ಲಂಗ ದಾವಣಿಯಲ್ಲಿ ಮಿಂಚಿದ ಮೇಘಾ ಶೆಟ್ಟಿ; ಕೈವ ಲುಕ್ ಎನ್ನುತ್ತಿರುವ ನೆಟ್ಟಿಗರು!
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘಾ ಶೆಟ್ಟಿ. ಲಂಗ ದಾವಣಿ ಲುಕ್‌ಗೆ ಫಿದಾ ಆದ ನೆಟ್ಟಿಗರು...

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿ ಪ್ರತಿಯೊಬ್ಬ ಕನ್ನಡಿಗರ ಮನೆ ಮಗಳಾಗಿದ್ದಾರೆ.
ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೇಘಾ ಈಗ ಸ್ಟೈಲಿಷ್ ಸ್ಟಾರ್ ಧನ್ವೀರ್ ಜೊತೆ ಕೈವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಕೈವ ಸಿನಿಮಾದಲ್ಲಿ ಮೇಘಾ ಶೆಟ್ಟಿ ಕ್ಯಾರೆಕ್ಟರ್ ಏನೆಂದು ರಿವೀಲ್ ಆಗಿಲ್ಲ ಆದರೆ ಇನ್‌ಸ್ಟಾಗ್ರಾಂನಲ್ಲಿ ಲಂಗ ದಾವಣಿ ಫೋಟೋ ಅಪ್ಲೋಡ್ ಮಾಡುತ್ತಿರುವುದನ್ನು ನೋಡಿ ನೆಟ್ಟಿಗರು ಕೈವ ಲುಕ್ ಎನ್ನುತ್ತಿದ್ದಾರೆ.
ನನ್ನ ಪ್ರಪಂಚದಲ್ಲಿ ನಾನು ಕಳೆದು ಹೋಗಿರುವೆ ಲಂಡನ್ ಕೆಫೆ ಆಪರೇಷನ್ ನಂತರ ಕ್ಲಿಕ್ ಮಾಡಿರುವ ಫೋಟೋವಿದು ಎಂದು ಬರೆದುಕೊಂಡಿದ್ದಾರೆ.
ಪಕ್ಕಾ ಹಳ್ಳಿ ಲುಕ್ ಇದಾಗಿದ್ದು ಮೇಘಾ ಮಲ್ಲಿಗೆ ಹೂ ಮುಡಿದು ಮಿಂಚುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲೂ ಹೀಗೆ ಕಾಣಿಸಿಕೊಳ್ಳುವ ಕಾರಣ ನೆಟ್ಟಿಗರಿಗೆ ವಿಶೇಷ ಅನಿಸಲಿಲ್ಲ.
ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಮೇಘಾ ಸಖತ್ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಚಿತ್ರರಂಗದಲ್ಲಿ ಸದ್ಯಕ್ಕೆ ಬೇಡಿಕೆ ಇರುವ ನಟಿಯರಲ್ಲಿ ಮೇಘಾ ಕೂಡ ಒಬ್ಬರು..