- Home
- Entertainment
- TV Talk
- ಡಿವೋರ್ಸ್ ಆದ 10 ದಿನಕ್ಕೆ ಹೊಸ ಮನೆ, ದುಬಾರಿ ಕಾರ್ ಖರೀದಿಸಿದ ಸೀರಿಯಲ್ ನಟಿ; ಮಾಜಿ ಗಂಡನ ಎಂಟ್ರಿ
ಡಿವೋರ್ಸ್ ಆದ 10 ದಿನಕ್ಕೆ ಹೊಸ ಮನೆ, ದುಬಾರಿ ಕಾರ್ ಖರೀದಿಸಿದ ಸೀರಿಯಲ್ ನಟಿ; ಮಾಜಿ ಗಂಡನ ಎಂಟ್ರಿ
jay bhanushali ex wife Mahhi: ಕಿರುತೆರೆ ನಟಿ ಮಾಹಿ ವಿಜ್ ಇತ್ತೀಚೆಗೆ ಪತಿ ಜಯ್ ಭಾನ್ಶುಲಿ ಅವರಿಂದ ಡಿವೋರ್ಸ್ ತಗೊಂಡಿರೋದಾಗಿ ಹೇಳಿದ್ದರು. ಈಗ ಅವರು ಮನೆ, ಕಾರ್ ಕೂಡ ಖರೀಸಿದ್ದಾರೆ. ಮಾಹಿ ಅವರು ಕೆಲ ಸಮಯದಿಂದ ತೆರೆ ಮೇಲೆ ಕಾಣಿಸಿಕೊಳ್ಳುತ್ತಿಲ್ಲ.

ಮಿನಿ ಕೂಪರ್
ಮಾಹಿ ಅವರು ಹೊಸದೊಂದು ಐಷಾರಾಮಿ ಕಾರ್ ಖರೀದಿಸಿದ್ದಾರೆ. ಮಗಳ ಆಸೆಯಂತೆ ಅವರು 2026ನೇ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಹೊಸ ಬಿಎಂಡಬ್ಲ್ಯು ಮಿನಿ ಕೂಪರ್ (BMW Mini Cooper) ಕಾರ್ ಖರೀದಿಸಿದ್ದು, ಈ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ದುಬಾರಿ ಬೆಲೆಯ ಕಾರ್
ಈ ಬಿಎಂಡಬ್ಲ್ಯು ಮಿನಿ ಕೂಪರ್ ಎಸ್ ಕನ್ವರ್ಟಿಬಲ್ ಕಾರಿನ ಬೆಲೆಯು ನಿಜಕ್ಕೂ ದುಬಾರಿಯಾಗಿದೆ. ಎಕ್ಸ್-ಶೋರೂಂನಲ್ಲಿ ₹58.50 ಲಕ್ಷದಿಂದ ಶುರು ಆಗುವುದು. ವಿವಿಧ ನಗರಗಳ ಆನ್-ರೋಡ್ ಬೆಲೆಗೆ ಅನುಗುಣವಾಗಿ ಸುಮಾರು ₹67–70 ಲಕ್ಷ ರೂಪಾಯಿ ಕೂಡ ಇರುವುದು.
ಮಗಳ ಆಸೆ ಇದು
ಮುದ್ದಿನ ಮಗಳು ತಾರಾ 4 ವರ್ಷ ಇದ್ದಾಗಲೇ ಈ ಕಾರ್ ಬೇಕು ಎಂದು ಹೇಳಿದ್ದರಂತೆ. ಅದರಂತೆ ಮಾಹಿ ವಿಜ್ ಈ ಕಾರ್ ಖರೀದಿ ಮಾಡಿದ್ದಾರೆ. ಈ ಬಗ್ಗೆ ಮಾಹಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, "ನನ್ನ ಮಗಳಿಗೆ ಕೇವಲ 4 ವರ್ಷವಿದ್ದಾಗ, ಅವಳು ಮಿನಿ ಕೂಪರ್ ಕಾರ್ ನೋಡಿ 'ಅಮ್ಮಾ, ನನಗೆ ಈ ಕಾರ್ ಬೇಕು' ಎಂದಳು. ಆ ಸಮಯದಲ್ಲಿ ಅದನ್ನು ಖರೀದಿಸಲಾಗಲಿಲ್ಲ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗಳಿಗೆ ಅಷ್ಟು ದುಬಾರಿ ವಸ್ತುವನ್ನು ನೀಡಬೇಕೇ? ಇದರ ಅಗತ್ಯವಿದೆಯೇ? ಎಂದೆಲ್ಲ ನಾನು ಯೋಚಿಸಿದ್ದೆ" ಎಂದು ಹೇಳಿದ್ದಾರೆ.
ಪ್ರೀತಿಯಿಂದ ಕೂಡಿದ ಸಂದೇಶವಿದು
"ಕನಸು ಕಾಣಲು ವಯಸ್ಸಿನ ಮಿತಿಯಿಲ್ಲ, ಆಸೆಗಳಿಗೆ ಬೆಲೆಯೂ ಇಲ್ಲ. ಇಂದು ನನ್ನ ಬಳಿ ಕಾರ್ ಖರೀದಿಸುವ ಸಾಮರ್ಥ್ಯವಿದೆ. ಇದು ಕೇವಲ ಐಷಾರಾಮಿ ಜೀವನವಲ್ಲ, ಬದಲಾಗಿ ಅವಳ ಹಾರೈಕೆಯಾಗಿದೆ. 'ನಿನ್ನ ಕನಸುಗಳು ಮುಖ್ಯ, ಸಾಧ್ಯವಾದರೆ ನಾನು ಅವುಗಳನ್ನು ನನಸು ಮಾಡುತ್ತೇನೆ ಎಂದು ಒಬ್ಬ ತಾಯಿ ತನ್ನ ಮಗಳಿಗೆ ಹೇಳುವ ಪ್ರೀತಿಯಿಂದ ಕೂಡಿದ ಸಂದೇಶವಿದು" ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
14 ವರ್ಷದ ದಾಂಪತ್ಯ
ಮಾಹಿ ಅವರು 14 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ್ದರು. ಮಾಹಿ ವಿಜ್ ಮತ್ತು ಜಯ್ ಭಾನುಶಾಲಿ ಅವರು ಲವ್ ಮ್ಯಾರೇಜ್ ಆಗಿದ್ದರು. ಇನ್ನು ಕಾರ್ ಖರೀದಿಸಿದ ಬಳಿಕ ಜಯ್ ಜೊತೆಗೆ ಅವರ ಮಗಳು ತಾರಾ, ದತ್ತು ಮಕ್ಕಳ ಜೊತೆ ಕಾರ್ ರೈಡ್ ಹೋಗಿದ್ದಾರೆ. ಈ ವಿಡಿಯೋವನ್ನು ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

