ಕನ್ನಡ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಅಯೋಧ್ಯೆ ರಾಮಮಂದಿರದಲ್ಲಿ ಸೀರಿಯಲ್ ಶೂಟಿಂಗ್ !
ಕನ್ನಡ ಕಿರುತೆರೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಧಾರಾವಾಹಿಯೊಂದು ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಶೂಟಿಂಗ್ ಮಾಡಿದ್ದು, ಕನ್ಯಾದಾನ ಸೀರಿಯಲ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಕನ್ನಡ ಕಿರುತೆರೆ ಇದೀಗ ಸಾಕಷ್ಟು ಮುಂದುವರೆದಿದೆ. ಮೊದಲೆಲ್ಲಾ ಸೀರಿಯಲ್ ಸೆಟ್ ಗಳಲ್ಲೇ ಆಗುತ್ತಿದ್ದಂತಹ ಶೂಟಿಂಗ್ ಇದೀಗ, ದೇಶ, ವಿದೇಶದಲ್ಲೂ ನಡೆಯುತ್ತದೆ. ಇತ್ತೀಚೆಗೆ ಕನ್ನಡದ ಕೆಲವು ಧಾರಾವಾಹಿಗಳು ಕಾಶಿಯಲ್ಲಿ ಶೂಟಿಂಗ್ ನಡೆಸಿದ್ದವು. ಇದೀಗ ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಶೂಟಿಂಗ್ ನಡೆಸಿದೆ.
ಹೌದು, ಇದೇ ಮೊದಲ ಬಾರಿಗೆ ಕನ್ನಡ ಸೀರಿಯಲ್ (Kannada Serial) ಒಂದು ಪವಿತ್ರವಾದ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಶೂಟಿಂಗ್ ನಡೆಸಿದೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾದಾನ (Kanyadana)ಧಾರಾವಾಹಿಯ ಹೊಸ ಎಪಿಸೋಡ್ ಗಳು ಅಯೋಧ್ಯೆಯಲ್ಲಿ ಶೂಟಿಂಗ್ ಆಗಿವೆ.
ಈಗಾಗಲೇ 800 ಸಂಚಿಕೆಗಳನ್ನು ಪೂರೈಸಿರುವ ಕನ್ಯಾದಾನ ಧಾರಾವಾಹಿ ತನ್ನ ಐವರು ಹೆಣ್ಣು ಮಕ್ಕಳ ವೈವಾಹಿಕ ಜೀವನದ ನೆಮ್ಮದಿಗಾಗಿ ಹೋರಾಡುವ ತಂದೆಯ ಕಥೆ. ತಂದೆ ಮತ್ತು ಹೆಣ್ಣುಮಕ್ಕಳ ಈ ಸೆಂಟಿಮೆಂಟ್ ಕಥೆ ನಮ್ಮ ದಿನನಿತ್ಯದ ಜೀವನದಲ್ಲಿ ಪ್ರತಿದಿನ ನಡೆಯುವಂತಿದೆ.
ಕನ್ಯಾದಾನ ಧಾರಾವಾಹಿ ಯಾವಾಗಲೂ ಹೊಸತನ ತರುವಲ್ಲಿ ಯಶಸ್ವಿಯಾಗಿತ್ತು. ಈ ಹಿಂದೆ ಸೀರಿಯಲ್‌ನಲ್ಲಿಯೂ ಸ್ಯಾಂಡಲ್‌ವುಡ್ ನಟಿ ಸುಧಾರಾಣಿಯವರು (Sudharani) ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಇತ್ತೀಚೆಗೆ ನಟಿ ನೀತು ಶೆಟ್ಟಿ ಸಹ ಪಾತ್ರವಹಿಸಿದ್ದರು. ಇದೀಗ ಮತ್ತೊಂದು ಹೊಸ ಪ್ರಯೋಗವಾಗಿ ಅಯೋಧ್ಯೆಯಲ್ಲಿ ಶೂಟಿಂಗ್ ನಡೆದಿದೆ.
ರಾಮನವಮಿಯ (Ramanavami)ವಿಶೇಷ ಸಂಚಿಕೆಯಾಗಿ ಕಳೆದ 5 ದಿನಗಳಿಂದ ಕನ್ಯಾದಾನ ಸೀರಿಯಲ್ ನಲ್ಲಿ ರಾಮಮಂದಿರಕ್ಕೆ ತೆರಳಿ, ಶ್ರೀರಾಮನ ದರ್ಶನ ಪಡೆಯುತ್ತಿರುವ ಮಕ್ಕಳ ದೃಶ್ಯಗಳು ಪ್ರಸಾರವಾಗುತ್ತಿವೆ. ಧಾರಾವಾಹಿಯಲ್ಲಿ ಅಯೋಧ್ಯೆಯನ್ನು ನೋಡಿ ಜನರು ಸಹ ಥ್ರಿಲ್ ಆಗಿದ್ದಾರೆ.
'ಕನ್ಯಾದಾನ' ಧಾರಾವಾಹಿಯಲ್ಲಿ ಶ್ರೀರಾಮನವಮಿಯ ವಿಶೇಷ ಸಂದರ್ಭದಲ್ಲಿ ಎದುರಾಗುವ ಕಷ್ಟಗಳನ್ನು ಶ್ರೀರಾಮನ ಕೃಪೆಯಿಂದ ಹೇಗೆ ಮೆಟ್ಟಿ ನಿಲ್ಲುತ್ತವೆ ಎಂಬುದನ್ನು ತೋರಿಸುವ ದೃಶ್ಯಗಳು ಪ್ರಸಾರವಾಗುತ್ತಿವೆ. ಹಾಗಾಗಿ ಅಯೋಧ್ಯೆಯ ರಾಮಮಂದಿರಲ್ಲಿ ಶೂಟಿಂಗ್ ಭರ್ಜರಿಯಾಗಿ ನಡೆದಿದೆ.
ಜನವರಿಯಲ್ಲಿ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪತಿಷ್ಠೆ ನೆರವೇರಿತ್ತು. ಇತ್ತೀಚಿನ ದಿನಗಳಲ್ಲಿ ದರ್ಶನ ಪಡೆಯಲು ಬಂದಿರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಅದರ ನಡುವೆ ಕೆಲ ಎಪಿಸೋಡ್ಸ್ ಶೂಟಿಂಗ್ ನಡೆಸಿ, ಪ್ರಸಾರ ಮಾಡಿರೋದು ಹೆಗ್ಗಳಿಕೆಯೇ ಸರಿ.