ನಯಾಗರ ಫಾಲ್ಸ್ ಮುಂದೆ ಗಂಡನ ತುಟಿಗೆ ತುಟಿಯೊತ್ತಿ ಪೋಸ್ ಕೊಟ್ಟ ಕಮಲಿ ನಟಿ
ಹಿಂದೆ ಧುಮ್ಮಿಕ್ಕಿ ಹರಿಯುವ ನಯಾಗರ ಫಾಲ್ಸ್ ಎದುರು ನಿಂತುಕೊಂಡು ತನ್ನ ಗಂಡ ತುಟಿ ಕಿಸ್ ಮಾಡ್ತಾ ರೋಮ್ಯಾಂಟಿಕ್ ಆಗಿ ಕಿಸ್ ಕೊಡ್ತಿರೋ ಈ ನಟಿ ಯಾರು ಗೊತ್ತಾ?

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕಮಲಿ ಸೀರಿಯಲ್ (Kamali serial)ಮುಗಿದು ಎಷ್ಟೊ ಸಮಯ ಆಗಿದೆ. ಪ್ರತಿಯೊಬ್ಬ ನಟ-ನಟಿಯರು ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ರೆ, ಕಮಲಿ ಸೀರಿಯಲ್ ನ ನಟಿಯೊಬ್ಬರು ತಮ್ಮ ಗಂಡನ ಜೊತೆ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರೆ.
ಕಮಲಿ ಸೀರಿಯಲ್ ಪ್ರೇಮಿಗಳು ನೀವಾಗಿದ್ರೆ, ಈ ಧಾರಾವಾಹಿಯಲ್ಲಿ ಕಮಲಿಯ ಬೆಸ್ಟ್ ಫ್ರೆಂಡ್ ಆಗಿ ನಟಿಸಿದ ನಿಂಗಿ ನೆನಪಿರಬೇಕು ಅಲ್ವಾ? ಕಮಲಿಯ ಬಾಲ್ಯ ಸ್ನೇಹಿತೆ ನಿಂಗಿ, ಗೆಳೆತಿಯ ಎಲ್ಲಾ ಕಷ್ಟದಲ್ಲೂ ಆಕೆಯ ಜೊತೆಯಾಗಿ ನಿಂತ ಗೆಳತಿ.ಇವರ ಹೆಸರು ಅಂಕಿತಾ (Ankeita).
ಅಂಕಿತಾ ವೈವಾಹಿಕ ಜೀವನಕ್ಕೆ ಎರಡು ವರ್ಷಗಳ ಹಿಂದೆ ಕಾಲಿಟ್ಟಿದ್ರು, ಸದ್ಯಕ್ಕಂತೂ ಗಂಡನ ಜೊತೆ ಎಂಜಾಯ್ ಮಾಡ್ತಿದ್ದಾರೆ. ಸೀರಿಯಲ್ ಮುಗಿದ ಬಳಿಕ ತಮ್ಮ ಪರ್ಸನಲ್ ಜೀವನದಲ್ಲೆ ಬ್ಯುಸಿಯಾಗಿದ್ದ ಅಂಕಿತಾ, ಇತ್ತೀಚೆಗಷ್ಟೇ ತಮ್ಮ ಗಂಡನ ಜೊತೆ ಕೆನಡಾದಲ್ಲಿ ನೆಲೆಯಾಗಿದ್ದಾರೆ.
ಸದ್ಯ ಕೆನಡಾ ಲೈಫ್ ಎಂಜಾಯ್ ಮಾಡ್ತಾ ವಿದಿಧ ಪ್ರವಾಸಿ ತಾಣಗಳನ್ನು ನೋಡುತ್ತಾ ಎಂಜಾಯ್ ಮಾಡ್ತಿರೋ ಅಂಕಿತಾ ಇತ್ತೀಚೆಗೆ ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ನಯಾಗರ ಫಾಲ್ಸ್ ಗೆ ತೆರಳಿದ್ದು ಅಲ್ಲಿನ ಸುಂದರ ಫೋಟೋಗಳನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಹುಟ್ಟು ಹಬ್ಬದ (birthday) ಹಿನ್ನೆಲೆಯಲ್ಲಿ ಗಂಡನ ಜೊತೆ ಪ್ರವಾಸ ಮಾಡಿರೋ ಅಂಕಿತಾ.. ಇದು ಬೆಸ್ಟ್ ಬರ್ತ್ ಡೇ. ಥ್ಯಾಂಕ್ಯೂ ಸೋ ಮಚ್ ಲವ್. ನನಗೆ ಸಂತೋಷವಾಗಿರಿಸಲು, ಸ್ಪೆಷಲ್ ಆಗಿಸಲು ನೀವು ಮಾಡುವ ಪ್ರತಿಯೊಂದು ಸಣ್ಣ ಸಣ್ಣ ಪ್ರಯತ್ನವೂ ತುಂಬಾನೆ ಖುಷಿ ಕೊಡುತ್ತಿದೆ. ಐ ಲವ್ ಯೂ. ಬಕೆಟ್ ಲಿಸ್ಟ್ ನ ಒಂದು ಆಸೆ ಪೂರೈಸಿತು, ನಯಾಗರ ಯೂ ಆರ್ ಅಮೇಜಿಂಗ್ ಎಂದು ಬರೆದುಕೊಂಡಿದ್ದಾರೆ.
ನಯಾಗರ ಜಲಪಾತದ (Niagara Falls) ಸುಂದರ ಫೋಟೋಗಳ ಜೊತೆಗೆ ಗಂಡನ ಜೊತೆಗಿನ ಒಂದಷ್ಟು ರೊಮ್ಯಾಂಟಿಕ್ ಫೋಟೋಗಳನ್ನು ಸಹ ಹಂಚಿಕೊಂಡಿರುವ ನಟಿ, ಧುಮ್ಮಿಕ್ಕಿ ಹರಿಯುವ ನಯಾಗರ ಫಾಲ್ಸ್ ಎದುರು ಗಂಡನ ತುಟಿಗೆ ತುಟಿ ಒತ್ತಿ ಸಹ ಪೋಸ್ ನೀಡಿದ್ದಾರೆ.
ನಿಂಗಿಯಾಗಿ ಅಪಾರ ಅಭಿಮಾನಿಗಳನ್ನು ಗಳಿಸಿರೋ ಅಂಕಿತಾ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಅಂಕಿತಾ, ಹೆಚ್ಚಾಗಿ ತಮ್ಮ ಫೋಟೋ, ಹಾಡುಗಳ ವಿಡಿಯೋ, ವಿವಿಧ ರೀಲ್ಸ್ ಮತ್ತು ಗಾದೆ ಮಾತುಗಳನ್ನು ವಿವರಣೆ ಸಮೇತ ನೀಡುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.