ಕೆಂಡಸಂಪಿಗೆ ಧಾರಾವಾಹಿಗೆ ಬಂಡವಾಳ ಹಾಕುತ್ತಿದ್ದಾರೆ 'ಜೊತೆ ಜೊತೆಯಲಿ' ಮೇಘಾ ಶೆಟ್ಟಿ!
ಮಹಿಳಾ ಪ್ರಧಾನ ಧಾರಾವಾಹಿ ನಿರ್ಮಾಣ ಮಾಡಲು ಮುಂದಾದ ಅನು ಸಿರಿಮನೆ ಉರ್ಫ್ ಮೇಘಾ ಶೆಟ್ಟಿ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಮೇಘಾ.
ಇದೀಗ ಕಿರುತೆರೆಯಲ್ಲಿ ಶುರುವಾಗುತ್ತಿರುವ ಕೆಂಡಸಂಪಿಗೆ (Kendasampige) ಧಾರಾವಾಹಿಗೆ ಮೇಘಾ ಶೆಟ್ಟಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಮಿಡಲ್ ಕ್ಲಾಸ್ ಹುಡುಗಿ ಸುಮನಾ ತನ್ನ ಸಹೋದರಿಯರು ಅಥವಾ ಸಹೋದರರು ಚೆನ್ನಾಗಿರಬೇಕು ಅಂದು ತನ್ನ ಇಡೀ ಜೀವನವನ್ನು ಸ್ಯಾಕ್ರಿಫೈಸ್ ಮಾಡಿರುತ್ತಾಳೆ.
ಮೇಘಾ ಶೆಟ್ಟಿ ಇದೇ ಮೊದಲ ಬಾರಿ ನಿರ್ಮಾಣ ಮಾಡುತ್ತಿರುವುದು. ಇಷ್ಟು ದಿನ ನಾಯಕಿಯಾಗಿರುವ ಮೇಘಾ, ನಿರ್ಮಾಪಕಿಯಾಗಿ ಹೇಗಿರಲಿದ್ದಾರೆ ಎಂದು ಅಭಿಮಾನಿಗಳು ಕ್ಯೂರಿಯಾಸಿಟಿಯಲ್ಲಿದ್ದಾರೆ.
ಧಾರಾವಾಹಿ ಮಾತ್ರವಲ್ಲದೆ ಆಲ್ಬಂ ಸಾಂಗ್ ಕೂಡಾ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಇದೀಗ ರಿಯಲ್ ರಾಜನಂದಿನಿ ಸ್ಟೋರಿಯನ್ನು ತಿಳಿದುಕೊಳ್ಳುತ್ತಿದ್ದಾರೆ. ಆರ್ಯವರ್ಧನ್ ಸತ್ಯವನ್ನು ರಿವೀಲ್ ಮಾಡುತ್ತಿದ್ದಾರೆ. ಕಥೆ ದಿನೇ ದಿನೇ ವಿಭಿನ್ನವಾಗಿರುವ ತಿರುವು ಪಡೆದುಕೊಳ್ಳುತ್ತಿದೆ.