- Home
- Entertainment
- TV Talk
- ಆಗ್ಲೇ ಚೆನ್ನಾಗಿದ್ರಿ ಹುಡ್ಗಿ ಯಾಕಾದ್ರಿ : ಬಿಗ್‌ಬಾಸ್ ನೀತು ವನಜಾಕ್ಷಿ ಹಳೇ ಫೋಟೋ ಸಖತ್ ವೈರಲ್
ಆಗ್ಲೇ ಚೆನ್ನಾಗಿದ್ರಿ ಹುಡ್ಗಿ ಯಾಕಾದ್ರಿ : ಬಿಗ್‌ಬಾಸ್ ನೀತು ವನಜಾಕ್ಷಿ ಹಳೇ ಫೋಟೋ ಸಖತ್ ವೈರಲ್
ಹುಡುಗನಾಗಿ ಹುಟ್ಟಿ ಹುಡುಗಿಯಾಗಿ ಬದಲಾಗಿ ಬಿಗ್‌ಬಾಸ್ 10ನಲ್ಲಿ ಹವಾ ಸೃಷ್ಟಿಸುತ್ತಿರುವ ನೀತು ವನಜಾಕ್ಷಿ ಅವರು ಹುಡುಗನಾಗಿದ್ದಾಗಿನ ಹಳೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ.

ಹುಡುಗನಾಗಿ ಹುಟ್ಟಿ ಹುಡುಗಿಯಾಗಿ ಬದಲಾಗಿ ಬಿಗ್‌ಬಾಸ್ 10ನಲ್ಲಿ ಹವಾ ಸೃಷ್ಟಿಸುತ್ತಿರುವ ನೀತು ವನಜಾಕ್ಷಿ ಅವರು ಹುಡುಗನಾಗಿದ್ದಾಗಿನ ಹಳೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ.
ಹುಡುಗನಾಗಿದ್ದಾಗ ನೀತೂ ವನಜಾಕ್ಷಿ ಸಖತ್ ಹ್ಯಾಂಡ್‌ಸಮ್ ಆಗಿ ಕಾಣಿಸುತ್ತಿದ್ದು ಯಾವ ಹುಡುಗಿಯಾದರೂ ಮೊದಲ ನೋಟದಲ್ಲೇ ಮೆಚ್ಚಿಕೊಳ್ಳುವಂತಿದ್ದರು. ಅಷ್ಟೊಂದು ಸುಂದರವಾಗಿವೇ ಅವರ ಹಳೆಯ ಫೋಟೋಗಳು.
ಅವರ ಹಳೆಯ ಸುಂದರ ಫೋಟೋಗಳನ್ನು ನೋಡಿದ ಅನೇಕರು ಅವರು ಹುಡುಗ ಆಗಿದ್ದಾಗಲೇ ಸ್ಮಾರ್ಟ್ ಆಗಿದ್ರು ಹುಡುಗಿ ಯಾಕಾದ್ರೂ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಹುಡುಗನಾಗಿ ಸಖತ್ ಆಗಿ ಕಾಣಿಸುವ ಅವರನ್ನು ನೋಡಿದ ಕೆಲವರು ಛೇ ಇವರು ಹುಡುಗನಾಗಿಯೇ ಇರಬೇಕಿತ್ತು ಎಂದು ಕಾಮೆಂಟ್ ಮಾಡ್ತಿದ್ದಾರೆ. ಮತ್ತೆ ಕೆಲವರು ಅವರನ್ನು ಮಾಜಿ ಐಎಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಗೆ ಹೋಲಿಕೆ ಮಾಡಿದ್ದಾರೆ.
ಮತ್ತೆ ಕೆಲವರು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಅರಗಿಣಿ ಸಿರೀಯಲ್‌ನ ಹೀರೋ ದಿ. ಸಿದ್ಧಾರ್ಥ್‌ಗೆ ಹೋಲಿಕೆ ಮಾಡಿದ್ದಾರೆ. ಒಟ್ಟಿನಲ್ಲಿ ಆ ಫೋಟೋಗಳು ನೀತೂ ಒಬ್ಬರು ಸುಂದರ ಯುವಕರಂತಿದ್ದರೂ ಎಂಬುದನ್ನು ಖಚಿತಪಡಿಸುತ್ತಿವೆ.
ಬಿಗ್ ಬಾಸ್‌ಗೆ ಬರುವ ಮೊದಲು ನೀತೂ ಅವರು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ 'ಸೂಪರ್ ಕ್ವಿನ್ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು. ಇವರು ಮಿಸ್ ಇಂಟರ್‌ನ್ಯಾಷನಲ್ ಕಿರೀಟ ತೊಟ್ಟ ಭಾರತದ ಮೊದಲ ಮಂಗಳಮುಖಿ
ಹುಡುಗನಾಗಿ ಹುಟ್ಟಿ ಹುಡುಗಿಯಾಗಿ ಬದಲಾಗಿ ಬದುಕುತ್ತಿರುವ ನೀತು ಅವರ ಜೀವನ ಹೂವಿನ ಹಾದಿಯಲ್ಲ, ಇವರ ಬಾಲ್ಯದ ಹೆಸರು ಮಂಜುನಾಥ್.
ಗದಗದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಎಲ್ಲ ಟ್ರಾನ್ಸ್ ಜೆಂಡರ್ ಗಳಂತೆ ಇವರು ಗಂಡಾಗಿ ಹುಟ್ಟಿದ್ದು ಇವರಿಗೆ ಏಳನೇ ಕ್ಲಾಸಿಗೆ ಬಂದಾಗ ತಾನು ಉಳಿದ ಹುಡುಗರಂತೆ ಅಲ್ಲ, ತಾನು ಬೇರೆ ಎಂದು ಅನಿಸತೊಡಗಿದೆ.
ಪ್ರೌಢಾವಸ್ಥೆಯಲ್ಲಿ ಇವರ ಸ್ನೇಹಿತರೆಲ್ಲ ಹುಡುಗಿಯರ ಕನಸು ಕಾಣುತ್ತಿದ್ದರೆ ಇವರಿಗೆ ಹುಡುಗಿಯರಂತೆ ಬದುಕೋದು, ಅವರಂತೆ ಡ್ರೆಸ್, ಮೇಕಪ್ ಮಾಡಿಕೊಳ್ಳೋದು ಇಷ್ಟ ಆಗ್ತಿತ್ತು. ಆದರೆ ಮನೆಯವರಿಂದ ತಿರಸ್ಕೃತನಾಗಬಹುದು, ಸ್ನೇಹಿತರಿಂದ ಅಪಹಾಸ್ಯಕ್ಕೆ ಗುರಿಯಾಗಬಹುದು ಅನ್ನೋ ಭಯದಲ್ಲಿ ಅದನ್ನು ತನ್ನೊಳಗೇ ಅದುಮಿಡುತ್ತಾರೆ.
ಸದ್ಯಕ್ಕೀಗ ನೀತು ಟ್ಯಾಟೂ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕ ತಿನಿಸುಗಳ 'ಗಮ ಗಮ' ಅನ್ನೋ ಹೊಟೇಲ್ ಶುರು ಮಾಡೋ ಮೂಲಕ ಹೊಟೇಲ್ ಉದ್ಯಮಿ ಆಗಿದ್ದಾರೆ. ಜೊತೆಗೆ ಮಾಡೆಲಿಂಗ್‌ನಲ್ಲಿ, ಬ್ಯೂಟಿ ಪೇಟೆಂಟ್ ಗಳಲ್ಲಿ ಗುರುತಿಸಿಕೊಂಡಿದ್ದಾರೆ.
ನೀತು ಅವರ ಅಮ್ಮ ಹಳ್ಳಿಯ ಹೆಣ್ಣುಮಗಳು, ಮುಗ್ಧೆ. ಮಂಗಳಮುಖಿ ಅಂದರೆ ಕೈತಟ್ಟಿ ಭಿಕ್ಷೆ ಬೇಡುವವರು ಅಂತ ಅವರ ಭಾವನೆ. ಆ ಭಾವವೇ ಅವರಿಗೆ ನೋವು ಕೊಡುತ್ತಿತ್ತು. ಆದರೆ ಅಷ್ಟೊತ್ತಿಗಾಗಲೇ ಮಂಜುನಾಥ್ ಹೋಗಿ ನೀತುವಾಗಿದ್ದ ಈ ಗಟ್ಟಿಗಿತ್ತಿ ಅಮ್ಮನ ಈ ಸುಳ್ಳು ನಂಬಿಕೆಯನ್ನು ಬಹಳ ಬೇಗ ಸುಳ್ಳಾಗಿಸಿದವರು. ಸೂಪರ್‌ಕ್ವೀನ್ ವೇದಿಕೆಯಲ್ಲೂ ಅವರು ಹೇಳಿದ್ದು, ಆತ ಮಗನಾಗಿದ್ದಕ್ಕಿಂತಲೂ ಮಗಳಾಗಿದ್ದಕ್ಕೆ ತನಗೆ ಹೆಮ್ಮೆ ಇದೆ ಅಂತ.