ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಸತ್ಯ' ಧಾರಾವಾಹಿ ಹೀರೋ ಸಾಗರ್
ಸತ್ಯ ಧಾರಾವಾಹಿಯ ಹೀರೋ ಸಾಗರ್ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಿರಿ ರಾಜು ಜೊತೆ ಸಾಗರ್ ಮದುವೆಯಾಗುತ್ತಿದ್ದಾರೆ.
ಕನ್ನಡ ಕಿರುತೆರೆಲೋಕ ಮತ್ತೊಂದು ಮದುವೆಗೆ ಸಜ್ಜಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಿರುತೆರೆ ನಟ-ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಮತ್ತೋರ್ವ ಖ್ಯಾತ ನಟ ದಾಪಂತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅದು ಮತ್ಯಾರು ಅಲ್ಲ ಸತ್ಯ ಧಾರಾವಾಹಿಯ ಹೀರೋ ಸಾಗರ್ ಗೌಡ.
ನಟ ಸಾಗರ್ ಬ್ಯಾಚುಲರ್ ಲೈಫ್ಗೆ ಗುಡ್ ಬೈ ಹೇಳಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಂದಹಾಗೆ ಸಾಗರ್ ಕೈ ಹಿಡಿಯುತ್ತಿರುವ ಯುವತಿ ಯಾರು ಮತ್ಯಾರು ಅಲ್ಲ ನಟಿ, ಮಾಡೆಲ್ ಸಿರಿ ರಾಜು.
ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಪೋಟೋ ಶೇರ್ ಮಾಡುವ ಮೂಲಕ ಅಧಿಕೃತ ಗೊಳಿಸಿದ್ದಾರೆ. ಸಾಗರ್ ಮತ್ತು ರಿಸಿ ಜೋಡಿಗೆ ಅಭಿಮಾನಿಗಳಿಂದ ಮತ್ತು ಸ್ನೇಹಿತರಿಂದ ಶುಭಾಶಯ ಸುರಿಮಳೆ ಬರುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಸಿರಿ ರಾಜು ತನ್ನ ಭಾವಿ ಪತಿ ಯಾರೆಂದು ಪರಿಚಯ ಮಾಡಿಕೊಂಡಿದ್ದಾರೆ. ಸಾಗರ್ ಜೊತೆ ಇರುವ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಮದುವೆ ವಿಚಾರ ರಿವೀಲ್ ಮಾಡಿದದ್ದಾರೆ.
ನಾನು ಮದುವೆಯಾಗುತ್ತಿರುವ ಅದ್ಭುತ ವ್ಯಕ್ತಿಯನ್ನು ಪರಿಚಯಿಸುತ್ತಿದ್ದೀನಿ ಎಂದು ಹೇಳಿ ಇಬ್ಬರೂ ಪೋಟೋ ಶೇರ್ ಮಾಡಿದ್ದಾರೆ. ಅಂದಹಾಗೆ ಇಬ್ಬರೂ ಸದ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಮುಂದಿನ ವರ್ಷ ಮದುವೆಯಾಗುವ ಸಾಧ್ಯತೆ ಇದೆ.
ಸಾಗರ್ ಸದ್ಯ ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಮೂಲ್ ಬೇಬಿ ಅಂತನೆ ಫೇಮಸ್ ಆಗಿದ್ದಾರೆ. ಇನ್ನು ಸಿರಿ ಕೂಡ ಸೋಶಿಯಲ್ ಮೀಡಿಯ ಸೆನ್ಸೇಶನ್ ಆಗಿದ್ದು ಕೆಲವು ಧಾರಾವಾಹಿ, ಸಿನಿಮಾ ಹಾಗೂ ವೆಬ್ ಸೀರಿಸ್ ನಲ್ಲೂ ನಟಿಸಿದ್ದಾರೆ. ಇದೀಗ ಸಾಗರ್ ಜೊತೆ ವೈವವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.