ಹೊಸ ಮನೆ ಪ್ರವೇಶಿಸಿದ ಚಂದು ಕವಿತಾ; ಗೃಹಪ್ರವೇಶ ಪೋಟೋ ವೈರಲ್!
ಹೊಸ ಮನೆ ಖರೀದಿಸಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತೋರಿಸಿದ ಕಿರುತೆರೆ ಜೋಡಿ...
ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾದ ಜೋಡಿ ಚಂದನ್ ಮತ್ತು ಕವಿತಾ ಅಭಿಮಾನಿಗಳ ಜೊತೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಕವಿತಾ (Kavitha Gowda) ಮತ್ತು ಚಂದನ್ ಹೊಸ ಮನೆ ಖರೀದಿಸಿದ್ದಾರೆ. ಆಪ್ತರು ಸಮ್ಮುಖದಲ್ಲಿ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಗೃಹಪ್ರವೇಶ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿದೆ. ಕಾಮೆಂಟ್ಸ್‌ನಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಟ್ರೆಡಿಷನಲ್ ಉಡುಪಿನಲ್ಲಿ ಚಂದನ್ ಕಾಣಿಸಿಕೊಂಡೆ, ಕೆಂಪು ಮತ್ತು ನೀಲಿ ಕಾಂಬಿನೇಷನ್ ಸೀರೆಯ್ಲಿ ಕವಿತಾ ಮಿಂಚಿದ್ದಾರೆ. ಈ ಫೋಟೋ ಮೂಲಕ ಅವರಿಬ್ಬರ ಮದುವೆಯನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ.
ಧಾರಾವಾಹಿ ನಂತರ ಕವಿತಾ ಮತ್ತು ಚಂದನ್ ಹಲವು ವರ್ಷಗಳ ಕಾಲ ಸ್ನೇಹಿತರಾಗಿದ್ದು ಪೋಷಕರ ಒಪ್ಪಿಗೆ ಪಡೆದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಕವಿತಾ ಗೌಡ ಪ್ರವಾಸ (Travel) ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡು ಟ್ರೋಲ್ (Trolls) ಆಗಿದ್ದರು.