ಭಾವಿ ಪತಿ ಜೊತೆ ಕಾವ್ಯಾ ಗೌಡ ಜಾಲಿ ಟ್ರಿಪ್; ಫೋಟೋಗಳಿವು!
ಕಿರುತೆರೆ ನಟಿ ಕಾವ್ಯಾ ಗೌಡ ಫ್ಯಾಮಿಲಿ ಜೊತೆ ಕಬಿನಿಗೆ ಟ್ರಿಪ್ ಹೋಗಿದ್ದರು. ವಿಶೇಷವೆಂದರೆ ಭಾವಿ ಪತಿ ಕೂಡ ಇವರ ಜೊತೆಗಿದ್ದರು.

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕಾವ್ಯಾ (Kavya Venkatesh) ಬಣ್ಣದ ಜರ್ನಿಯಿಂದ ಬ್ರೇಕ್ ತೆಗೆದುಕೊಂಡರೂ, ಸೋಷಿಯಲ್ ಮೀಡಿಯಾದಲ್ಲಿ ಸೂಪರ್ ಆ್ಯಕ್ಟಿವ್ ಆಗಿ ಮಿಂಚುತ್ತಿದ್ದಾರೆ.
ಇತ್ತೀಚಿಗೆ ತಮ್ಮ ಫ್ಯಾಮಿಲಿ ಜೊತೆ ಕಬಿನಿಗೆ (Kabini trip) ಟ್ರಿಪ್ ಹೋಗಿದ್ದಾರೆ. ಈ ವೇಳೆ ಭಾವಿ ಪತಿ ಸೋಮಶೇಖರ್ (Somashekar) ಕೂಡ ಕಾಣಿಸಿಕೊಂಡಿದ್ದಾರೆ. ಇದು ಪರ್ಫೆಕ್ಟ್ ಫ್ಯಾಮಿಲಿ ಟ್ರಿಪ್ (Perfect Family Trip) ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕಾವ್ಯ ಸಹೋದರಿ ಭವ್ಯಾ ಗೌಡ (Bhavya Gowda) ಅವರು ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ (Fashion Designer). ಅವರ ಮಗಳು (Adhya Mahesh) ಕೂಡ ಸೋಷಿಯಲ್ ಮೀಡಿಯಾ ಲಿಟಲ್ ಸ್ಟಾರ್. ಅವರು ಕೂಡ ಟ್ರಿಪ್‌ನಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.
ಸಹೋದರಿಯರಿಬ್ಬರೂ ಆಗಾಗ ವೈಲ್ಡ್ ಲೈಫ್ (Wild Life) ವೀಕ್ಷಣೆ ಮಾಡಲು ಟ್ರಿಪ್ ಹೋಗುತ್ತಿರುತ್ತಾರೆ. ಭಾವಿ ಪತಿ (Fiance) ಜೊತೆಗೂ ಕಾವ್ಯಾ ಫೋಟೋ ಹಂಚಿಕೊಂಡಿದ್ದಾರೆ.
ಮೇ 13ರಂದು ಕಾವ್ಯ ವೈವಾಹಿಕ ಜೀವನ (married life)ಕ್ಕೆ ಕಾಲಿಡಬೇಕಿತ್ತು. ಆದರೆ ಕೊರೋನಾ ಲಾಕ್‌ಡೌನ್ ರೂಲ್ಸ್ ಇದ್ದ ಕಾರಣ ತಮ್ಮ ಮದುವೆ ದಿನಾಂಕವನ್ನು ಮುಂದೂಡಿದ್ದಾರೆ.
ಬೆಂಗಳೂರಿನ ಐಷಾರಾಮಿ ಹೋಟೆಲ್ ಓಬೆರಾಯ್‌ನಲ್ಲಿ ಕಾವ್ಯಾ ಭಾವಿ ಪತಿಯೊಂದಿಗೆ ಲಂಚ್ ಡೇಟ್ ಹೋಗಿದ್ದರು. ಮುದ್ದು ಮಾ ಎಂದು ಬರೆದುಕೊಂಡು, ಆ ಫೋಟೋಗಳನ್ನು ಹಂಚಿಕೊಂಡಿದ್ದರು.
ಕಾವ್ಯಾ ಮತ್ತು ಸಹೋದರಿ ಭವ್ಯಾ ಇಬ್ಬರೂ ತುಂಬಾನೇ ಸ್ಟೈಲಿಷ್. ಅವರಿಬ್ಬರ ಫ್ಯಾಷನ್ ಡ್ರಸ್, ಬ್ಯಾಗ್ (Bag) ಹಾಗೂ ಆಭರಣಕ್ಕೆ ಫಾಲೋವರ್ಸ್ ಹೆಚ್ಚಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.