ಸಿರಿ ಪ್ರಹ್ಲಾದ್ ಮುಖದ ತುಂಬಾ ಮೊಡವೆ; ಸುಮ್ಮನೆ ಜಡ್ಜ್ ಮಾಡಬೇಡಿ ಎಂದ ಕಿರುತೆರೆ ನಟಿ
ನಿಮ್ಮ ತ್ವಚೆ ಸೂಪರ್ ಎಂದು ಕಾಮೆಂಟ್ ಮಾಡುವ ಅಭಿಮಾನಿಗಳಿಗೆ ಅಸಲಿ ಕಥೆ ಬಿಚ್ಚಿಟ್ಟ ಕಿರುತೆರೆ ನಟಿ ಸಿರಿ ಪ್ರಹ್ಲಾದ್

ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಹೆಸರು ಮಾಡಿರುವ ಸುಂದರಿ ಸಿರಿ ಪ್ರಹ್ಲಾಸ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ.
'ನನ್ನನ್ನು ಫಾಲೋ ಮಾಡುವ ನಿಮ್ಮೆಲ್ಲರಿಗೂ ನನ್ನ ಮುಖದ ಮತ್ತೊಂದು ಸೈಡ್‌ನ ತೋರಿಸಲು ಮುಂದಾಗಿರುವೆ. ಇಲ್ಲ ನೀವು ಅಂದುಕೊಂಡ ರೀತಿಯಲ್ಲಿ ಇಲ್ಲ' ಎಂದು ಬರೆದುಕೊಂಡಿದ್ದಾರೆ ಸಿರಿ.
'ಅನೇಕರು ಅಂದುಕೊಂಡಿದ್ದಾರೆ ನನ್ನ ಮುಖದ ತ್ವಚೆ ತುಂಬಾ ಕ್ಲಿಯರ್ ಅಗಿದೆ ಎಂದು. ಅದು ನಿಮ್ಮ ತಪ್ಪು ಕಲ್ಪನೆ. Unapologetically confident and happy either ways btw'
'ನಾವು ಮತ್ತೊಬ್ಬರನ್ನು ಜಡ್ಜ್ ಮಾಡುವುದು ಕಡಿಮೆ ಮಾಡೋಣ. ಗಂಡು ಅಥವಾ ಹೆಣ್ಣು ಎಂದು ಲೆಕ್ಕ ಮಾಡದೆ ಅವರಿಗೆ ಅತ್ತಿ ಹೆಚ್ಚು ಗೌರವ ಕೊಡೋಣ'
'ಪ್ರತಿಯೊಬ್ಬರಲ್ಲಿರುವ ಯೂನಿಕ್‌ನೆಸ್‌ನ ಧೈರ್ಯವಾಗಿ ಫ್ಲಾಂಟ್ ಮಾಡೋಣ.ನಾವು ಅಧಿಕಾರವನ್ನು ಪಡೆಯೋಣ ಮತ್ತು ಸಮಾನ ಜಗತ್ತಿಗೆ ಕೊಡುಗೆ ನೀಡೋಣ ಮತ್ತು ಉನ್ನತವಾದದ್ದಲ್ಲ' ಎಂದಿದ್ದಾರೆ.
'ನೀವು ನ್ಯಾಚುರಲ್ ಆಗಿ ನೋಡಲು ಚೆನ್ನಾಗಿದ್ದೀರಿ' ಎಂದು ಬಿಗ್ ಬಾಸ್ ಅನುಪಮಾ ಗೌಡ ಕಾಮೆಂಟ್ ಮಾಡಿದ್ದಾರೆ. ಏನೇ ಇರಲಿ ನಿಮ್ಮ ನಗು ಒಂದೇ ಸಾಕು ಜನರ ಪ್ರೀತಿ ಗೆಲ್ಲುವುದಕ್ಕೆ ಎಂದಿದ್ದಾರೆ ಫ್ಯಾನ್ಸ್.