- Home
- Entertainment
- TV Talk
- ಆ ವ್ಯಕ್ತಿ ನನಗೆ ಸೀರಿಯಲ್ ಇಂಡಸ್ಟ್ರಿಯಲ್ಲಿ ತುಂಬ ಕಷ್ಟ ಕೊಟ್ಟರು: ಸತ್ಯ ಹೇಳಿದ Radha Ramana ನಟಿ ಆಶಿತಾ ಚಂದ್ರಪ್ಪ
ಆ ವ್ಯಕ್ತಿ ನನಗೆ ಸೀರಿಯಲ್ ಇಂಡಸ್ಟ್ರಿಯಲ್ಲಿ ತುಂಬ ಕಷ್ಟ ಕೊಟ್ಟರು: ಸತ್ಯ ಹೇಳಿದ Radha Ramana ನಟಿ ಆಶಿತಾ ಚಂದ್ರಪ್ಪ
Actress Ashita Chandrappa News: ಜೊತೆ ಜೊತೆಯಲಿ, ನೀಲಿ, ಸುಂದರಿ, ರಾಧಾ ರಮಣ ಧಾರಾವಾಹಿ ನಟಿ ಆಶಿತಾ ಚಂದ್ರಪ್ಪ ಅವರು ಈಗ ನಟನೆಯಿಂದ ದೂರ ಇದ್ದಾರೆ. ಇವರು ಈ ನಿರ್ಧಾರ ತಗೊಳ್ಳಲು ಕಾರಣ ಏನು? ಆ ವ್ಯಕ್ತಿ ಯಾರು?

ನಟನೆಯಿಂದ ದೂರ ಇದ್ದಾರೆ
ಸದ್ಯ ಚಿಕ್ಕಮಗಳೂರಿನ ರೋಶನ್ ಎನ್ನುವವರನ್ನು ಮದುವೆಯಾಗಿ, ತಾಯಿಯಾಗಿರುವ ಆಶಿತಾ ಚಂದ್ರಪ್ಪ ಅವರು ನಟನೆಯಿಂದ ದೂರ ಇದ್ದಾರೆ. ಪ್ರತಿಧ್ವನಿ ಎನ್ನುವ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಯಾಕೆ ಐದು ವರ್ಷಗಳಿಂದ ನಟನೆಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿ ಕಾಂಟ್ರವರ್ಸಿ
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕಾಂಟ್ರವರ್ಸಿ ಆಯ್ತು. ಆ ಟೀಂನಲ್ಲಿದ್ದವರು ಒಳ್ಳೆಯವರು. ನಾನು ಆ ಪಾತ್ರಕ್ಕೆ ಎಷ್ಟೇ ಪರಿಶ್ರಮ ಹಾಕಿದರೂ ಕೂಡ, ಅವರಿಗೆ ತೃಪ್ತಿ ಇರಲಿಲ್ಲ. ನಾನು ದುರಹಂಕಾರಿ ಎಂದು ಹಿಂದೆ ಮಾತಾಡೋಕೆ ಶುರು ಮಾಡಿದ್ರು. ನಾನು ಬೇರೆ ಕಲಾವದರ ಥರ ಯಾವುದೇ ಡಿಮ್ಯಾಂಡ್ ಕೂಡ ಮಾಡಿರಲಿಲ್ಲ.
ಆ ನಿರ್ದೇಶಕ ಬೆದರಿಕೆ ಹಾಕಿದ್ರು
ಮದುವೆ ದೃಶ್ಯ ನಡೆಯುತ್ತಿತ್ತು. ನಾವು ಯಾವಾಗ ಶೂಟ್ ಮಾಡಬಹುದು? ಶೂಟ್ ಮಾಡೋಕೆ ಆಗೋದಿಲ್ಲ ಎಂದು ಹೇಳಿರುತ್ತೇವೆ. ಆದರೆ ನನ್ನ ತೆಗೆಯಬೇಕು ಎಂದು ಮೊದಲೇ ಡಿಸೈಡ್ ಆಗಿದ್ದರು. ಹೊಸ ಡೈರೆಕ್ಟರ್ ಬಂದು, ನಾಳೆ ಶೂಟ್ ಇದೆ ಎಂದರು. ಆದರೆ ನಾನು ಮೊದಲೇ ತಿಳಿಸಿದಂತೆ ಶಿರಡಿಗೆ ಹೋಗಬೇಕು ಎಂದುಕೊಂಡಿದ್ದೆ. ಹೊಸ ಡೈರೆಕ್ಟರ್ ಜೋರಾಗಿ ಮಾತನಾಡುತ್ತಿದ್ದರು, ಅವರಿಂದಲೇ ಸಮಸ್ಯೆ ಆಯ್ತು. ನಿನ್ನ ರಿಪ್ಲೇಸ್ ಮಾಡ್ತೀವಿ ಎಂದು ಬೆದರಿಕೆ ಹಾಕಿದರು.
ವಾಹಿನಿಯೇ ನನ್ನನ್ನು ಆಯ್ಕೆ ಮಾಡಿಕೊಂಡರು
ನಾನು ದುರಹಂಕಾರಿ ಎಂದು ಹಿಂದೆ ಹೇಳಿ, ಕಪ್ಪುಚುಕ್ಕೆ ಇಟ್ಟಿದ್ದರು. ಆದರೆ ವಾಹಿನಿಯೇ ನನ್ನನ್ನು ಆಯ್ಕೆ ಮಾಡಿಕೊಂಡರು ಎಂಬ ಬೇಸರ ಇತ್ತು. ನನ್ನ ಪಾತ್ರವನ್ನು ಆಮೇಲೆ ಸಾಯಿಸಿದ್ದರು. ಆ ಕಥೆ ಇನ್ನೂ 3-4 ವರ್ಷ ನಡೆಯುವಂಥ ಕ್ಯಾಪಸಿಟಿ ಇತ್ತು. ಅದೇ ಟೀಂ ಹೊಸ ಸೀರಿಯಲ್ ಮಾಡುವಾಗ, ನನಗೆ ಆಫರ್ ಕೊಟ್ಟಿದ್ದರು. ಪ್ರೊಡಕ್ಷನ್ ಟೀಂ ಮಾತ್ರ ನನಗೆ ಬೆಂಬಲ ಕೊಟ್ಟಿತ್ತು.
ನೀಲಿ ಧಾರಾವಾಹಿಯಲ್ಲಿ ನನ್ನ ಪಾತ್ರ ರಿಪ್ಲೇಸ್ ಮಾಡಿದ್ರು
ಉದಯ ವಾಹಿನಿಯಲ್ಲಿ ಸುಂದರಿ ಧಾರಾವಾಹಿಗೆ ಮತ್ತೆ ನನ್ನ ಆಯ್ಕೆ ಮಾಡಿಕೊಂಡಿದ್ದರು. ಅದು ಜೊತೆ ಜೊತೆಯಲಿ ಸೀರಿಯಲ್ ಟೀಂ ಅವರ ಪ್ರಾಜೆಕ್ಟ್ ಆಗಿತ್ತು. ಇದಾದ ಬಳಿಕ ನೀಲಿ ಧಾರಾವಾಹಿಯಲ್ಲಿ ನಟಿಸಿದೆ. ನಾನು ಎಲ್ಲ ಹಣವನ್ನು ನೀಲಿ ಧಾರಾವಾಹಿ ಕಾಸ್ಟ್ಯೂಮ್‌ಗೆ ಹಾಕಿದ್ದೆ. ಅಲ್ಲಿಯೂ ಅದೇ ಸಮಸ್ಯೆ ಆಗಿತ್ತು. ನೀಲಿ ಧಾರಾವಾಹಿಯಲ್ಲಿ ನನ್ನ ಪಾತ್ರವನ್ನು ರಿಪ್ಲೇಸ್ ಮಾಡಿದರು.
ನೀಲಿ ಧಾರಾವಾಹಿಯಲ್ಲಿ ಮ್ಯಾನೇಜರ್ ಅವರಿಂದ ಸಮಸ್ಯೆ ಆಗುತ್ತಿತ್ತು. ಮ್ಯಾನೇಜರ್ ಅವರೇ ನಿರ್ಮಾಪಕರಾಗಿದ್ದರು. ವಾಹಿನಿಯಿಂದಲೂ ನನಗೆ ಸಮಸ್ಯೆ ಆಗಿರಲಿಲ್ಲ.
ಕಾಸ್ಟಿಂಗ್ ಕೌಚ್ ಇದೆ
ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ. ನನ್ನನ್ನು ಆ ರೀತಿ ಅಪ್ರೋಚ್ ಮಾಡಿದಾಗ, ನಾನು ಆಗಲ್ಲ ಎಂದು ನೇರವಾಗಿ ಹೇಳಿದ್ದೆ. ನಾನು ದುರಹಂಕಾರಿ ಆಗಿದ್ದಿದ್ದರೆ ನನಗೆ ರಾಧಾ ರಮಣ ಧಾರಾವಾಹಿ, ಬಿಗ್ ಬಾಸ್ ಆಫರ್ ಕೂಡ ಸಿಗುತ್ತಿರಲಿಲ್ಲ. ನನಗೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ಮಾಡೋದು ಕಷ್ಟ ಆಗಿತ್ತು.
ಒಳ್ಳೆಯ ಪಾತ್ರ ಸಿಕ್ಕರೆ ನಟಿಸುವೆ
ನನಗೆ ಯಾವುದೇ ವಾಹಿನಿಯವರು ಬ್ಯಾನ್ ಮಾಡಿಲ್ಲ, ಆದರೆ ನೀಲಿ ಧಾರಾವಾಹಿ ಮ್ಯಾನೇಜರ್ ಭಾಸ್ಕರ್ ಅವರು ನನ್ನ ಬಗ್ಗೆ ಬ್ಲೇಮ್ ಮಾಡಿದ್ದರು. ಇದಕ್ಕೆ ನನಗೆ ಬೇಸರ ಇದೆ. ನನ್ನ ಲೈಫ್‌ನಲ್ಲಿ ಬ್ಯುಸಿ ಇದ್ದಿದ್ದಕ್ಕೆ ಐದು ವರ್ಷಗಳಿಂದ ನಟಿಸಿಲ್ಲ.
ಮುಂದೆ ಆಶಿತಾ ಚಂದ್ರಪ್ಪ ಅವರು ಒಳ್ಳೆಯ ಪಾತ್ರ ಸಿಕ್ಕರೆ, ಮತ್ತೆ ಧಾರಾವಾಹಿಯಲ್ಲಿ ನಟಿಸುವುದಾಗಿ ಹೇಳಿದ್ದಾರೆ. ನಾನು ಮದುವೆಯಾಗಿ ಐದು ವರ್ಷ ಆಗಿದೆ, ಎರಡು ವರ್ಷ ಕೊರೊನಾ ಇತ್ತು, ಆಮೇಲೆ ಪ್ರಗ್ನೆಂಟ್ ಆದೆ, ಮಗಳು ಹುಟ್ಟಿದಳು. ಹೀಗಾಗಿ ಕುಟುಂಬದಲ್ಲೇ ಬ್ಯುಸಿ ಆದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

