ಮಗಳು ಆಯ್ತು ಈಗ ಅಮ್ಮನ ಸರದಿ; ಕೂದಲು ಕಲರ್ ಮಾಡಿಸಿದ ಮಾಸ್ಟರ್ ಆನಂದ್ ಪತ್ನಿ!
ಕೂದಲು ಬಣ್ಣ ಬದಲಾಯಿಸಿದ ಮಾಸ್ಟರ್ ಅನಂದ್ ಪತ್ನಿ. ನೆಟ್ಟಿಗರಿಗೆ ಯಾಕೆ ಇಷ್ಟೋಂದು ಕ್ಯೂರಿಯಾಸಿಟಿ.....
16

ಕನ್ನಡ ಚಿತ್ರರಂಗದ ಅದ್ಭುತ ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಅವರ ಫ್ಯಾಮಿಲಿ ಸದಾ ಸುದ್ದಿಯಲ್ಲಿ ಇರುತ್ತಾರೆ, ಇದಕ್ಕೆ ಕಾರಣವೇ ಸೋಷಿಯಲ್ ಮೀಡಿಯಾ.
26
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಆನಂದ್ ಪತ್ನಿ ಯಶಸ್ವಿನಿ ಮತ್ತು ಪುತ್ರಿ ವಂಶಿಕಾ ಕಿರುತೆರೆ ವೀಕ್ಷಕರಿಗೆ ಪರಿಚಯವಾಗಿ ಹತ್ತಿರವಾಗಿಬಿಟ್ಟರು.
36
ಯಾವ ಕಾರ್ಯಕ್ರಮ ನೋಡಿದರೂ ವಂಶಿಕಾ ಮತ್ತು ಯಶಸ್ವಿನಿ ಇರಲೇ ಬೇಕಿತ್ತು. ಈ ಜನಪ್ರಿಯ ಅಮ್ಮ ಮಗಳಿಗೆ ಖಾಸಗಿ ಆನ್‌ಲೈನ್ ಜಾಹೀರಾತುಗಳ ಆಫರ್ ಕೂಡ ಬರುತ್ತದೆ.
46
ಕೆಲವು ದಿನಗಳ ಹಿಂದೆ ವಂಶಿಕಾ ಕೂದಲು ಕಟ್ ಮಾಡಿಸಿ ಹೇರ್ ಕಲರ್ ಮಾಡಿಸಿದ್ದಳು, ಈಗ ಯಶಸ್ವಿನಿ ಕೂಡ ಅದೇ ಮಾಡಿಕೊಂಡಿದ್ದಾರೆ.
56
ಡಿಫರೆಂಟ್ ಹೇರ್ ಸ್ಟೈಲ್ ಮಾಡಿಸಿಕೊಂಡ ಯಶಸ್ವಿನಿ ಗೋಲ್ಡನ್ ಶೇಡ್‌ನಲ್ಲಿ ಹೇರ್ ಕಲರ್ ಮಾಡಿಸಿದ್ದಾರೆ. ಇದರ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.
66
ಮಗಳ ಸರದಿ ಆಯ್ತು ಈಗ ಅಮ್ಮನ ಸರದಿ. ಸಮಾಜಕ್ಕೆ ಯಾವ ಸಂದೇಶ ಸಾರುವ ಕೆಲಸ ಮಾಡುತ್ತಿದ್ದೀರಾ? ಮತ್ತೊಬ್ಬರ ಮನೆ ಮಕ್ಕಳ ಕಥೆ ಏನಾಗಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
Latest Videos