MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • 20 ವರ್ಷದಲ್ಲಿ ಫಸ್ಟ್‌ ಟೈಮ್‌ ಎಲ್ಲೂ ಹೇಳದ ಆ ಕಹಿಸತ್ಯ ತೆರೆದಿಟ್ಟ Anchor Anushree ! ಆ ಮಾತೆಲ್ಲ ಆಡಬೇಕಾ?

20 ವರ್ಷದಲ್ಲಿ ಫಸ್ಟ್‌ ಟೈಮ್‌ ಎಲ್ಲೂ ಹೇಳದ ಆ ಕಹಿಸತ್ಯ ತೆರೆದಿಟ್ಟ Anchor Anushree ! ಆ ಮಾತೆಲ್ಲ ಆಡಬೇಕಾ?

Anchor Anushree: ನಿರೂಪಕಿ ಅನುಶ್ರೀ ಅವರು ನಿರೂಪಣೆ ಶುರು ಮಾಡಿ 20 ವರ್ಷಗಳಾಗಿವೆ. ಜೀ ಕನ್ನಡ ವಾಹಿನಿಯು ಈ ಖುಷಿಯನ್ನು ಸಂಭ್ರಮಿಸಿದೆ. ಈ ವೇಳೆ ಎಲ್ಲೂ ಹೇಳಿರದ ವಿಷಯವನ್ನು ಅವರು ಮಾತನಾಡಿದ್ದಾರೆ. 

2 Min read
Author : Padmashree Bhat
Published : Feb 01 2026, 04:16 PM IST
Share this Photo Gallery
  • FB
  • TW
  • Linkdin
  • Whatsapp
16
ಅನುಶ್ರೀಯನ್ನು ಹೊಗಳಿದ ನಿರೂಪಕರು
Image Credit : zee kannada

ಅನುಶ್ರೀಯನ್ನು ಹೊಗಳಿದ ನಿರೂಪಕರು

ಅಕುಲ್‌ ಬಾಲಾಜಿ, ಗಾಯಕ ಗುರುಕಿರಣ್‌, ಸೃಜನ್‌ ಲೋಕೇಶ್‌, ಅನುಪಮಾ ಗೌಡ ಹಾಗೂ ತಮಿಳು ತೆಲುಗು ರಿಯಾಲಿಟಿ ಶೋ ನಿರೂಪಕರಾದ ಪ್ರಿಯಾಂಕಾ, ಅರ್ಚನಾ, ರೀನಾ ಕೂಡ ಅನುಶ್ರೀ ಬಗ್ಗೆ ಹೊಗಳಿ ಮಾತನಾಡಿದ ವಿಡಿಯೋವನ್ನು ಇದೇ ಸಂದರ್ಭದಲ್ಲಿ ಪ್ಲೇ ಮಾಡಲಾಯಿತು.

26
ನಾನು ಬಕೆಟ್‌ ಹಿಡಿಯುತ್ತೇನೆ ಅಂತಾರೆ
Image Credit : zee kannada

ನಾನು ಬಕೆಟ್‌ ಹಿಡಿಯುತ್ತೇನೆ ಅಂತಾರೆ

ಅನುಶ್ರೀ ಅವರು, “ನಾನು ಹೀರೋ, ಹೀರೋಯಿನ್‌ಗಳಿಗೆ ಬಕೆಟ್‌ ಹಿಡಿಯುತ್ತೇನೆ ಎಂದು ಹೇಳೋದುಂಟು. ಇವಳಿಗೆ ಬೇರೆ ಗತಿಯಿಲ್ಲ, ಜೀ ಚಾನೆಲ್‌ ಆಗಬೇಕು ಎಂದು ಹೇಳಿದವರೂ ಇದ್ದಾರೆ. ನಮ್ಮ ಕನ್ನಡ ಹೀರೋ, ಹೀರೋಯಿನ್‌ಗಳನ್ನು ನಾವು ಹೊಗಳದೆ ಇನ್ಯಾರು ಹೊಗಳ್ತಾರೆ? ನಮಗೆ ನಮ್ಮ ಕನ್ನಡ ಕಲಾವಿದರ ಮೇಲೆ ಅಭಿಮಾನ ಇದೆ. ನಾನು ಅಳೋದು, ನಗೋದು ವೇದಿಕೆ ಮೇಲೆ, ನಾಳೆ ಸತ್ತರೂ ಕೂಡ ವೇದಿಕೆ ಮೇಲೆ ಆಗಬೇಕು. ನಾನು ಅಷ್ಟು ನಿರೂಪಣೆಯನ್ನು ಇಷ್ಟಪಡ್ತೀನಿ” ಎಂದು ಹೇಳಿದ್ದಾರೆ.

ನಿರೂಪಕಿ ಅನುಶ್ರೀ ಸಾವಿನ ಮಾತು ಆಡಿದ್ದು ಶಿವರಾಜ್‌ಕುಮಾರ್‌ಗೆ ಬೇಸರ ತಂದಿದೆ. ವೀಕ್ಷಕರು ಕೂಡ ಈ ಮಾತು ಆಡಿದ್ದಕ್ಕೆ ಬೇಸರಗೊಂಡಿದ್ದಾರೆ. ಈ ಮಾತು ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

Related Articles

Related image1
ಜನರೊಳಗೆ ಮಾನಭಂಗ ಮಾಡಿದವರಿಗೆ ಒಳ್ಳೆಯದಾಗಲಿ: ದಿಢೀರ್​ ಲೈವ್​ಗೆ ಬಂದ Anchor Anushree ಹೇಳಿದ್ದೇನು?
Related image2
Photos: ವಿದೇಶದಲ್ಲಿ‌ Anchor Anushree ಜನ್ಮದಿನ ಆಚರಿಸಿ, ವಿಶೇಷ ವಿಷಯ ಹಂಚಿಕೊಂಡ ಪತಿ ರೋಶನ್
36
ಮಂಗಳೂರಿನಿಂದ ಬೆಂಗಳೂರಿಗೆ ಬಂದ ಅನುಶ್ರೀ
Image Credit : Instagram

ಮಂಗಳೂರಿನಿಂದ ಬೆಂಗಳೂರಿಗೆ ಬಂದ ಅನುಶ್ರೀ

ಯಾರೋ ಒಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡಬಹುದು ಎಂದರು. ನನ್ನ ತಾಯಿಗೆ ಬೇರೆ ಮನೆ ಮಾಡಬಹುದು ಎನ್ನೋದಷ್ಟೇ ನನ್ನ ಉದ್ದೇಶ ಆಗಿತ್ತು. ಹೀಗಾಗಿ ನಾನು ಮಂಗಳೂರಿನಿಂದ ಬೆಂಗಳೂರಿಗೆ ಬಂದೆ ಎಂದು ಅನುಶ್ರೀ ಹೇಳಿದ್ದಾರೆ.

46
ಬೆಂಗಳೂರು ಭಾಷೆ ಕಲಿಯಬೇಕಿತ್ತು
Image Credit : Instagram

ಬೆಂಗಳೂರು ಭಾಷೆ ಕಲಿಯಬೇಕಿತ್ತು

ನನಗೆ ಮಂಗಳೂರು ಭಾಷೆ ಬರುತ್ತಿತ್ತು, ಆದರೆ ಬೆಂಗಳೂರು ಭಾಷೆ ಬರುತ್ತಿರಲಿಲ್ಲ. ಬೆಂಗಳೂರು ಭಾಷೆಗೂ, ಮಂಗಳೂರು ಭಾಷೆಗೂ ವ್ಯತ್ಯಾಸ ಇದೆ, ನನಗೆ ಭಾಷೆ ಕಲಿಯೋದು ಸುಲಭ ಇರಲಿಲ್ಲ ಎಂದು ಅನುಶ್ರೀ ಹೇಳಿದ್ದಾರೆ.

56
ಫಸ್ಟ್‌ ಟೈಮ್‌ ಬೆಂಬಲ ಕೊಟ್ಟಿದ್ದು ಯಾರು?
Image Credit : Instagram

ಫಸ್ಟ್‌ ಟೈಮ್‌ ಬೆಂಬಲ ಕೊಟ್ಟಿದ್ದು ಯಾರು?

ನನ್ನ ಮೊದಲ ರಿಯಾಲಿಟಿ ಶೋನಿಂದ ನನ್ನ ಜೊತೆಗೆ ಶ್ರೀಕಾಂತ್‌ ಸರ್‌ ಇದ್ದರು. ಮನೆಯಲ್ಲಿ ಅಡುಗೆ ಮಾಡುವಾಗ, ನೆಲ ಒರೆಸುವಾಗ, ಕಸ ಗುಡಿಸುವಾಗ ನನ್ನ ತಾಯಿ ನನ್ನ ಜೊತೆಗೆ ಮಾತನಾಡಿ, ಮಾತು ಹೇಳಿಕೊಟ್ಟಿದ್ದರು. ನನ್ನ ತಾಯಿ ಧೈರ್ಯ ಕೊಟ್ಟಿದ್ದಕ್ಕೆ ನಾನು ಇಲ್ಲಿಗೆ ಬಂದಿದ್ದು, ಬೇರೆ ಮನೆ ಮಾಡಿದ್ದೀನಿ ಎಂದು ಅನುಶ್ರೀ ಹೇಳಿದ್ದಾರೆ.

66
ಆ ಕಹಿಸತ್ಯ ಏನು?
Image Credit : Instagram

ಆ ಕಹಿಸತ್ಯ ಏನು?

ನಮ್ಮದು ಮಣ್ಣಿನ ಮನೆ, ಮಳೆ ಬಂದಾಗ ಮನೆಯೊಳಗೆ ಕೆಸರು ಬರೋದು ಸಹಜ. ನಮ್ಮ ಮನೆ ಹಿಂದೆ ಗುಡ್ಡ ಇತ್ತು. ಅಷ್ಟೇ ಅಲ್ಲದೆ ಬೇರೆ ಬೇರೆ ಮನೆಗಳು ಇರುತ್ತಿದ್ದವು. ಹೀಗಾಗಿ ಕೆಸರು ಬರುತ್ತಿತ್ತು. ಆದರೆ ಬಾತ್‌ರೂಮ್‌ ನೀರು, ಗಲೀಜು ಬರುತ್ತಿತ್ತು. ಇದನ್ನು ನಾನು ಎಲ್ಲಿಯೂ ಹೇಳಿರಲಿಲ್ಲ. ಅಲ್ಲಿಂದ ನಮ್ಮ ತಾಯಿಯನ್ನು ಹೊರಗಡೆ ಕರೆದುಕೊಂಡು ಬರಬೇಕು ಎನ್ನೋದಿತ್ತು ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಆಂಕರ್ ಅನುಶ್ರೀ
ಸ್ಯಾಂಡಲ್‌ವುಡ್
ಟಿವಿ ಶೋ

Latest Videos
Budget 2026 : SIP Calculator
Monthly Investment
₹
Expected Annual Return
%
Investment Duration
Yr
Recommended Stories
Recommended image1
ಸದ್ದಿಲ್ಲದೇ ಮದುವೆಯಾಗಲು ರೆಡಿಯಾದ ರುದ್ರ ಮಾಸ್ಟರ್.. ಹುಡುಗಿ ಯಾರು?
Recommended image2
ನನ್ನಿಷ್ಟದ ಹುಡುಗ ಸಿಕ್ಕರೆ ಮಾತ್ರ ಮದುವೆ ಆಗೋದು ಅಂತ ಫಿಕ್ಸ್‌ ಆಗಿದ್ದೆ: 'ಪುಟ್ಟಕ್ಕನ ಮಕ್ಕಳು' ನಟಿ ಸಂಜನಾ ಬುರ್ಲಿ
Recommended image3
ಅಕ್ಕ ನಿನ್ ಗಂಡ್ ಹೆಂಗಿರಬೇಕು? ಶಂಕ್ರಣ್ಣಂಗೆ ಇರ್ಬೇಕೆಂದ್ರು ಸೀರಿಯಲ್ ನೋಡುವ ಲೇಡಿಸ್!
Related Stories
Recommended image1
ಜನರೊಳಗೆ ಮಾನಭಂಗ ಮಾಡಿದವರಿಗೆ ಒಳ್ಳೆಯದಾಗಲಿ: ದಿಢೀರ್​ ಲೈವ್​ಗೆ ಬಂದ Anchor Anushree ಹೇಳಿದ್ದೇನು?
Recommended image2
Photos: ವಿದೇಶದಲ್ಲಿ‌ Anchor Anushree ಜನ್ಮದಿನ ಆಚರಿಸಿ, ವಿಶೇಷ ವಿಷಯ ಹಂಚಿಕೊಂಡ ಪತಿ ರೋಶನ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved