ಕಾಮಿಡಿ ಗ್ಯಾಂಗ್ಸ್ ಶೋಗೆ ನಿರೂಪಕನಾದ ಹಾಸ್ಯ ನಟ ಶಿವರಾಜ್ ಕೆಆರ್ ಪೇಟೆ!
ಹಾಸ್ಯ ಕಲಾವಿದ ಶಿವರಾಜ್ ಕೆಆರ್ ಪೇಟೆ ಮೊದಲ ಬಾರಿ ನಿರೂಪಕನಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಶುರುವಾಗುತ್ತಿದೆ ಹೊಸ ಹಾಸ್ಯ ಕಾರ್ಯಕ್ರಮ..
ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ಶಿವರಾಜ್ ಕೆಅರ್ ಪೇಟೆ ಈಗ ಕನ್ನಡ ಚಿತ್ರರಂಗದ ಬೇಡಿಕೆ ಹಾಸ್ಯ ನಟ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗುತ್ತಿರುವ ಕಾಮಿಡಿ ಗ್ಯಾಂಗ್ಸ್ ಶೋನಲ್ಲಿ ಶಿವರಾಜ್ ನಿರೂಪಣೆ ಮಾಡುತ್ತಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪ್ರೋಮೋ ಹಂಚಿಕೊಂಡಿದ್ದಾರೆ.
'ಅಸಿಸ್ಟೆಂಟ್ ನಿರ್ದೇಶನಕನಾಗಿ ನನ್ನ ವೃತ್ತಿ ಜೀವನ ಆರಂಭಿಸಿದ್ದು ಆನಂತರ ನಾನು ಹಾಸ್ಯ ಕಲಾವಿದನಾದೆ, ಲೀಡ್ ನಟ ಆದೆ ಈಗ ನಿರೂಪಕನಾಗುತ್ತಿರುವೆ. ಇದೊಂದು ಒಳ್ಳೆಯ ಅನುಭವ ನನಗೆ' ಎಂದು ಶಿವರಾಜ್ ಹೇಳಿದ್ದಾರೆ.
'ಇದೊಂದು ಕಾಮಿಡಿ ಶೋ. ನಾನು ಇಲ್ಲಿರುವುದು ಮನೋರಂಜನೆ ನೀಡುವುದಕ್ಕೆ ನನ್ನ ಮನೋರಂಜನೆಯಿಂದಲೇ ಜನರು ನನಗೆ ಇಷ್ಟು ಪ್ರೀತಿ ಕೊಡುತ್ತಿರುವುದು'
'ನಿರೂಪಣೆ ಒಂದು ಡಿಮ್ಯಾಂಡಿಂಗ್ ಕೆಲಸ ಏಕೆಂದರೆ ಸಂಪೂರ್ಣ ಶೋ ನಾನು ಇರಲೇ ಬೇಕು. ಸ್ಪರ್ಧಿಗಳು ಮಾಡುವ ಸ್ಕಿಟ್ ಥೀರ್ಮ್ ಅರ್ಥ ಮಾಡಿಕೊಳ್ಳಬೇಕು, ವೀಕ್ಷಕರು ಮತ್ತು ತೀರ್ಪುಗಾರರ ಜೊತೆ ಮಾತನಾಡಬೇಕು'
'ನಿರ್ದೇಶಕ ಶರತ್ 10 ವರ್ಷಗಳಿಂದ ಗೊತ್ತು ಅನೇಕ ಸಿನಿಮಾಗಳಿಗೆ ಡೈಲಾಗ್ ಬರೆದಿದ್ದಾರೆ. ಅವರ ಪ್ರತಿಯೊಂದು ಸಿನಿಮಾದಲ್ಲಿ ಲವ್, ಎಮೋಷನ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಇರುತ್ತದೆ'
ನನ್ನ ಜೀವನದ ಕೊನೆಯಲ್ಲಿ ನಾನೊಬ್ಬ ನಟನಾಗಿ ಗುರುತಿಸಿಕೊಳ್ಳಬೇಕು ಅಂತ ಆಸೆ ಇದೆ. ಈಗ ಪ್ರಜ್ವಲ್ ದೇವರಾಜ್, ನಿಖಿಲ್ ಕುಮಾರಸ್ವಾಮಿ ಮತ್ತು ಸತೀಶ್ ನೀನಾಸಂ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೀನಿ' ಎಂದು ಶಿವರಾಜ್ ಮಾತನಾಡಿದ್ದಾರೆ.