ್ಪ ಪುತ್ರ ಜಿಯಾನ್ ತನ್ನ ಜೀವನದ ಹೊಸ ಜರ್ನಿ ಆರಂಭಿಸಲು ಸಜ್ಜಾಗಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ, ಮನೆಯಲ್ಲಿ ನಡೆದ ವಿಶೇಷ ಪೂಜೆ ಬಗ್ಗೆ ಫೋಟೋ ಹಂಚಿಕೊಂಡು, ಬರೆದುಕೊಂಡಿದ್ದಾರೆ.
'ಜಿಯಾನ್ ಅಯ್ಯಪ್ಪ ಜೀವನದ ಹೊಸ ಜರ್ನಿಯನ್ನು ಮೇ 25ರಂದು ಆರಂಭಿಸುತ್ತಿದ್ದಾನೆ. ಸ್ಕೂಲ್ ಜರ್ನಿ ಶುರುವಾಗುತ್ತದೆ, ಇದು ಅವನ ಜೀವನದ ಅದ್ಭುತ ಕ್ಷಣ' ಎಂದು ಶ್ವೇತಾ ಬರೆದುಕೊಂಡಿದ್ದಾರೆ.
'ನನಗೆ ಇನ್ನೂ ನೆನಪು ಇದೆ, ನಿನ್ನೆ ಮೊನ್ನೆ ನಾನು ಪ್ರೆಗ್ನೆನ್ಸಿ ಬಗ್ಗೆ ಮಾಹಿತಿ ಹಂಚಿಕೊಂಡೆ ಮಗು ಡೆಲಿವರಿ ನ್ಯೂಸ್ ರಿವೀಲ್ ಮಾಡಿದೆ'
'ಈಗ ಜಿಯಾನ್ (Jiyaan) ಈಗ ಪ್ರೀ ನರ್ಸರಿ ಸ್ಕೂಲ್‌ಗೆ (Pre- nursery school) ಹೋಗಲು ಶುರು ಮಾಡಿದ್ದಾನೆ. ಸಮಯ ಎಷ್ಟು ಬೇಗ ಓಡುತ್ತದೆ'
'ಮನೆಯಲ್ಲಿ ಮಗ ಜಿಯಾನ್‌ಗಾಗಿ ಅಕ್ಷರಾಭಾಸ್ಯಾ ಪೂಜೆ ಮತ್ತು ಹೋಮವನ್ನು ಮಾಡಿಸಲಾಗಿತ್ತು. ಕುಟುಂಬಸ್ಥರು ಮಾತ್ರ ಪೂಜೆಯಲ್ಲಿ ಭಾಗಿಯಾಗಿದ್ದರು'
'ನೀವೆಲ್ಲರೂ ಅವನಿಗೆ ಆಶೀರ್ವಾದ ಮಾಡಬೇಕು, ಅವನ ಹೊಸ ಜರ್ನಿ ಶುರುವಾಗುತ್ತಿದೆ. Love you all' ಎಂದು ಶ್ವೇತಾ ಬರೆದುಕೊಂಡಿದ್ದಾರೆ.