ತೆಲುಗು ಕಿರುತೆರೆಯಲ್ಲಿ ಮಿಂಚಲು ಹೊರಟ ಕನ್ನಡದ ಮತ್ತೊಬ್ಬ ಜನಪ್ರಿಯ ನಟ ರಘು
ಕನ್ನಡ ಕಿರುತೆರೆಯ ನಟ -ನಟಿಯರು ಪರ ಭಾಷೆಯ ಕಿರುತೆರೆಯಲ್ಲಿ ನಟಿಸುತ್ತಿರುವುದು ಇದೆ ಮೊದಲೇನಲ್ಲ, ಕನ್ನಡದ ಹಲವಾರು ನಟರು ತಮಿಳು, ತೆಲುಗು, ಮಲಯಾಳಂ ಕಿರುತೆರೆಯಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ. ಇದಕ್ಕೀಗ ಹೊಸ ಸೇರ್ಪಡೆ ರಘು… ಕನ್ನಡ ಸೀರಿಯಲ್ ಪ್ರಿಯರ ನೆಚ್ಚಿನ ಸಾಕೇತ್.
ರಘು ಅನ್ನೋದಕ್ಕಿಂತ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಅವರು ಜನರಿಗೆ ಹೆಚ್ಚು ಹತ್ತಿರವಾಗಿರೋದು 'ನಮ್ಮನೆ ಯುವರಾಣಿ' ಧಾರಾವಾಹಿಯ ಅಣ್ಣ ‘ಸಾಕೇತ್’ ಆಗಿ. ಈ ಸೀರಿಯಲ್ ಮೂಲಕ ಅವರು ನೆಚ್ಚಿನ ಮನೆ ಮಗ, ಅಳಿಯನಾಗಿ ಮಿಂಚಿದ್ದರು. ಆ ಸೀರಿಯಲ್ ಮುಗಿದ ಬಳಿಕ ಇದೀಗ ರಘು ತೆಲುಗು ಕಿರುತೆರೆಯತ್ತ ಮುಖ ಮಾಡಿದ್ದಾರೆ.
ರಘು ಅವರು ವಿವಿಧ ಕನ್ನಡ ಧಾರಾವಾಹಿಗಳಲ್ಲಿ ಪ್ರದರ್ಶನ ನೀಡಿದ್ದರಿಂದ ಕನ್ನಡ ಪ್ರೇಕ್ಷಕರಲ್ಲಿ ಚಿರಪರಿಚಿತ ಮುಖ. 'ರಾಧಾ ಕಲ್ಯಾಣ' ಹೆಸರಿನ ಧಾರಾವಾಹಿಯಿಂದ ರಘು ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಅವರು ನೆಗೆಟೀವ್ ಪಾತ್ರವನ್ನು (negative role) ನಿರ್ವಹಿಸಿದರು.
ಇವರಿಗೆ ಹೆಸರು ತಂದು ಕೊಟ್ಟ ಸೀರಿಯಲ್ ಎಂದರೆ ಅದು 'ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ', ಮತ್ತು 'ನಮ್ಮನೆ ಯುವರಾಣಿ' . ಈ ಸೀರಿಯಲ್ ಗಳಲ್ಲಿ ರಘು ಪ್ರಮುಖ ಪಾತ್ರ ನಿರ್ವಹಿಸಿ ಜನ ಮನ ಗೆದ್ದಿದ್ದರು. ಇದೀಗ ತೆಲುಗು ಜನರನ್ನು ಮೋಡಿ ಮಾಡಲು ತೆಲುಗು ಕಿರುತೆರೆಗೆ (telugu serial) ಕಾಲಿಟ್ಟಿದ್ದಾರೆ.
'ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ' ಚಿತ್ರದಲ್ಲಿ ರಘು ತಮ್ಮ ಮೊದಲ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ರಘು ಈ ಧಾರಾವಾಹಿಯಲ್ಲಿ ಅಮೃತಾ ರಾಮಮೂರ್ತಿ ಅವರ ಎದುರು ನಟಿಸಿದ್ದರು. ಈ ಸೀರಿಯಲ್ ನಲ್ಲಿ ಗೌಡನಾಗಿ ಅದ್ಭುತ ಅಭಿನಯ ನೀಡಿದ್ದರು ರಘು. ಈ ಜೋಡಿ ಈ ಧಾರಾವಾಹಿಗಾಗಿ 'ಅತ್ಯುತ್ತಮ ಜೋಡಿ' ಪ್ರಶಸ್ತಿಯನ್ನು ಸಹ ಪಡೆದಿದ್ದರು.
ರಘು ನಂತರ, ಅಮೃತಾ ರಾಮಮೂರ್ತಿ ಅವರನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ ಮತ್ತು ಈಗ ಅವರಿಗೆ ಹೆಣ್ಣು ಮಗು ಕೂಡ ಇದೆ. ಆಫ್-ಸ್ಕ್ರೀನ್ ಮತ್ತು ಆನ್-ಸ್ಕ್ರೀನ್ ಎರಡೂ ಕಡೆಗಳಲ್ಲೂ ಮೆಚ್ಚುಗೆ ಪಡೆದ ದಂಪತಿಗಳಲ್ಲಿ (favorite couple) ಇವರೂ ಒಬ್ಬರಾಗಿದ್ದಾರೆ.
ರಘು ಕನ್ನಡದ ಅನೇಕ ಸಿನಿಮಾಗಳಲ್ಲಿ, ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ಕೂಡ ಇವರು ತೆರೆ ಹಂಚಿಕೊಂಡಿದ್ದಾರೆ. ಅಲ್ಲದೇ ಕಿರು ಚಿತ್ರಗಳಲ್ಲಿ ಮತ್ತು ವೆಬ್ ಸೀರೀಸ್ (web series) ಗಳಲ್ಲೂ ಸಹ ನಟಿಸಿದ್ದಾರೆ. ಸೂಪರ್ ಕಪಲ್ ವೆಬ್ ಸೀರಿಸ್ ಜನರನ್ನು ರಂಜಿಸಿತ್ತು.
ಸದ್ಯ ರಘು ತೆಲುಗಿನ ಝೀ ಚಾನೆಲ್ ನಲ್ಲಿ ಹೊಸದಾಗಿ ಶುರುವಾಗಲಿರುವ "ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿ" ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಸೀರಿಯಲ್ ನ ಪ್ರೊಮೋ ಬಿಡುಗಡೆಯಾಗಿದ್ದು, ಅದ್ಭುತವಾಗಿ ಮೂಡಿ ಬಂದಿದೆ. ರಘು ಅವರ ನಟನಾ ಪಯಣ ಹೀಗೆ ಮುಂದುವರೆಯಲಿ ಎಂದು ಹಾರೈಸೋಣ.