ಹರೀಶ್ ರಾಜ್’ಗೆ ವಯಸ್ಸೇ ಆಗಲ್ವಾ?... 25 ವರ್ಷಗಳ ಹಿಂದೆ ಹೇಗಿದ್ರೋ ಈವಾಗ್ಲೂ ಹಾಗೆ ಇದ್ದಾರೆ!
ಕಳೆದ 27 ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆ ನಟನಾಗಿ ಗುರುತಿಸಿಕೊಂಡಿರುವ ನಟ ಹರೀಶ್ ರಾಜ್ 25 ವರ್ಷಗಳ ಹಿಂದೆ ಹೇಗಿದ್ರೋ? ಈವಾಗ್ಲೂ ಹಾಗೇ ಇದ್ದಾರಲ್ವಾ? ಹೇಗೆ?
ಕನ್ನಡ ಚಿತ್ರರಂಗದಲ್ಲಿ (Kannada Film Industry) ಹಾಗೂ ಕಿರುತೆರೆಯಲ್ಲಿ ತಮ್ಮ ನಟನಾ ಕೌಶಲ್ಯದಿಂದಲೇ ಜನಮನ ಗೆದ್ದ ನಟ ಕಲಾಕಾರ್ ಹರೀಶ್ ರಾಜ್. ಇವರು ತಮ್ಮ ನಟನಾ ಕರಿಯರ್ ಆರಂಭಿಸಿ ಬರೋಬ್ಬರಿ 25 ವರ್ಷಕ್ಕೂ ಆಧಿಕವಾಗಿದೆ ಅಂದ್ರೆ ನಂಬಲೇ ಬೇಕು. ಆದ್ರೆ ನಟ 25 ವರ್ಷಗಳ ಹಿಂದೆ ಹೇಗಿದ್ರೋ ಇವತ್ತು ಹಾಗೆಯೇ ಇದ್ದಾರೆ.
ಹೌದು, ಹರೀಶ್ ರಾಜ್ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ 27 ವರ್ಷಗಳು ಸಂಧಿವೆ. 25 ವರ್ಷಗಳಲ್ಲಿ 60ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಹರೀಶ್ ರಾಜ್ ಗೆ, ಪ್ರತಿಭಾವಂತ ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡಿದ ಹೆಮ್ಮೆ ಅವರಿಗೆ ಇದೆ.
ರಾಜೇಂದ್ರ ಸಿಂಗ್ ಬಾಬು (Rajendra Singh Babuನಿರ್ದೇಶನದ ‘ದೋಣಿ ಸಾಗಲಿ’ ಚಿತ್ರದ ಮೂಲಕ 1997ರಲ್ಲಿ ಹರೀಶ್ ರಾಜ್ ತಮ್ಮ ಸಿನಿಮಾ ಕರಿಯರ್ ಆರಂಭಿಸಿದರು. ಅದೇ ವರ್ಷ ಗಿರೀಶ್ ಕಾಸರವಳ್ಳಿಯವರ ‘ತಾಯಿ ಸಾಹೇಬ’ ಚಿತ್ರದಲ್ಲಿ ನಟಿಸಿದರು. ಆ ಸಿನಿಮಾದಲ್ಲಿ ನಟಿ ಜಯಮಾಲ (Jayamala)ಪುತ್ರನ ಪಾತ್ರದಲ್ಲಿ ಇವರು ನಟಿಸಿದ್ದರು.
ಗಿರೀಶ್ ಕಾಸರವಳ್ಳಿಯವರ (Girish Kasaravalli) ದ್ವೀಪ ಸಿನಿಮಾದಲ್ಲಿ ಹರೀಶ್ ರಾಜ್ ನಟಿಸಿದ್ದರು. ಈ ಸಿನಿಮಾದಲ್ಲಿನ ಹರೀಶ್ ರಾಜ್ ನಟನೆಗಾಗಿ ಅವರು ರಾಷ್ಟ್ರಪ್ರಶಸ್ತಿ ರೇಸ್ ನಲ್ಲೂ ಇದ್ದರಂತೆ. ಇನ್ನು ಕೂರ್ಮಾವತಾರ, ತಾಯಿ ಸಾಹೇಬ, ಕಾನೂರು ಹೆಗ್ಗಡತಿ ಹರೀಶ್ ರಾಜ್ ನಟಿಸಿದ ಪ್ರಮುಖ ಚಿತ್ರಗಳು.
ಹರೀಶ್ ರಾಜ್ (Harish Raj) ಶ್ರೀ ಸತ್ಯನಾರಾಯಣ ಎನ್ನುವ ಸಿನಿಮಾದಲ್ಲಿ 16 ಪಾತ್ರಗಳಲ್ಲಿ ನಟನೆ ಮಾಡುವ ಮೂಲಕ ಲಿಮ್ಕಾ ದಾಖಲೆ ಕೂಡ ಮಾಡಿದ್ದರು. ಕಲಾಕಾರ್ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದ ಹರೀಶ್ ರಾಜ್, ಬಳಿಕ ಗನ್, ಶ್ರೀ ಸತ್ಯನಾರಾಯಣ, ಕಿಲಾಡಿ ಪೊಲೀಸ್, ಪ್ರೇತಾ, ವೆಂಕಟೇಶಾಯ ನಮಃ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಒಂದು ಇಂಗ್ಲಿಷ್ ಸಿನಿಮಾ ಸೇರಿ, ಹಲವು ತಮಿಳು ಹಾಗೂ ಮಲಯಾಲಂ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಹರೀಶ್ ರಾಜ್. ಅಷ್ಟೇ ಅಲ್ಲ ಇವರು ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸುವ ಮೂಲಕ ಟಫ್ ಸ್ಪರ್ಧಿಯಾಗಿ ಸಹ ಕಾಣಿಸಿಕೊಂಡಿದ್ದಾರೆ.
ಇನ್ನು ಮನೆಯೊಂದು ಮೂರು ಬಾಗಿಲು ಸೀರಿಯಲ್ ಮೂಲಕ ಕನ್ನಡ ಕಿರುತೆರೆ (kannada serial) ಪ್ರವೇಶಿಸಿದ ಹರೀಶ್ ರಾಜ್ ಸ್ವಾತಿ ಮುತ್ತು, ಕಾವ್ಯಾಂಜಲಿ, ದಂಡ ಪಿಂಡಗಳು, ಕೊನೆಯದಾಗಿ ಜೊತೆ ಜೊತೆಯಲಿ ಸೇರಿ ಹಲವಾರು ಕನ್ನಡ ಸೀರಿಯಲ್ ಗಳಲ್ಲಿ ಹಾಗೂ ಮಾಲ್ಗುಡಿ ಡೇಸ್ ಸೇರಿ 7 ಹಿಂದಿ ಸೀರಿಯಲ್ ಗಳಲ್ಲೂ ಹರೀಶ್ ನಟಿಸಿದ್ದಾರೆ.
ಇದೀಗ ಹರೀಶ್ ರಾಜ್ ನಿರ್ದೇಶನ ಮಾಡಿ ನಟಿಸಲಿರುವ ವೆಂಕಟೇಶಾಯ ನಮಃ (Venkateshaya Namaha) ಸಿನಿಮಾ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದೆ, ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದನ್ನ ನೋಡಿದ ಅಭಿಮಾನಿಗಳು ಹರೀಶ್ ರಾಜ್ ನಾವು ಸ್ಕೂಲ್ ಗೆ ಹೋಗಬೇಕಾದ್ರೂ ಹೀಗೆ ಇದ್ರು, ಈವಾಗ ನಾವು ಕೆಲಸಕ್ಕೆ ಹೀಗುವಾಗಲೂ ಹಾಗೇ ಇದ್ದಾರೆ, ಇವರಿಗೆ ವಯಸ್ಸೇ ಆಗಲ್ವಾ? ಎಂದು ಪ್ರಶ್ನಿಸಿದ್ದಾರೆ.