ಗಟ್ಟಿಮೇಳದ ಕಾಂತನ ಕಾಮೆಡಿ ಯಾರಿಗಿಷ್ಟ ಇಲ್ಲ ಹೇಳಿ: ನಿಮ್ಮನ್ನು ನಗಿಸೋದು ಇವ್ರೇ ನೋಡಿ
ಗಟ್ಟಿಮೇಳದ ವೇದಾಂತ್-ಅಮೂಲ್ಯ ರೊಮ್ಯಾನ್ಸ್ ನೋಡೋಕೆಷ್ಟು ಇಷ್ಟವೋ, ಅಷ್ಟೇ ಇಷ್ಟಪಟ್ಟು ಜನ ಕಾಂತನ ಕಾಮೆಡಿಯನ್ನೂ ನೋಡುತ್ತಾರೆ. ಯಾರೀ ಕಾಂತ..?
ಗಟ್ಟಿಮೇಳ ಧಾರವಾಹಿಯಲ್ಲಿ ಕಾಂತ ಪಾತ್ರ ಎಲ್ಲರಿಗೂ ಇಷ್ಟ.
ಸೀರಿಯಲ್‌ಗಳಲ್ಲಿ ಕಾಮೆಡಿ ಪ್ರಮುಖ ಪಾತ್ರ ವಹಿಸುತ್ತದೆ. ಗಟ್ಟಿಮೇಳದಲ್ಲಂತೂ ಕಾಂತನ ಕಾಮೆಡಿ ಈಗ ಜನಪ್ರಿಯವಾಗಿದೆ.
ಲಕ್ಷ್ಮೀಕಾಂತ್ ಅನ್ನೋ ಚಂದದ ಹೆಸರಿನಲ್ಲಿ ನಾಯಕನ ಪಿಎ ಆಗಿರೋ ರವಿಚಂದ್ರ ಅವರು ಕಾಂತ ಎಂದೇ ಫೇಮಸ್.
ಸಿಕ್ಕಾಪಟ್ಟೆ ಕಾಮೆಡಿ ಮಾಡ್ತಾ, ಬಾಸ್ ಕೈಯಿಂದ ಬೈಸ್ಕೊಳ್ತಾ ಇರೋ ಕಾಂತನ ಕಂಡರೆ ಎಲ್ರಿಗೂ ಇಷ್ಟ.
ಅಂದಹಾಗೆ ತೆರೆಯ ಮೇಲೆ ಮಾತ್ರವಲ್ಲ, ತೆರೆಯ ಹಿಂದೆಯೂ ರವಿಚಂದ್ರ ಅವರಿಗೆ ಜನರನ್ನು ನಗಿಸೋದಂದ್ರೆ ಇಷ್ಟ.
ಅಂದಹಾಗೆ ರವಿಚಂದ್ರ ನಟನಾಗೋಕೆ ಹೊರಟವರೇನೂ ಅಲ್ಲ.
ಆಕಸ್ಮಿಕವಾಗಿ ಕಿರುತೆರೆಗೆ ಕಾಲಿಟ್ಟ ನಟನ ಮೊದಲ ಧಾರವಾಹಿ ರೋಬೋ ಫ್ಯಾಮಿಲಿ
ಮಾಸ್ಟರ್ ಆನಂದ್ ಸ್ನೇಹಿತನಾಗಿದ್ದ ಕಾಂತ ಬಿಕಾಂ ಫೈನಲ್ ಇಯರ್‌ನಲ್ಲಿದ್ದಾಗ ನಟನೆ ಶುರು ಮಾಡಿದ್ದಾರೆ.
ಕಾಂತ ಅವರಿಗೆ ಆಕಸ್ಮಿಕವಾಗಿ ಕಾಮೆಡಿ ಪಾತ್ರ ಸಿಕ್ಕಿತ್ತು. ನಂತರ ಇದರಲ್ಲೇ ಮುಂದುವರಿದಿದ್ದಾರೆ ರವಿಚಂದ್ರ
ಅಂದಹಾಗೆ ಕಾಂತ ಅವರಿಗೆ ವಿಲನ್ ಪಾತ್ರ ಮಾಡಬೇಕೆಂಬ ಆಸೆ ಇದೆಯಂತೆ.