Wedding: ತಮಿಳು ನಟ ಸಿಧು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶ್ರೇಯಾ ಅಂಚರ್!
ಆನ್‌ಸ್ಕ್ರೀನ್ ಜೋಡಿಗಳ ರಿಯಲ್ ಲೈಫ್ ಮದುವೆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್. ಇವರಿಬ್ಬರ ಲವ್ ಸ್ಟೋರಿಗೆ ನೆಟ್ಟಿಗರ ಮೆಚ್ಚುಗೆ. Photo credit: ಶ್ರೇಯಾ ಇನ್‌ಸ್ಟಾಗ್ರಾಂ ಖಾತೆ

ಮಂಗಳೂರು (Mangalore) ಮೂಲದ ನಟಿ ಶ್ರೇಯಾ ಅಂಚರ್ (Shreya Anchan) ಮತ್ತು ಚೆನ್ನೈನ (Chennai) ಮೂಲದ ನಟ ಸಿಧು (Sidhu sid) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆ ಫೋಟೋವನ್ನು ನವ ಜೋಡಿಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿದ್ದಾರೆ. ಇಷ್ಟು ದಿನ ಇಬ್ಬರು ಲವರ್ಸ್ (Lovers) ಆಗಿದ್ದರು. ಈಗ ದಂಪತಿಗಳಾಗಿದ್ದೀರಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಅರಮನೆ (Aramane) ಧಾರಾವಾಹಿ ಮತ್ತು ಕಥೆಯೊಂದು ಶುರುವಾಗಿದೆ (Katheondu Shuruvagide) ಸಿನಿಮಾಗಳಲ್ಲಿ ನಟಿ ಶ್ರೇಯಾ ನಟಿಸಿದ್ದಾರೆ. ಅಲ್ಲದೆ ಸಿಧು ಜೊತೆ ಕೂಡ ಆನ್‌ಸ್ಕ್ರೀನ್ ರೊಮ್ಯಾನ್ಸ್ (Romance) ಮಾಡಿದ್ದಾರೆ.
ತಮಿಳಿನ Tirumanam ಧಾರಾವಾಹಿಯಲ್ಲಿ ಸಿಧು ಮತ್ತು ಶ್ರೇಯಾ ಲೀಡ್ ಪಾತ್ರಧಾರಿಗಳಾಗಿದ್ದರು. ಇದು ಕನ್ನಡದ ಅಗ್ನಿಸಾಕ್ಷಿ (Agnisakshi) ಧಾರಾವಾಹಿ ರಿಮೇಕ್ (Remake daily soap) ಆಗಿತ್ತು.
2018ರಲ್ಲಿ ಈ ಧಾರಾವಾಹಿ ಆರಂಭವಾಗಿದ್ದು, 2020ರಲ್ಲಿ ಅಂತ್ಯವಾಗಿತ್ತು. ಒಂದೇ ಪ್ರಾಜೆಕ್ಟ್‌ನಲ್ಲಿ (Project) ಇಬ್ಬರೂ ಕೆಲಸ ಮಾಡಿದ್ದು , ಸ್ನೇಹಿತರಾಗಿ ನಂತರ ಪ್ರೀತಿಸಲು ಆರಂಭಿಸಿದ್ದರು.
ಧಾರಾವಾಹಿ ಹೊರತು ಪಡಿಸಿ ಇಬರಿಬ್ಬರೂ ಆಫ್ ಸ್ಕ್ರೀನ್ ರೊಮ್ಯಾನ್ಸ್ (Off-screen Romance) ದೊಡ್ಡ ಸುದ್ದಿ ಆಗಿತ್ತು. ಆದರೆ ಇಬ್ಬರೂ ಈ ವಿಷಯವನ್ನು ರಿವೀಲ್ ಮಾಡಿರಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಈ ಜೋಡಿ ಹೊಂದಿದೆ.
ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಇಬ್ಬರ ಕುಟುಂಬಸ್ಥರು (Family) ಹಾಗೂ ಸ್ನೇಹಿತರು (Friends) ಮಾತ್ರ ಭಾಗಿಯಾಗಿದ್ದರು. ಮನೋರಂಜನೆ ಕ್ಷೇತ್ರದ ಸ್ನೇಹಿತರಿಗೆ ಸ್ಪೆಷನ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.