- Home
- Entertainment
- TV Talk
- ಕನ್ನಡ ಕಿರುತೆರೆಗೆ ಬರುವುದಕ್ಕೂ ಮುನ್ನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಸ್ಟಾರ್ಸ್ ಇವರು
ಕನ್ನಡ ಕಿರುತೆರೆಗೆ ಬರುವುದಕ್ಕೂ ಮುನ್ನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಸ್ಟಾರ್ಸ್ ಇವರು
ನಿಮಗೆ ಗೊತ್ತಾ? ಕಿರುತೆರೆಯಲ್ಲಿ ಇಂದು ಮಿಂಚುತ್ತಿರುವ ಸ್ಟಾರ್ ನಟ ನಟಿಯರು ಒಂದು ಕಾಲದಲ್ಲಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಇಲ್ಲಿ ನಿಮ್ಮ ಫೇವರೆಟ್ ನಟ-ನಟಿಯರು ನಟನಾ ಕ್ಷೇತ್ರಕ್ಕೆ ಬರುವುದಕ್ಕೂ ಮುನ್ನ ಯಾವ ಕೆಲಸದಲ್ಲಿ ಇದ್ದರು ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ.

ಹಲವು ಧಾರವಾಹಿಗಳಲ್ಲಿ ಮಿಂಚುತ್ತಿರುವ ಸದ್ಯ ನೀನಾದೆ ನಾ ಧಾರವಾಹಿ ಮೂಲಕ ನೆಚ್ಚಿನ ನಟನಾಗಿರುವ ದಿಲೀಪ್ ಶೆಟ್ಟಿ ಎಂಎನ್‌ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದರು.
ರಾಧಾ ರಮಣ ಸೀರಿಯಲ್ ಮೂಲಕ ಖ್ಯಾತಿ ಗಳಿಸಿರುವ ನಟಿ ಶ್ವೇತಾ ಆರ್ ಪ್ರಸಾದ್ ಸೀರಿಯಲ್ ಗೆ ಬರುವುದಕ್ಕೂ ಮುನ್ನ ಆರ್ಕಿಟೆಕ್ ಆಗಿದ್ದರು.
ಭಾಗ್ಯಲಕ್ಷ್ಮಿ ಸೀರಿಯಲ್ ನಟ ಸುದರ್ಶನ್ ರಂಗಪ್ರಸಾದ್ ಎಂಬಿಎ ಪದವೀಧರರಾಗಿದ್ದು, ವಿದೇಶದಲ್ಲಿ ಐಟಿ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದರು.
ಲೋಕೇಶ್ ಬಸವಟ್ಟಿ ಮತ್ತು ರಚನಾ ದಶರಥ್ ಇಬ್ಬರೂ ಕಿರುತೆರೆ ನಟ ನಟಿಯರು . ಕಿರುತೆರೆಗೆ ಬರುವ ಮುನ್ನ ಲೋಕೆಶ್ ಎಲ್ &ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ರಚನಾ ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.
ಹಲವು ಧಾರವಾಹಿ ಮಾತ್ರವಲ್ಲ ಸಿನೆಮಾಗಳಲ್ಲೂ ನಟಿಸಿರುವ ಕಾರ್ತಿಕ್ ಜಯರಾಂ ಅವರು ದುಬೈನಲ್ಲಿ ಸ್ಟ್ರಕ್ಟರಲ್ ಇಂಜಿನಿಯರ್ ಆಗಿ ದುಡಿಯುತ್ತಿದ್ದರು.
Gagan Chinnappa
ಸೀತಾರಾಮ ಸೀರಿಯಲ್ ನಲ್ಲಿ ಮಿಂಚುತ್ತಿರುವ ನಟ ಗಗನ್ ಚಿನ್ನಪ್ಪ ಹಲವಾರು ಧಾರವಾಹಿಗಳಲ್ಲಿ ನಟಿಸಿದ್ದು ಈ ಮೊದಲ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.