ವೈಕುಂಠ ಏಕಾದಶಿ ದಿನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಶ್ಮಿ ಪ್ರಭಾಕರ್ ದಂಪತಿ!
ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ದಂಪತಿಗಳು ವೈಕುಂಠ ಏಕಾದಶಿಯಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದು, ಆ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇಂದು ದೇಶದೆಲ್ಲೆಡೆ ವಿಷ್ಣುವನ್ನು ಆರಾಧಿಸುವ ವೈಕುಂಠ ಏಕಾದಶಿಯನ್ನು (Vaikunta Ekadashi) ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅದರಲ್ಲೂ ಶನಿವಾರ ಹಬ್ಬ ಬಂದಿರೋದರಿಂದ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.
ವೈಕುಂಠ ಏಕಾದಶಿಯ ಶುಭ ಸಂದರ್ಭದಲ್ಲಿ ಕನ್ನಡ ಕಿರುತೆರೆಯ ನಟಿ ರಶ್ಮಿ ಪ್ರಭಾಕರ್ (Rashmi Prabhakar) ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದು, ಈ ಸಂಭ್ರಮದ ಕ್ಷಣಗಳನ್ನು ಸೆರೆಹಿಡಿದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಶ್ಮಿ ಪ್ರಭಾಕರ್, ತಮ್ಮ ಪತಿ ನಿಖಿಲ್ ಭಾರ್ಗವ್ ಹಾಗೂ ಇತರ ಸ್ನೇಹಿತರೊಡನೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದು, ವೈಕುಂಠ ಏಕಾದಶಿಯ ದಿನವೇ ತಿಮ್ಮಪ್ಪನ ದರ್ಶನ ಪಡೆದುದಕ್ಕೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ವೈಕುಂಠ ಏಕಾದಶಿಯ ದಿನವೇ ತಿರುಪತಿ ತಿಮ್ಮಪ್ಪನ ರರ್ಶನ ಪಡೆಯಲು ಸಾಧ್ಯವಾಗುತ್ತೆ ಎಂದು ಯೋಚಿಸಿಯೇ ಇರಲಿಲ್ಲ. ತಿಮ್ಮಪ್ಪನ ದರ್ಶನ ಮತ್ತು ವೈಕುಂಠ ದ್ವಾರದ ದರ್ಶನದಿಂದ ಜೀವನ ಸಾರ್ಥಕವಾಯಿತು ಎಂದು ರಶ್ಮಿ ಬರೆದುಕೊಂಡಿದ್ದಾರೆ.
ಇನ್ನು ಕರಿಯರ್ ವಿಷ್ಯಕ್ಕೆ ಬರೋದಾದ್ರೆ ರಶ್ಮಿ ಕನ್ನಡ ಕಿರುತೆರೆಗೆ ಶುಭ ವಿವಾಹ ಸೀರಿಯಲ್ (serial) ಮೂಲಕ ಎಂಟ್ರಿ ಕೊಟ್ಟರು. ಇದಾದ ನಂತರ ಮಹಾಭಾರತ, ಜೀವನ ಚೈತ್ರ ಸೀರಿಯಲ್ ನಲ್ಲಿ ನಟಿಸಿದ್ದರು.
ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ನ ಲಚ್ಚಿ ಪಾತ್ರ ಅವರಿಗೆ ಹೆಚ್ಚಿನ ಜನಪ್ರಿಯತೆ ನೀಡಿತು. ಲಕ್ಷ್ಮೀ ಬಾರಮ್ಮ ಸೀರಿಯಲ್ ಬಳಿಕ ಕನ್ನಡದಲ್ಲಿ ಮನಸೆಲ್ಲಾ ನೀನೆ ಸೀರಿಯಲ್ಲಿ ನಟಿಸಿದ್ದರು. ಇದಲ್ಲದೇ ತೆಲುಗು, ತಮಿಳು ಸೀರಿಯಲ್ ನಲ್ಲೂ ನಟಿಸಿದ್ದರು.
ಕೊನೆಯದಾಗಿ ತಮಿಳಿನ ಕಣ್ಣೈ ಕಲೈಮಾನೆ ಸೀರಿಯಲ್ ನಲ್ಲಿ ರಶ್ಮಿ ಪ್ರಭಾಕರ್ ನಟಿಸಿದ್ದರು. ಇನ್ನೇನಿದ್ದರೂ ಕನ್ನಡದಲ್ಲೇ ನಟಿಸೋದು ಎಂದಿರುವ ರಶ್ಮಿ, ಸ್ಟ್ರಾಂಗ್ ಪಾತ್ರಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.