ಮದ್ವೆ ಆದ್ರೆ ಆಗ್ಲಿ ಬಿಟ್ರೆ ಬಿಡ್ಲಿ, ಮಗು ತಂದುಕೊಡುವ ಖುಷಿ ನನಗೆ ಗೊತ್ತಿಲ್ಲ: ಅನುಪಮಾ ಗೌಡ
ವಯಸ್ಸಾಗುತ್ತಿದೆ ಮದುವೆ ಮಾಡಿಕೊಳ್ಳಿ ಎಂದು ಪದೇ ಪದೆ ಕಾಮೆಂಟ್ ಮಾಡುವ ಜನರಿಗೆ ಉತ್ತರ ಕೊಟ್ಟ ಅನುಪಮಾ ಗೌಡ....
ಕನ್ನಡ ಕಿರುತೆರೆಯ ಜನಪ್ರಿಯ ಮುಖ ಅನುಪಮಾ ಗೌಡ ಮೊದಲ ಸಲ ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ ರಿವೀಲ್ ಮಾಡಿದ್ದಾರೆ. ಮದುವೆ ಮಾಡಿಕೊಳ್ಳುವ ಮನಸ್ಸು ಇದ್ಯಾ?
ಮದುವೆ ಆಗು ವಯಸ್ಸಾಗುತ್ತಿದೆ ಎಂದು ಸುಮಾರು ಜನ ಹೇಳ್ತಾರೆ, ಮದ್ವೆ ಆದ್ರೆ ವಯಸ್ಸು ಕಡಿಮೆ ಆಗುತ್ತಾ ಅಂತ ಉಲ್ಟಾ ಕೇಳ್ತೀನಿ. ಖಂಡಿತಾ ಮದುವೆ ಯೋಚನೆ ಇಲ್ಲ.
ಮದುವೆ ಅನ್ನೋದು ನನ್ನ ವೈಯಕ್ತಿಕ ನಿರ್ಧಾರ ಆಗಿರುತ್ತದೆ. ಕೆಲಸ ವಿಚಾರದಲ್ಲಿ ಬೈಯುವ ಹೊಗಳುವ ಅಧಿಕಾರ ಎಲ್ಲರಿಗೂ ಇಲ್ಲ ಆದರೆ ನನ್ನ ವೈಯಕ್ತಿಕ ವಿಚಾರದಲ್ಲಿ ಅಲ್ಲ.
ಮದುವೆ ಆಗೋದು ಬಿಡೋದು ಪರ್ಸನಲ್ ಆಯ್ಕೆ ಆಗಿರುತ್ತದೆ ನನ್ನ ಮನೆಯಲ್ಲಿ ಒತ್ತಾಯ ಮಾಡುತ್ತಿಲ್ಲ ಏಕೆಂದರೆ ಮದುವೆ ಆದ್ಮೇಲೆ ಜೀವನ ಹೇಗಿರ ಬೇಕು ಎಂದು ಪ್ಲ್ಯಾನ್ ಮಾಡಿದ್ದೀನಿ.
ಮದುವೆ ಆಗುತ್ತಿದ್ದಂತೆ ಇಂಡಸ್ಟ್ರಿ ಬಿಡಬೇಕು ಮನೆಯಲ್ಲಿ ಅಡುಗೆ ಮಾಡಿಕೊಂಡು ಎಂಜಾಯ್ ಮಾಡಬೇಕು ಅಂದುಕೊಂಡಿರುವೆ ಆದರೆ ನನಗೆ ಯಾರೂ ಪಾರ್ಟನರ್ ಸಿಕ್ಕಿಲ್ಲ.
ನಾನು ಸಾಕುತ್ತಿರುವ ನಾಯಿಯನ್ನು ನನ್ನ ಮಗನಂತೆ ಪ್ರೀತಿ ಮಾಡುತ್ತಿರುವೆ. ಮದುವೆ ಆದ್ರೆ ಆಗ್ಲಿ ಬಿಟ್ರೆ ಬಿಡ್ಲಿ....ನನ್ನ ತಾಯಿಯಿಂದ ಜೀವನ ಮಾಡುವುದು ಕಲಿತಿದ್ದೀನಿ.
ಮಗು ಯಾವ ರೀತಿ ಖುಷಿ ತಂದುಕೊಡುತ್ತದೆ ಅದರ ಬಗ್ಗೆ ನನಗೆ ಐಡಿಯಾ ಇಲ್ಲ ಆದರೆ ಮಗನ ಪ್ರೀತಿಯನ್ನು ನನ್ನ ನಾಯಿ ಶ್ಯಾಡೋ ತಂದು ಕೊಟ್ಟಿದೆ ಎಂದು ರ್ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಒಂದು ವಿಚಾರ ಗಮನಿಸಬೇಕು...ನಾವು ಹೇಗಿರುತ್ತೀವಿ ನಮ್ಮ ಶ್ವಾನಗಳು ನಮ್ಮಂತೆ ಇರುತ್ತದೆ. ಬಿಗ್ ಬಾಸ್‌ಗೆ ಹೋದಾಗ ಟಿವಿ ನೋಡುತ್ತಿದ್ದನಂತೆ. ಶ್ವಾನ ಇಲ್ಲದೆ ಒಂದು ದಿನವೂ ಇರಲು ಸಾಧ್ಯವಿಲ್ಲ.