ಪತಿ ಜೊತೆ ಕಾಶ್ಮೀರದ ಮಂಜಿನಲ್ಲಿ ನಟಿ ರಶ್ಮಿ ಪ್ರಭಾಕರ್ ಮೋಜು, ಮಸ್ತಿ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಆಗಿ ಜನರನ್ನು ರಂಜಿಸಿದ ರಶ್ಮಿ ಪ್ರಭಾಕರ್, ಪತಿ ನಿಖಿಲ್ ಭಾರ್ಗವ್ ಜೊತೆ ಕಾಶ್ಮೀರಕ್ಕೆ ತೆರಳಿ ಮಂಜಿನಲ್ಲಿ ಮೋಜು ಮಸ್ತಿ ಮಾಡಿ ಎಂಜಾಯ್ ಮಾಡ್ತಿದ್ದಾರೆ.
ಕನ್ನಡ, ತಮಿಳು ಮತ್ತು ತೆಲುಗು ಕಿರುತೆರೆಯಲ್ಲಿ ಹಲವು ಸೀರಿಯಲ್ಸ್‌ನಲ್ಲಿ ನಟಿಸುತ್ತಾ, ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಚಿನ್ನು ಆಗಿ ತಮ್ಮ ಅದ್ಭುತ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ನಟಿ ರಶ್ಮಿ ಪ್ರಭಾಕರ್ (Rashmi Prabhakar).
ಸದ್ಯ ಸೀರಿಯಲ್‌ನಿಂದ ಬ್ರೇಕ್ ತೆಗೆದುಕೊಂಡಿರುವ ರಶ್ಮಿ ಸಮ್ಮರ್ ಎಂಜಾಯ್ ಮಾಡುವ ಸಲುವಾಗಿ ಪತಿ ನಿಖಿಲ್ ಭಾರ್ಗವ್ (Nikhil Bhargav)ಜೊತೆಗೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದು, ಮಂಜಿನಲ್ಲಿ ಆಟವಾಡುತ್ತಾ, ಕುದುರೆ ಸವಾರಿ ಮಾಡಿ ಎಂಜಾಯ್ ಮಾಡ್ತಿದ್ದಾರೆ.
ಬೆಂಗಳೂರಿನ ಬಿರು ಬಿಸಿಲನ್ನು ಮರೆಯಲು ನಟಿ ರಶ್ಮಿ ಪ್ರಭಾಕರ್ ತಮ್ಮ ಪತಿ ನಿಖಿಲ್ ಜೊತೆಗೆ ಜಮ್ಮು ಕಾಶ್ಮೀರದ (Jammu Kashmira) ಸುಂದರ ತಾಣಗಳಾದ ಪಾಲ್ಗಂ, ದಾಲ್ ಲೇಕ್, ಮುಘಲ್ ಗಾರ್ಡನ್ ಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ. ಅಲ್ಲಿನ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕಳೆದ ಕೆಲದಿನಗಳಿಂದ ಕಾಶ್ಮೀರದ ನಡುಗಿಸುವ ಚಳಿಯಲ್ಲಿ ಪ್ರಕೃತಿಯ ಸೌಂದರ್ಯ (Beauty of Nature) ಸವಿಯುತ್ತಿರುವ ರಶ್ಮಿ, ಅಲ್ಲಿ ಕುದುರೆ ಸವಾರಿ (Horse Riding), ಮಂಜಿನ ಮೇಲೆ ಬೈಕಿನಂತಹ ವಾಹನ ಸ್ಕೈ ಡೂ ನಲ್ಲಿ ಸವಾರಿ ಮಾಡಿದ್ದಾರೆ, ಜೊತೆಗೆ ಹಿಮಪರ್ವತದ ಮುಂದೆ ವಿವಿಧ ಪೋಸ್ ನೀಡಿ ಫೋಟೊ ತೆಗೆಸಿಕೊಂಡಿದ್ದಾರೆ.
2014 ರಿಂದ ಅಂದರೆ ಕಳೆದ ಹತ್ತು ವರ್ಷಗಳಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ರಶ್ಮಿ ಶುಭ ವಿವಾಹ (Shubha Vivaha), ಮಹಾಭಾರತ, ಜೀವನಚೈತ್ರ, ಅರುಂಧತಿ, ಲಕ್ಷ್ಮೀ ಬಾರಮ್ಮ, ಪೌರ್ಣಮಿ, ಮನಸೆಲ್ಲಾ ನೀನೆ, ಕಾವ್ಯಾಂಜಲಿ, ಕನ್ನೈ ಕಲೈಮಾನೆ ಎನ್ನುವ ಕನ್ನಡ, ತೆಲುಗು ಮತ್ತು ತಮಿಳು ಸೀರಿಯಲ್ ನಲ್ಲಿ ನಟಿಸಿದ್ದಾರೆ.
ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿರುವ ರಶ್ಮಿ ಝೀ ಕನ್ನಡದಲ್ಲಿ ಪ್ರಸಾರವಾಗಿದ್ದ ಸೂಪರ್ ಕ್ವೀನ್ (Super Queen) ಸ್ಪರ್ಧೆಯಲ್ಲಿ ವಿಜೇತರು ಕೂಡ ಆಗಿದ್ದರು. ಇನ್ನು ನಟಿ ಬಿಬಿ5 ಮತ್ತು ಮಹಾಕಾವ್ಯ ಎನ್ನುವ ಎರಡು ಕನ್ನದ ಸಿನಿಮಾಗಳಲ್ಲೂ ಸಹ ನಟಿಸಿದ್ದಾರೆ.
ಇನ್ನು ಪರ್ಸನಲ್ ಲೈಫ್ ಬಗ್ಗೆ ಹೇಳೋದಾದರೆ ರಶ್ಮಿ ಮತ್ತು ನಿಖಿಲ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು, ಎರಡು ವರ್ಷಗಳ ಹಿಂದೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಿಖಿಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಶ್ಮಿ ಸದ್ಯ ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ, ತಮ್ಮ ಫಿಟ್ನೆಸ್ (Fitness) ಬಗ್ಗೆ ಹೆಚ್ಚು ಫೋಕಸ್ ಆಗಿದ್ದಾರೆ.