ಮನೆಗೆ ಪುಟ್ಟ ಲಕ್ಷ್ಮೀಯನ್ನು ಬರ ಮಾಡಿಕೊಂಡ ಕಿರುತೆರೆ ನಟಿ ಸುಷ್ಮಾ ನಾಣಯ್ಯ!
ಕಿರುತೆರೆ ನಟಿ ಸುಷ್ಮಾ ನಾಣಯ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಖುಷಿಯ ಕ್ಷಣಗಳ ಫೋಟೋ ಹಾಗೂ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಿರುತೆರೆ ನಟಿ ಹಾಗೂ ರಂಗಭೂಮಿ ಕಲಾವಿದೆ ಸುಷ್ಮಾ ನಾಣಯ್ಯ.
ಏಪ್ರಿಲ್ 19ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಸಂತೋಷದ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅದ್ದೂರಿಯಾಗಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಸುಷ್ಮಾ ಅವರ ಆಪ್ತ ಕಲಾವಿದರ ಬಳಗ ಭಾಗಿಯಾಗದೆ.
ಸುಷ್ಮಾ ಮೂಲತಃ ಮೈಸೂರಿನವರು.
ರಂಗಭೂಮಿ ಕಲಾವಿದೆಯಾಗಿಯಾಗಿರುವ ಇವರು ಈವರೆಗೂ ಸುಮಾರು 12ಕ್ಕೂ ಹೆಚ್ಚು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
ಸುಷ್ಮಾ ಸದ್ಯಕ್ಕೆ ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್.
ಮೈಸೂರು ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಾಲಜಿ ಪದವೀಧರೆ.
ಖ್ಯಾತ ಭರತನಾಟ್ಯ ಕಲಾವಿದರಾದ ಉಷಾ ನಾಣಯ್ಯ ಹಾಗೂ ದಿವಂಗತ ಅಲೆಮಡಾ ನಾಣಯ್ಯ ಅವರ ಪುತ್ರಿ ಸುಷ್ಮಾ.
Sushma Nanaiah