- Home
- Entertainment
- TV Talk
- ಪರ್ಸನಲ್ ಆಗಿ ಗೊತ್ತಿಲ್ಲ ಅಂದ್ರೆ ಕಾಮೆಂಟ್ ಮಾಡ್ಬೇಡಿ; ದುರಹಂಕಾರಿ ಎಂದ ನೆಟ್ಟಿಗನಿಗೆ ರಕ್ಷ್ ಉತ್ತರ
ಪರ್ಸನಲ್ ಆಗಿ ಗೊತ್ತಿಲ್ಲ ಅಂದ್ರೆ ಕಾಮೆಂಟ್ ಮಾಡ್ಬೇಡಿ; ದುರಹಂಕಾರಿ ಎಂದ ನೆಟ್ಟಿಗನಿಗೆ ರಕ್ಷ್ ಉತ್ತರ
ಪದೇ ಪದೇ ಆಟಿಟ್ಯೂಡ್ ಎಂದು ಕಾಮೆಂಟ್ ಮಾಡುವ ನೆಟ್ಟಿಗರಿಗೆ ಉತ್ತರ ಕೊಟ್ಟ 'ಗಟ್ಟಿಮೇಳ' ಖ್ಯಾತಿಯಾ ರಕ್ಷ್...

ಕನ್ನಡ ಕಿರುತೆರೆಯ ಜನಪ್ರಿಯ ನಟ ವೇದಾಂತ್ ಉರ್ಫ್ ರಕ್ಷ್ ಸದ್ಯ ಬರ್ಮ ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಈ ಹಿಂದೆ ರಕ್ಷ್‌ಗೆ ಸಿಕ್ಕಾಪಟ್ಟೆ ದುರಹಂಕಾರ ಎಂದು ಕಾಮೆಂಟ್ ಮಾಡುತ್ತಿದ್ದವರಿಗೆ ಹೀಗೆ ಉತ್ತರ ಕೊಟ್ಟಿದ್ದರು.
ಸೋಷಿಯಲ್ ಮೀಡಿಯಾವನ್ನು ಹೆಚ್ಚಾಗಿ ಬಳಸುವುದಿಲ್ಲ ಆದರೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ನಮ್ಮ ಜೀ ವಾಹಿನಿ ಪೇಜ್‌ನಲ್ಲಿ ಅವಾರ್ಡ್‌ಗಳ ಫೋಟೋ, ಧಾರಾವಾಹಿ ವಿಡಿಯೋ ಹಾಕಿದಾಗ ಜನರು ಕಾಮೆಂಟ್ ಮಾಡುವುದು ಬೇಸರ ಆಗುತ್ತಿತ್ತು.
2 ಸಾವಿರ ಕಾಮೆಂಟ್‌ನಲ್ಲಿ 1900 ಕಾಮೆಂಟ್ ಪಾಸಿಟಿವ್ ಆಂಡ್ ಸಪೋರ್ಟಿಂಗ್ ಆಗಿರುತ್ತದೆ ಆಗ ವಾಹಿನಿಯವರು ಹೇಳುತ್ತಾರೆ ದ್ವೇಷ ಸಿಟ್ಟು ಅಥವಾ ನೆಗೆಟಿವ್ ಮೆಸೇಜ್ ಕಡಿಮೆ ಬರುವುದು ನಿಮಗೆ ಎಂದು.
ಫ್ಯಾನ್ಸ್‌ಗಳು ಅಷ್ಟು ಪ್ರೀತಿ ಕೊಟ್ಟು ನನ್ನನ್ನು ಮೇಲೆ ಇಟ್ಟಿದ್ದಾರೆ. ರಕ್ಷ್‌ಗೆ ದುರಹಂಕಾರ ಅಂತ ಯಾರಾದರೂ ಹೇಳಿದರೆ ಮೊದಲು ವ್ಯಕ್ತಿಗಳನ್ನು ಮೊದಲು ಭೇಟಿ ಮಾಡಿ ಆನಂತರ ಜಡ್ಜ್ ಮಾಡಿ
ಈಗ ಒಬ್ಬ ವ್ಯಕ್ತಿಯನ್ನು ತಿಳಿದುಕೊಳ್ಳಬೇಕು ಅಂದ್ರೆ ಮೊದಲು ಅವರನ್ನು ಭೇಟಿ ಮಾಡಿ ಪರೋಕ್ಷವಾಗಿ ಭೇಟಿ ಮಾಡಿ ಮಾತನಾಡಿ ಆಗ ಸತ್ಯ ಗೊತ್ತಾಗುತ್ತದೆ' ಎಂದು ರಕ್ಷ್ ಮಾತನಾಡಿದ್ದಾರೆ.
ಇಂಡಸ್ಟ್ರಿಯಲ್ಲಿ ಸುಮ್ಮನೆ ಕಾಮೆಂಟ್ ಮಾಡುತ್ತಾರೆ ಆ ನಟ ಹೀಗೆ ಈ ನಟ ಹಾಗೆ ಎಂದು ನಿಜ ಹೇಳಬೇಕು ಅಂದ್ರೆ ಹಾಗೆ ಏನೂ ಇರುವುದಿಲ್ಲ. ಒಬ್ಬ ನೆಗೆಟಿವ್ ಬರೆದರೆ ಮೂರ್ನಾಲ್ಕು ಜನ ಪಾಸಿಟಿವ್ ಬರೆಯುತ್ತಾರೆ.
ಯಾರನ್ನು ಖುಷಿ ಪಡಿಸುವುದಕ್ಕೆ ನಾನು ಬದುಕುವುದಿಲ್ಲ ತುಂಬಾ ಕಷ್ಟ ಪಟ್ಟು ಕೆಲಸ ಮಾಡಬೇಕು ಅಂದುಕೊಂಡಿರುವೆ ಎಂದಿದ್ದಾರೆ ರಕ್ಷ್
ಫ್ಯಾಮಿಲಿ ಲೈಫ್ ಚೆನ್ನಾಗಿರ ಬೇಕು ಫ್ಯಾಮಿಲಿ ಚೆನ್ನಾಗಿ ನೋಡಿಕೊಳ್ಳಬೇಕು ಅಂದುಕೊಂಡಿರುವೆ ಮತ್ತೊಬ್ಬರಿಂದ ಒಳ್ಳೆ ವ್ಯಕ್ತಿ ಅನಿಸಿಕೊಳ್ಳಬೇಕು ಅನ್ನೋ ತೆವಲು ನನಗಿಲ್ಲ.
ಎಷ್ಟು ಜನರನ್ನು ಮೆಚ್ಚಿಸಲು ಸಾಧ್ಯ? ಪರ್ಸನಲ್ ಆಗಿ ಗೊತ್ತಿಲ್ಲ ಅಂದ್ರೆ ಕಾಮೆಂಟ್ ಮಾಡಬೇಡಿ' ಎಂದು ರಕ್ಷ್ ಹೇಳಿದ್ದಾರೆ. ಬರ್ಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.