ಕಿರುತೆರೆ ನಟ ಚಂದು ಗೌಡ ಪತ್ನಿ ಅದ್ಧೂರಿ ಸೀಮಂತ; ಫೋಟೋ ವೈರಲ್!
ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ನಟ ಚಂದು ಗೌಡ ಮತ್ತು ಶಾಲಿನಿ. ಸಾಮಾಜಿಕ ಜಾಲತಾಣದಲ್ಲಿ ಸೀಮಂತ ಫೋಟೋ ವೈರಲ್...
ಲಕ್ಷ್ಮಿ ಬಾರಮ್ಮ ಸೇರಿದಂತೆ ಅನೇಕ ಧಾರಾವಾಹಿಯಲ್ಲಿ ಅಭಿನಯಿಸಿರುವ ನಟ ಚಂದು ಗೌಡ ಮತ್ತು ಪತ್ನಿ ಶಾಲಿನಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
2020ರಲ್ಲಿ ಶಾಲಿನಿ ಮತ್ತು ಚಂದು ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಬಹಳ ವಿಜೃಂಭಣೆಯಿಂದ ನಡೆಯಿತ್ತು.
ಶಾಲಿನಿ ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಅವರಲ್ಲಿ ನಟ ಶೈನ್ ಶೆಟ್ಟಿ ಮತ್ತು ನಿರ್ದೇಶಕಿ ಸ್ವಪ್ನಾ ಕೃಷ್ಣ ಕೂಡ ಇದ್ದರು.
ಚಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸೀಮಂತ ಫೋಟೋ ಹಂಚಿಕೊಂಡಿದ್ದಾರೆ. ಟ್ರೆಡಿಷನಲ್ ಲುಕ್‌ನಲ್ಲಿ ಚಂದು ಮಿಂಚಿದ್ದರೆ, ಹಸಿರು ಕೆಂಪು ಕಾಂಬಿನೇಷನ್ ಸೀರೆಯಲ್ಲಿ ಶಾಲಿನಿ ಕಂಗೊಳ್ಳಿಸಿದ್ದಾರೆ.
ಸುಮಾರು ನಾಲ್ಕು ವರ್ಷಗಳ ಕಾಲ ಚಂದು ಮತ್ತು ಶಾಲಿನಿ ಪ್ರೀತಿ ಮದುವೆಯಾದರು. ಇಬ್ಬರು ತಮ್ಮ ಲವ್ ಸ್ಟೋರಿ ಹಂಚಿಕೊಂಡಿದ್ದರು.
ಲಕ್ಷ್ಮಿ ಬಾರಮ್ಮ ಧಾರಾವಾಹಿ ನಂತರ ಚಂದು ಚಾಕ್ ಕಾರ್ನರ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು ಆನಂತರ ತೆಲುಗು ಕಿರುತೆರೆಗೆ ಕಾಲಿಟ್ಟು ತ್ರಿನಯನಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಶ್ರೀನಗರ ಕಿಟ್ಟಿ ಜೊತೆ ಸಿನಿಮಾ ಮಾಡುತ್ತಿದ್ದಾರೆ.