ಪತ್ನಿಗೆ ಐಷಾರಾಮಿ ಕಾರು ಗಿಫ್ಟ್ ಮಾಡಿದ ಅಕುಲ್ ಬಾಲಾಜಿ; ಫೋಟೋ ವೈರಲ್!
ಸೋಷಿಯಲ್ ಮೀಡಿಯಾದಲ್ಲಿ ಪತಿ ಕೊಡಿಸಿರುವ ಕಾರು ಗಿಫ್ಟ್ ವಿಡಿಯೋ ಹಂಚಿಕೊಂಡ ಜೋ ಅಕುಲ್.....
ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ತಮ್ಮ ಪತ್ನಿ ಜೋಗೆ ದುಬಾರಿ ಕಾರು ಗಿಫ್ಟ್ ಮಾಡಿದ್ದಾರೆ. ಜೋ ವಿಡಿಯೋ ಹಂಚಿಕೊಂಡಿದ್ದಾರೆ.
ಎಲೆಕ್ಟ್ರಿಕ್ ವಾಹನ ಕುಟುಂಬ ಸೇರಿಕೊಂಡೆ ಕಾರ್ಬನ್ ಫುಟ್‌ಪ್ರಿಂಟ್ ಕಡಿಮೆ ಮಾಡಲು ಇಲ್ಲಿಂದ ಆರಂಭ. ಸರ್ಪ್ರೈಸ್ ಕೊಟ್ಟಿರು ಅಕುಲ್ ಎಂದು ಜೋ ಬರೆದುಕೊಂಡಿದ್ದಾರೆ.
ಸಿಲ್ವರ್ ಬಣ್ಣದ ಬಿಲ್ಡ್ ಯುವರ್ ಡ್ರೀಮ್ ಕಾರನ್ನು ಪತ್ನಿಗೆ ಗಿಫ್ಟ್ ಕೊಟ್ಟಿದ್ದಾರೆ. ಕಾರನ್ನು ನೋಡಿ ಖುಷಿ ಪಟ್ಟ ಜೋ ಆನಂತರ ಕೇಕ್ ಕಟ್ ಮಾಡಿದ್ದಾರೆ.
ಗೋಗಲ್ ತೋರಿಸುವ ಮಾಹಿತಿ ಪ್ರಕಾರ ಈ ಕಾರಿನ ಆನ್ ರೋಡ್ ಬೆಲೆ 29.15 ಲಕ್ಷ ರೂ. ಇದು e6 ಆಗಿದ್ದು ಐಷಾರಾಮಿ ಎಲೆಕ್ಟ್ರಿಕ್ ಕಾರು ಎನ್ನಲಾಗಿದೆ.
BYD ಚೈನಾ ಕಾರ್ ಆಗಿದ್ದು ಎರಡು ಎಡಿಷನ್ ಇದೆ. ಮೊದಲು 1MUV ಮತ್ತು 1SUV. 29.15 ಲಕ್ಷದಿಂದ 33.99 ರೂಪಾಯಿ ವರೆಗೂ ಲಭ್ಯವಿದೆ.
ಸ್ಪೆಷಲ್ ಕಾರ್ಯಕ್ರಮ ಮತ್ತು ರಿಯಾಲಿಟಿ ಶೋಗಳಲ್ಲಿ ಅಕುಲ್ ಬಾಲಾಜಿ ನಿರೂಪಣೆ ಮಾಡುತ್ತಾರೆ. ಅಕುಲ್ ಇರುವ ಶೋನಲ್ಲಿ ಕಾಮಿಡಿ ಪಕ್ಕಾ ಅಂತಾ ವೀಕ್ಷಕರು.
ತಮ್ಮ ಕರಿಯರ್ ನ ಆರಂಭಿಕ ದಿನಗಳಲ್ಲಿ, ಅಕುಲ್ (Akul Balaji) 'ಆತ್ಮಿಯಾ' ಎಂಬ ಚಲನಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು.
ಮಿಲನಾ, ಕ್ರೇಜಿಸ್ಟಾರ್ ಇನ್ನೂ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ರೂ ಸಹ ಅವರು ಹೆಚ್ಚು ಜನಪ್ರಿಯತೆ ಪಡೆದದ್ದು ಮಾತ್ರ ನಿರೂಪಕರಾಗಿ. ಕನ್ನಡ ಮತ್ತು ತೆಲುಗು ಕಿರುತೆರೆಯ ಬಹುಬೇಡೀಕೆಯ ನಿರೂಪಕ ಇವರು.